More

    ಮೋದಿ ಕಣ್ಣಿನ ಆಸ್ಪತ್ರೆಗೆ ದಿಢೀರ್​ ಬೀಗ: ರೋಗಿಗಳ ಪರದಾಟ, ಬಯಲಲ್ಲೇ ತಪಾಸಣೆ ಮಾಡುತ್ತಿರುವ ಸಿಬ್ಬಂದಿ

    ಬೆಂಗಳೂರು: ರಾಜಾಜಿನಗರದಲ್ಲಿರುವ ಡಾ.ಎಂ.ಸಿ. ಮೋದಿ ಕಣ್ಣಿನ ಆಸ್ಪತ್ರೆಗೆ ಏಕಾಏಕಿ ಬೀಗ ಹಾಕಲಾಗಿದ್ದು, ಆಸ್ಪತ್ರೆ ಸಿಬ್ಬಂದಿ ಬದುಕು ಅಂತ್ರಕ್ಕೆ ಸಿಲುಕಿರುವುದು ಮಾತ್ರವಲ್ಲ, ರೋಗಿಗಳಿಗೂ ಆತಂಕ ಶುರುವಾಗಿದೆ.

    ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ಅಲ್ಲಿನ ವೈದ್ಯರಿಗೆ ತೊಂದರೆ ಆಗುತ್ತಿದೆ. ಅಲ್ಲದೆ, ಕನ್ನಡಕಕ್ಕಾಗಿ ಹಣ ಕಟ್ಟಿದ್ದ ರೋಗಿಗಳು, ವಯೋವೃದ್ಧರು ಆಸ್ಪತ್ರೆ ಬಾಗಿಲಲ್ಲಿ ಕಾಯುತ್ತಿದ್ದಾರೆ. ಇನ್ನು ಪ್ಯಾರಾಮೆಡಿಕಲ್​ ವಿದ್ಯಾರ್ಥಿಗಳಿಗೆ ಡಿ.12ರಿಂದ ಎಕ್ಸಾಂ ಇದ್ದು, ಪ್ರವೇಶ ಪತ್ರಗಳೂ ಈ ಆಸ್ಪತ್ರೆಯ ಒಳಗೇ ಇದೆ. ಏಕಾಏಕಿ ಬೀಗ ಹಾಕಿರುವುದರಿಂದ ಎಲ್ಲರಿಗೂ ಆತಂಕ ಶುರುವಾಗಿದೆ. ಕಳೆದ ಮೂರು ದಿನಗಳಿಂದ ಆಸ್ಪತ್ರೆ ಹೊರಗಡೆಯೇ ರೋಗಿಗಳನ್ನು ಆಸ್ಪತ್ರೆ ಸಿಬ್ಬಂದಿ ತಪಾಸಣೆ ಮಾಡುತ್ತಿದ್ದಾರೆ.

    ಈ ಪ್ರಕರಣ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಮೋದಿ ಆಸ್ಪತ್ರೆ ಸಿಬ್ಬಂದಿ ಪರ ವಕೀಲೆ ಆಶಾ, 2014ರಿಂದಲೂ ಕೋರ್ಟ್​ನಲ್ಲಿ ಮೋದಿ ಆಸ್ಪತ್ರೆಯ ವಾರಸುದಾರಿಕೆ ಕೇಸ್ ನಡೀತಾ ಇದೆ. 2014ರಲ್ಲಿ ದೊಡ್ಡ ಮಟ್ಟದ ಗಲಾಟೆಯಾಗಿತ್ತು. ಆಗ ಸರ್ಕಾರ, ತಹಸೀಲ್ದಾರ್​ರನ್ನು ಆಡಳಿತಾಧಿಕಾರಿಯಾಗಿ ನಿರ್ವಹಿಸಿತ್ತು. 2017ರಲ್ಲಿ ಸುಭಾಷ್ ಮೋದಿ ಸ್ಟೇ ತಂದಿದ್ದರು. ಬಳಿಕ ಸಿಬ್ಬಂದಿ ಅದನ್ನ ವೆಕೇಟ್ ಮಾಡಿಸಿದ್ವಿ. ಇದೀಗ ಏಕಾಏಕಿ ನಾಲ್ವರನ್ನ ಕೆಲಸದಿಂದ ವಜಾ ಮಾಡಿದ್ದಾರೆ. ನಾಲ್ವರನ್ನ ವಾಪಸ್ ಪಡೆದ್ರೆ ಮಾತ್ರ ನಾವು ಕೆಲ್ಸಕ್ಕೆ ಹೋಗ್ತೀವಿ ಎಂದು ಸಿಬ್ಬಂದಿ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಎಸ್​ಸಿ ಕಾಲೇಜ್ ನಡೀತಾ ಇದೆ. ಮುಂದಿನ ವಾರ ಎಕ್ಸಾಂ ಇದೆ, ಹಾಲ್ ಟಿಕೇಟ್ ಆಸ್ಪತ್ರೆಯೊಳಗೆ ಇದೆ. ಕೂಡಲೇ ಪೊಲೀಸರು ಮಹಜರು ಮಾಡಿ ಆಸ್ಪತ್ರೆ ಓಪನ್ ಮಾಡಿಸಬೇಕು ಎಂದು ಆಗ್ರಹಿಸಿದರು.

    ಬೆಂಗಳೂರಲ್ಲಿ ಮೋದಿ ಆಸ್ಪತ್ರೆಗೆ ಏಕಾಏಕಿ ಬೀಗ: ಸಿಬ್ಬಂದಿ ಬದುಕು ಅತಂತ್ರ, 3 ದಿನದಿಂದ ಬಾಗಿಲಲ್ಲೇ ಕುಳಿತು ಪ್ರತಿಭಟನೆ

    ಮಗನ ಹತ್ಯೆಗೆ ತಂದೆಯಿಂದಲೇ ಸುಪಾರಿ! ಹುಬ್ಬಳ್ಳಿಯಲ್ಲಿ ಖ್ಯಾತ ಉದ್ಯಮಿ ಪುತ್ರನ ಬದುಕು ದುರಂತ ಅಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts