More

    ಉತ್ತರ ಕನ್ನಡಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ವಿಚಾರ ಅವೇಶನದಲ್ಲಿ ಶಾಸಕರು ಧ್ವನಿ ಎತ್ತಲಿ-ಅನಂತಮೂರ್ತಿ ಹೆಗಡೆ

    ಶಿರಸಿ: ಉತ್ತರ ಕನ್ನಡದಲ್ಲಿ ಮೆಡಿಕಲ್ ಕಾಲೇಜ್‌ನೊಂದಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವಂತೆ ಆಗ್ರಹಿಸಿ ಡಿಸೆಂಬರ್ 7 ರಂದು ಬೆಳಗಾವಿ ಸುವರ್ಣ ವಿಧಾನಸೌಧ ಎದುರು ಪ್ರತಿಭಟನೆ ನಡೆಸಲಾಗುವುದು. ಆದರೆ, ಸದನದ ಒಳಗೆ ಜಿಲ್ಲೆಯ ಎಲ್ಲ ಶಾಸಕರು ಆಸ್ಪತ್ರೆಯ ಬಗ್ಗೆ ಮಾತನಾಡಬೇಕು ಎಂದು ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ ತಿಳಿಸಿದರು.
    ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಸಂಬಂಧ ಶಿರಸಿಯ ತಹಸೀಲ್ದಾರ್ ಕಚೇರಿಯ ಎದುರು ನ.27 ರಿಂದ ಅವರು ಇತರ ಹಲವು ಸಂಘಟನೆಗಳ ಮುಖಂಡರ ಜತೆ ಧರಣಿ ನಡೆಸಿದ್ದಾರೆ. ಡಿಸೆಂಬರ್ 7 ರಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಭಾನುವಾರ ಶಿರಸಿಯಲ್ಲಿ ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದರು.
    ಮೆಡಿಕಲ್ ಕಾಲೇಜ್ ಇಲ್ಲದೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿ ಯಂತ್ರ ಪೂರೈಸಿದರೆ ಸಾಧ್ಯವಿಲ್ಲ. ತಜ್ಞ ವೈದ್ಯರ ಅವಶ್ಯಕತೆ ಇದೆ. ಹೃದ್ರೋಗ ಸಂಬAಧ ಕ್ಯಾಥ ಲ್ಯಾಬ್, ಟ್ರಾಮಾ ಸೆಂಟರ್, ನರ ರೋಗ, ಕ್ಯಾನ್ಸರ್, ಲೀವರ್ ಮುಂತಾದ ತಜ್ಞ ವೈದ್ಯರ ಅವಶ್ಯಕತೆ ಇದೆ. ಉತ್ತರ ಕನ್ನಡ ಜಿಲ್ಲೆಯು ವಿಭಿನ್ನ ಭೌಗೋಳಿಕ ಪರಿಸ್ಥಿತಿಯನ್ನು ಹೊಂದಿದ್ದು, ಇದರಿಂದ ಜಿಲ್ಲೆಗೆ ಎರಡು ಮೆಡಿಕಲ್ ಕಾಲೇಜ್ ಹಾಗೂ ಅದರ ಜತೆ ಆಸ್ಪತ್ರೆಗಳು ಬೇಕು. ಅದರಿಂದ ನೂರಾರು ವೈದ್ಯರು ದಿನದ 24 ಗಂಟೆ ಲಭ್ಯವಾಗುತ್ತಾರೆ ಎಂದರು.
    ಮಂಗಳೂರು ಭಾಗದಲ್ಲಿ 8 ಮೆಡಿಕಲ್ ಕಾಲೇಜ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿವೆ. ನಮ್ಮ ಜಿಲ್ಲೆಯಲ್ಲಿ ಒಂದೇ ಒಂದು ಕೂಡ ಇಲ್ಲ. ಜಿಲ್ಲೆಯವರಿಗೂ ನಮಗೂ ನೆಮ್ಮದಿಯಿಂದ ಬದುಕುವ ಹಕ್ಕಿಲ್ಲವೇ ಎಂದು ಪ್ರಶ್ನಿಸಿದರು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಗೆ ತಕ್ಷಣ ಚಿಕಿತ್ಸೆ ಕೊಡಿಸಲು ಮೂರು ಗಂಟೆ ಪ್ರಯಾಣ ಮಾಡಬೇಕಾಗಿದೆ. ಏಷ್ಟೋ ಬಾರಿ ಮಾರ್ಗ ಮಧ್ಯೆ ಸಾವು ಸಂಭವಿಸುತ್ತಿದೆ ಇದಕ್ಕೆ ಯಾರು ಹೊಣೆ? ಎಂದರು.
    ಧರಣಿಯಲ್ಲಿ ಕರ್ನಾಟಕ ಅನ್ನದಾತ ರೈತ ಸಂಘದ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ಕರವೇ ಜನಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ ಹರಿಕಾಂತ, ಸಾಮಾಜಿಕ ಕಾರ್ಯಕರ್ತ ಕೇಮು ವಂದಿಗೆ, ಸಂತೋಷ್ ನಾಯ್ಕ್ ಬ್ಯಾಗದ್ದೆ ಇನ್ನೂ 15 ಸಂಘಟನೆಗಳ ಪ್ರತಿನಿಽಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ಇದನ್ನೂ ಓದಿ: ಕಸ್ತೂರಿ ರಂಗನ್‌ ವರದಿ ವಿರೋಧಿಸಿ ಐದು ಸಾವಿರಕ್ಕೂ ಹೆಚ್ಚು ಅರಣ್ಯವಾಸಿಗಳಿಂದ ಬೃಹತ್‌ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts