More

    ಶಾಸಕ ಕೆ.ಶಿವನಗೌಡ ನಾಯಕ ತವರು ಪ್ರೇಮದಿಂದ ದೇವದುರ್ಗ ತಾಲೂಕು ಒಡೆಯುತ್ತಿದ್ದಾರೆ; ತಾಲೂಕು ಐಕ್ಯ ಹೋರಾಟ ಸಮಿತಿ ಆರೋಪ

    ದೇವದುರ್ಗ: ಹೊಸ ತಾಲೂಕು ರಚನೆ ವಿರೋಧಿಸಿ ಹಾಗೂ ಅಖಂಡ ದೇವದುರ್ಗ ತಾಲೂಕು ಉಳಿವಿಗೆ ಒತ್ತಾಯಿಸಿ ಅಖಂಡ ದೇವದುರ್ಗ ತಾಲೂಕು ಐಕ್ಯ ಹೋರಾಟ ಸಮಿತಿ ಅಂಬೇಡ್ಕರ್ ವೃತ್ತದಿಂದ ಮಿನಿವಿಧಾನಸೌಧವರೆಗೆ ಜನಾಕ್ರೋಶ ರ‌್ಯಾಲಿ ಬುಧವಾರ ನಡೆಸಿತು.

    ವಿವಿಧ ಸಂಘಟನೆಗಳ ಸಾವಿರಾರು ಮುಖಂಡರು ತಹಸಿಲ್ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿ ತಾಲೂಕು ಒಡೆಯುವ ರಾಜಕೀಯ ನಾಯಕರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ಅಖಂಡ ತಾಲೂಕು ಉಳಿದರೆ ನಮ್ಮ ಸಂಸ್ಕೃತಿ, ಸಂಪ್ರದಾಯ, ಜೀವನ ಪದ್ಧತಿ ಉಳಿಯಲಿದೆ. ತಾಲೂಕು ಒಡೆದರೆ, ಅಖಂಡತೆಗೆ ಧಕ್ಕೆ ಬರಲಿದೆ. ಶಾಸಕ ಕೆ.ಶಿವನಗೌಡ ನಾಯಕ ತವರು ಪ್ರೇಮದಿಂದ ತಾಲೂಕು ಒಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೂಡಲೇ ಅರಕೇರಾ ಹೊಸ ತಾಲೂಕು ರಚನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಮಾಡಿರುವುದು ಕೈಬಿಡಬೇಕು. ಅರಕೇರಾ, ಜಾಲಹಳ್ಳಿ, ಗಬ್ಬೂರು ಹೊಸ ತಾಲೂಕು ರಚನೆಗೆ ಅವಕಾಶ ನೀಡಬಾರದು. ಅಖಂಡ ದೇವದುರ್ಗ ತಾಲೂಕು ಉಳಿಸಿ, ಸಮಗ್ರ ಅಭಿವೃದ್ಧಿ ಮಾಡಬೇಕು. ತಾಲೂಕಿನ ಸಮಸ್ಯೆಗಳಿಗೆ ಸರ್ಕಾರ ವಿಶೇಷ ಕಾಳಜಿವಹಿಸಿ, ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಸಮಿತಿ ಸಂಚಾಲಕ ಹನುಮಂತಪ್ಪ ಕಾಕರಗಲ್, ಮುಖಂಡರಾದ ಶಿವಪ್ಪ ಮಲಕನಮರಡಿ, ಭೀಮರಾಯ ಜರದಬಂಡಿ, ಜಿ.ಬಸವರಾಜ ನಾಯಕ, ಪ್ರಭಾಕರ ಪಾಟೀಲ್, ರಂಗಪ್ಪ ಗೋಸಲ್, ಹೈದರ್ ಅಲಿ, ಶಿವರಾಜ ನಾಯಕ ಕೊತ್ತದೊಡ್ಡಿ, ಮಲ್ಲಿಕಾರ್ಜುನ, ಭೂತಪ್ಪ ದೇವರಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts