More

    ಕಲ್ಲು ಕ್ವಾರಿ ಕುಸಿದು 8 ಕಾರ್ಮಿಕರು ದುರಂತ ಸಾವು: ಸುಳಿವೇ ಸಿಗದ ನಾಲ್ವರಿಗಾಗಿ ತೀವ್ರ ಶೋಧ

    ಐಜ್ವಾಲ: ಕಲ್ಲು ಕ್ವಾರಿ ಕುಸಿದು 8 ಮಂದಿ ಮೃತಪಟ್ಟಿರುವ ಘಟನೆ ಮಿಜೋರಾಂನಲ್ಲಿ ನಡೆದಿದೆ. ಸೋಮವಾರ ಕಲ್ಲು ಕ್ವಾರಿ ಕುಸಿದು ಅನೇಕರು ಅದರಡಿಯಲ್ಲಿ ಸಿಲುಕಿದ್ದರು. ಇಂದು (ನ.15) ಮುಂಜಾನೆ 8 ಮಂದಿಯ ಮೃತದೇಹವನ್ನು ಹೊರಗಡೆ ತೆಗೆಯಲಾಗಿದ್ದು, ನಾಲ್ವರು ಸುಳಿವು ಇನ್ನು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

    ಮೃತರೆಲ್ಲರು ಬಿಹಾರದ ಕಾರ್ಮಿಕರು. ಸುಳಿವೇ ಇಲ್ಲದ ನಾಲ್ವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಶವಪರೀಕ್ಷೆಯ ಬಳಿಕ ಮೃತದೇಹಗಳ ಗುರುತನ್ನು ಪತ್ತೆಹಚ್ಚಲಾಗುವುದು. ಉಳಿದ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರಿಸಲಾಗುವುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಿಳಿಸಿದೆ.

    ಮೂಲಗಳ ಪ್ರಕಾರ, ನಾಥಿಯಾಲ್ ಜಿಲ್ಲೆಯ ಮೌದರ್ಹ್‌ನಲ್ಲಿರುವ ಖಾಸಗಿ ಕಂಪನಿಯ ಕಾರ್ಮಿಕರು ಕೆಲಸದ ನಡುವೆ ತಮ್ಮ ಊಟದ ವಿರಾಮದಿಂದ ಬಳಿಕ ಮತ್ತೆ ಕೆಲಸಕ್ಕೆ ಮರಳಿದ್ದರು. ಆಗ ಕಲ್ಲು ಕ್ವಾರಿ ಕುಸಿದಿದೆ. ಕಾರ್ಮಿಕರ ಜೊತೆಗೆ ಐದು ಹಿಟಾಚಿ ಮತ್ತು ಇತರ ಡ್ರಿಲ್ಲಿಂಗ್ ಯಂತ್ರಗಳು ಹೂತು ಹೋಗಿವೆ ಎಂದು ಮೂಲಗಳು ತಿಳಿಸಿವೆ.

    ಲೀಟ್ ಗ್ರಾಮ ಮತ್ತು ನಾಥಿಯಾಲ್ ಪಟ್ಟಣದ ಸ್ವಯಂಸೇವಕರು ತಕ್ಷಣ ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ತಲುಪಿ, ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ, ಗಡಿ ಭದ್ರತಾ ಪಡೆ ಮತ್ತು ಅಸ್ಸಾಂ ರೈಫಲ್ಸ್ ತಂಡ ಸಹ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡುತ್ತಿದೆ. (ಏಜೆನ್ಸೀಸ್​)

    ಶೀಘ್ರದಲ್ಲೇ ಇ-ಕಾಮರ್ಸ್​ ದೈತ್ಯ ಕಂಪನಿ ಅಮೆಜಾನ್​ನಲ್ಲಿ 10 ಸಾವಿರ ಉದ್ಯೋಗ ಕಡಿತ! ಕಾರಣ ಹೀಗಿದೆ…

    ಹಿರಿಯ ನಟ ಕೃಷ್ಣ ವಿಧಿವಶ: ತಾಯಿ ಮತ್ತು ಅಣ್ಣನ ಬೆನ್ನಲ್ಲೇ ತಂದೆಯನ್ನು ಕಳ್ಕೊಂಡ ನಟ ಮಹೇಶ್​ ಬಾಬು

    VIDEO: ಸದ್ದು ಮಾಡುತ್ತಿವೆ ಕಿರಿಕ್ ಹುಡುಗಿಯ ಹಾಟ್ ಅವತಾರ; ತುಂಡುಡುಗೆಯಲ್ಲಿ ಡ್ಯಾನ್ಸ್ ಮಾಡಿ ಚೇತರಿಸಿಕೊಂಡಿದ್ದೇನೆ ಎಂದ ನಟಿ​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts