More

    ಶೀಘ್ರದಲ್ಲೇ ಇ-ಕಾಮರ್ಸ್​ ದೈತ್ಯ ಕಂಪನಿ ಅಮೆಜಾನ್​ನಲ್ಲಿ 10 ಸಾವಿರ ಉದ್ಯೋಗ ಕಡಿತ! ಕಾರಣ ಹೀಗಿದೆ…

    ನವದೆಹಲಿ: ಸಾಮಾಜಿಕ ಜಾಲತಾಣ ದೈತ್ಯ ಕಂಪನಿಗಳಲ್ಲಿ ಒಂದಾದ ಟ್ವಿಟರ್ (Twitter) ಉದ್ಯೋಗ ಕಡಿತ ಮಾಡಿದ ಬೆನ್ನಲ್ಲೇ ಇದೀಗ ಇ ಕಾಮರ್ಸ್ (E commerce)​ ದೈತ್ಯ ಕಂಪನಿ ಅಮೆಜಾನ್ (Amazon)​ ಸಹ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮುಂದಾಗಿದೆ ಎಂಬ ಆಘಾತಕಾರಿ ವರದಿ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.

    ಸುಮಾರು 10 ಸಾವಿರ ಉದ್ಯೋಗ ಕಡಿತಕ್ಕೆ ಅಮೆಜಾನ್ (Amazon)​ ಮುಂದಾಗಿದೆ ಎನ್ನಲಾಗಿದೆ. ಕಳೆದ ಕೆಲವು ತ್ರೈಮಾಸಿಕದಲ್ಲಿ ನಿರೀಕ್ಷಿತ ಲಾಭ ಬಂದಿಲ್ಲದೇ ಇರುವುದರಿಂದ ಉಳಿತಾಯ ಕ್ರಮದ ಅಡಿಯಲ್ಲಿ ಉದ್ಯೋಗ ಕಡಿತಕ್ಕೆ ಕಂಪನಿ ಚಿಂತನೆ ನಡೆಸುತ್ತಿದ್ದು, ಶೀಘ್ರವೇ ಕೆಲ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ನ್ಯೂಯಾರ್ಕ್​ ಟೈಮ್ಸ್​ ವರದಿ ಮಾಡಿದೆ.

    ಒಂದು ವೇಳೆ 10 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸಿದ್ದಲ್ಲಿ ಅಮೆಜಾನ್​ (Amazon)​ ಇತಿಹಾಸದಲ್ಲೇ ಇದು ಬಹು ದೊಡ್ಡ ಉದ್ಯೋಗ ಕಡಿತವಾಗಲಿದೆ. ಉದ್ಯೋಗಿಗಳ ಬಲದ ಶೇ. 1ರಷ್ಟು ಪ್ರಮಾಣ ಇದಾಗಿದೆ. ವಿಶ್ವದಾದ್ಯಂತ ಸುಮಾರು 1.6 ಮಿಲಿಯನ್​ ಉದ್ಯೋಗಿಗಳು ಅಮೆಜಾನ್​ನಲ್ಲಿ ಕೆಲಸ ಮಾಡುತ್ತಿದ್ದಾರೆ.

    ಅಮೆಜಾನ್​(Amazon)​ನ ಚಿಲ್ಲರೆ ವಿಭಾಗ ಮತ್ತು ಮಾನವ ಸಂಪನ್ಮೂಲಗಳ ಜೊತೆಗೆ ಅಲೆಕ್ಸಾ ಧ್ವನಿ ಸಹಾಯಕಕ್ಕೆ ಜವಾಬ್ದಾರರಾಗಿರುವ ಸಾಧನಗಳ ತಂಡವು ಉದ್ಯೋಗ ಕಡಿತಕ್ಕೆ ಒಳಗಾಗಲಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಒಂದು ತಿಂಗಳ ಅವಧಿಯ ಪರಿಶೀಲನೆಯ ಬಳಿಕ ಕಂಪನಿಯಲ್ಲಿನ ಕೆಲವು ಲಾಭದಾಯಕವಲ್ಲದ ಘಟಕಗಳಲ್ಲಿನ ಉದ್ಯೋಗಿಗಳಿಗೆ ಇತರ ಅವಕಾಶಗಳನ್ನು ಹುಡುಕಿಕೊಳ್ಳುವಂತೆ ಎಚ್ಚರಿಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. (ಏಜೆನ್ಸೀಸ್​)

    ಹಿರಿಯ ನಟ ಕೃಷ್ಣ ವಿಧಿವಶ: ತಾಯಿ ಮತ್ತು ಅಣ್ಣನ ಬೆನ್ನಲ್ಲೇ ತಂದೆಯನ್ನು ಕಳ್ಕೊಂಡ ನಟ ಮಹೇಶ್​ ಬಾಬು

    ಪದವೀಧರರಿಗೆ ಮುಂಬಡ್ತಿ, ಶಾಲಾ ಶಿಕ್ಷಕರಿಗೆ ಗುಡ್​ನ್ಯೂಸ್; ಶೇ.60 ಹುದ್ದೆಗೆ ನೇರ ನೇಮಕಾತಿ, ಶೇ.40 ಹುದ್ದೆ ಬಡ್ತಿ

    ಎಲ್ಲರ ಮುಂದೆ ಬೈದ್ರು ಅಂತ ಈ ಹುಡುಗಿ ಹೀಗೆ ಮಾಡಿಕೊಳ್ಳೋದಾ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts