More

    ಹಿರಿಯ ನಟ ಕೃಷ್ಣ ವಿಧಿವಶ: ತಾಯಿ ಮತ್ತು ಅಣ್ಣನ ಬೆನ್ನಲ್ಲೇ ತಂದೆಯನ್ನು ಕಳ್ಕೊಂಡ ನಟ ಮಹೇಶ್​ ಬಾಬು

    ಹೈದರಾಬಾದ್​: ತೆಲುಗು ಚಿತ್ರರಂಗದ ಸೂಪರ್​ಸ್ಟಾರ್​ ಹಾಗೂ ಹಿರಿಯ ನಟ ಕೃಷ್ಣ (Telugu Actor Krishna) ಅವರು ಇಂದು (ನ.15) ಕೊನೆಯುಸಿರೆಳೆದಿದ್ದಾರೆ. ಕೃಷ್ಣ ಅವರು ಪ್ರಖ್ಯಾತ ನಟ ಮಹೇಶ್​ ಬಾಬು (Mahesh Babu) ಅವರ ತಂದೆ. ಕೆಲವು ದಿನಗಳ ಹಿಂದಷ್ಟೇ ಸಹೋದರ ಮತ್ತು ತಾಯಿಯನ್ನು ಕಳೆದುಕೊಂಡಿದ್ದ ಮಹೇಶ್​ ಬಾಬು ಇದೀಗ ತಂದೆಯನ್ನು ಕಳೆದುಕೊಂಡಿದ್ದಾರೆ.

    ಕೃಷ್ಣ ಅವರು ಉಸಿರಾಟದ ತೊಂದರೆ ಜೊತೆಗೆ ಬಹು ಅಂಗಾಂಗ ವೈಫಲ್ಯ ಅನುಭವಿಸುತ್ತಿದ್ದರು. ನಿನ್ನೆ ಸಂಜೆ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಕೃಷ್ಣ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

    ಕೃಷ್ಣ ಅವರಿಗೆ 80 ವರ್ಷ ವಯಸ್ಸಾಗಿತ್ತು. ಸುಮಾರು 350ಕ್ಕೂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಲವಾರು ಪ್ರಯೋಗಾತ್ಮಕ ಚಿತ್ರಗಳಿಂದ ಕೃಷ್ಣ ಅವರು ಹೆಸರುವಾಸಿಯಾಗಿದ್ದರು. ಪತ್ತೇದಾರಿ, ಐತಿಹಾಸಿಕ, ಪೌರಾಣಿಕ, ಪಾಶ್ಚಾತ್ಯ, ಆಕ್ಷನ್ ಹಾಗೂ ಕೌಬಾಯ್ ಚಲನಚಿತ್ರಗಳು ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಅಭಿನಯಿಸುವ ಮೂಲಕ ಜನಮನ್ನಣೆ ಗಳಿಸಿದ್ದರು.

    1965ರಲ್ಲಿ ತೆರೆಕಂಡ ಥೇನೆ ಮನಸುಲು ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಕೃಷ್ಣ ಅವರು ಅನೇಕ ಗಮನಾರ್ಹ ಪಾತ್ರಗಳು ಮತ್ತು ಚಲನಚಿತ್ರಗಳನ್ನು ಮಾಡಿದದ್ದಾರೆ. ಅಲ್ಲೂರಿ ಸೀತಾರಾಮರಾಜು, ಪಾಂಡಂಟಿ ಕಪುರಂ, ಸಿಂಹಾಸನಂ, ಗುಡಾಚಾರಿ 116, ಜೇಮ್ಸ್ ಬಾಂಡ್ 777 ಹಾಗೂ ಏಜೆಂಟ್ ಗೋಪಿ ಮತ್ತಿತರ ಬ್ಲಾಕ್​ಬಸ್ಟರ್​ ಸಿನಿಮಾಗಳನ್ನು ನೀಡಿದ್ದಾರೆ.

    ನಟನೆ ಮಾತ್ರವಲ್ಲದೆ, ನಿರ್ದೇಶಕರಾಗಿಯೂ ತಮ್ಮ ಛಾಪು ಮೂಡಿಸಿರುವ ಕೃಷ್ಣ, 17 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾ ರಂಗದಲ್ಲಿನ ತಮ್ಮ ಸೇವೆಗಾಗಿ ಕೃಷ್ಣ ಅವರು 2009ರಲ್ಲಿ ಕೇಂದ್ರ ಸರ್ಕಾರ ಕೊಡ ಮಾಡುವ ಪ್ರತಿಷ್ಠಿತ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಕೃಷ್ಣ ಅವರು 1943 ಮೇ 31ರಂದು ಗುಂಟೂರು ಜಿಲ್ಲೆಯ ಬರ್ರಿಪಾಳ್ಯಂನಲ್ಲಿ ಜನಿಸಿದರು. ಇಂದಿರಾ ದೇವಿ ಮತ್ತು ವಿಜಯಾ ಲಕ್ಷ್ಮೀ ಎಂಬುವರನ್ನು ಮದುವೆಯಾದರು. ಕೃಷ್ಣ ಅವರಿಗೆ ಐದು ಮಕ್ಕಳಿದ್ದಾರೆ. ರಮೇಶ್​ ಬಾಬು (ಇತ್ತೀಚೆಗಷ್ಟೇ ಇವರು ಸಹ ಮರಣ ಹೊಂದಿದ್ದಾರೆ), ಮಹೇಶ್​ ಬಾಬು, ಹೆಣ್ಣು ಮಕ್ಕಳಾದ ಪದ್ಮಾವತಿ, ಮಂಜುಳ ಮತ್ತು ಪ್ರಿಯದರ್ಶಿನಿ ಹೆಸರಿನ ಐವರು ಮಕ್ಕಳಿದ್ದಾರೆ.

    ಇದೀಗ ಕೃಷ್ಣ ಅವರನ್ನು ಕಳೆದುಕೊಂಡಿರುವುದು ಟಾಲಿವುಡ್​ ಇಂಡಸ್ಟ್ರಿಗೆ ತುಂಬಲಾರದ ನಷ್ಟವಾಗಿದೆ. ಮಹೇಶ್​ ಬಾಬು ಅವರು 2022ರ ಜನವರಿಯಲ್ಲಿ ಸಹೋದರ ರಮೇಶ್​ ಬಾಬು (Ramesh Babu) ಅವರನ್ನು ಕಳೆದುಕೊಂಡರು. ಇದಾದ ಬಳಿಕ ಸೆಪ್ಟೆಂಬರ್​ನಲ್ಲಿ ತಾಯಿ ಇಂದಿರಾ ದೇವಿ (Indira Devi) ಅವರನ್ನು ಕಳೆದುಕೊಂಡರು. ಇದೀಗ ತಮ್ಮ ತಂದೆ ಕೃಷ್ಣ ಅವರನ್ನು ಕಳೆದುಕೊಂಡಿದ್ದು, ಮಹೇಶ್​ ಬಾಬು ಅವರ ಪಾಲಿಗೆ 2022 ಕರಾಳ ವರ್ಷವಾಗಿದೆ. (ಏಜೆನ್ಸೀಸ್​)

    ಬಲವಂತದ ಮತಾಂತರ ಡೇಂಜರ್: ಸುಪ್ರೀಂ ಕಳವಳ; ರಾಷ್ಟ್ರೀಯ ಭದ್ರತೆಗೆ ಅಪಾಯ, ಕೇಂದ್ರದ ಕ್ರಮಗಳ ಬಗ್ಗೆ ಪ್ರಶ್ನೆ

    ಸರ್ಕಾರಿ ಕಾರ್ನರ್​ | ವೇತನ ಬಡ್ತಿ ತಡೆ ನಿಯಮಾವಳಿ

    ಕನ್ನಡತಿ ಜತೆಗೆ ಟಾಲಿವುಡ್​ ನಟ ನಾಗಶೌರ್ಯ ಮದುವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts