More

    46 ಕೋಟಿ ರೂ. ಬೆಲೆ ಬಾಳುವ ಮಿಸ್​ ಯುನಿವರ್ಸ್​ ಕಿರೀಟ; ಅಷ್ಟಕ್ಕೂ ಇದರಲ್ಲಿ ಇರೋದೇನು?

    ನ್ಯೂ ಓರ್ಲಿಯನ್ಸ್: 71ನೇ ಆವೃತ್ತಿಯ ವಿಶ್ವ ಸುಂದರಿ ಪಟ್ಟ ಈ ಬಾರಿ ಯುಎಸ್ ಪಾಲಾಗಿದ್ದು ಯುಎಸ್​ನ ಆರ್​​ ಬೊನಿ ಗೇಬ್ರಿಯಲ್ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇಂದು (ಜ.15) ಲೂಸಿಯಾನದ ನ್ಯೂ ಓರ್ಲಿಯನ್ಸ್​​ನಲ್ಲಿರುವ ನ್ಯೂ ಓರ್ಲಿಯನ್ಸ್ ಮೋರಿಯಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ವಿಶ್ವಸುಂದರಿ ಕಾರ್ಯಕ್ರಮದಲ್ಲಿ ನಡೆದಿದೆ. ಇದೀಗ ಮಿಸ್​ ಯುನಿವರ್ಸ್​ ಕಿರೀಟದ ಬೆಲೆ ಬಹಿರಂಗವಾಗಿದ್ದು ಅದು ಬರೋಬ್ಬರಿ 46 ಕೋಟಿ ರೂ. ಬೆಲೆ ಬಾಳುತ್ತದೆ ಎಂದು ಹೇಳಲಾಗುತ್ತಿದೆ.

    46 ಕೋಟಿ ರೂ. ಬೆಲೆ ಬಾಳುವ ಮಿಸ್​ ಯುನಿವರ್ಸ್​ ಕಿರೀಟ; ಅಷ್ಟಕ್ಕೂ ಇದರಲ್ಲಿ ಇರೋದೇನು?

    ಇಂದು (15-03-2023) ನಡೆದ 2022 ರ ಕಿರೀಟವು ಪಿಯರ್ ಹಣ್ಣಿನ ಆಕಾರದ ನೀಲಮಣಿಗಳಿಂದ ಸುತ್ತುವರಿಯಲ್ಪಟ್ಟಿದ್ದು ವಜ್ರಗಳಿಂದ ಆವೃತವಾಗಿದೆ. “ಫೋರ್ಸ್ ಫಾರ್ ಗುಡ್” ಹೆಸರಿನ ಈ ಕಿರೀಟ, 993 ಕಲ್ಲುಗಳಿಂದ ಅಲಂಕೃತವಾಗಿದೆ. ಇದರಲ್ಲಿ 110.83 ಕ್ಯಾರೆಟ್ ಇರುವ ನೀಲಮಣಿ ಮತ್ತು 48.24 ಕ್ಯಾರೆಟ್ ಇರುವ ಬಿಳಿ ವಜ್ರವನ್ನು ಹೊಂದಿದೆ.

    46 ಕೋಟಿ ರೂ. ಬೆಲೆ ಬಾಳುವ ಮಿಸ್​ ಯುನಿವರ್ಸ್​ ಕಿರೀಟ; ಅಷ್ಟಕ್ಕೂ ಇದರಲ್ಲಿ ಇರೋದೇನು?

    ಕಿರೀಟದ ಮೇಲ್ಭಾಗದಲ್ಲಿ 45.14-ಕ್ಯಾರೆಟ್ ರಾಯಲ್ ಬ್ಲೂ ನೀಲಮಣಿ ಇದೆ. ಅದರ ಗಾಢವಾದ ನೀಲಿ ಬಣ್ಣವು ಅವಿರತ ಪ್ರಯತ್ನದ ಮೂಲಕ ಒಳ್ಳೆಯತನವನ್ನು ಕಂಡುಕೊಂಡು ಉಜ್ವಲ ಭವಿಷ್ಯದ ಭರವಸೆಯ ಸಂದೇಶವನ್ನು ನೀಡುತ್ತಿದೆ. (ಏಜೆನ್ಸೀಸ್​)\

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts