More

    ಶಿರಸಿಯಲ್ಲಿ ಎನ್ವಿರಾನ್​ಮೆಂಟಲ್ ಯುನಿವರ್ಸಿಟಿ: ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

    ಉತ್ತರಕನ್ನಡ: ಇಂದು ಶಿರಸಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದು ಶಿರಸಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಶ್ರೀ ಮಾರಿಕಾಂಬಾ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮ ನಡೆದಿದ್ದು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್​ಕುಮಾರ ಸೇರಿ ಇತರರು ಭಾಗಿಯಾಗಿದ್ದಾರೆ. ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದ ಮುಖ್ಯಮಂತ್ರಿಗಳು, 270ಕೋಟಿ ರೂ. ವೆಚ್ಚದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

    ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನಾ ಸಮಾರಂಭವಾದ ನಮ್ಮ ಕಾಗೇರಿ ನಮ್ಮ ಹೆಮ್ಮೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಈ ಹಿನ್ನಲೆಯಲ್ಲಿ ಅಭಿಮಾನಿಗಳಿಂದ ಬೈಕ್ ರ್ಯಾಲಿ ನಡೆಸಲಿದ್ದಾರೆ.

    ಈ ಸಂದರ್ಭ ಶಿರಸಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿದ ಮುಖ್ಯಮಂತ್ರಿ ಬೊಮ್ಮಾಯಿ ಅನೇಕ ಘೋಷಣೆಗಳನ್ನೂ ಮಾಡಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು ಸಾಮಾನ್ಯ ವಿಷಯಗಳ ಅಧ್ಯಯನಕ್ಕೂ ಅವಕಾಶ ಬಜೆಟ್​ನಲ್ಲಿ ಅನುದಾನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಶಿರಸಿಯಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿ ನಡೆಯಲಿದ್ದು 250 ಕೋಟಿಗೂ ಹೆಚ್ಚು ಕಾಮಗಾರಿ ನಡೆಲಿದೆ ಎಂದಿದ್ದಾರೆ.

    ‘ಸದನದ ಸ್ಪೀಕರ್ ಆದರೂ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ. ಶಿರಸಿ ಅರಣ್ಯ, ಜೀವವೈವಿಧ್ಯ, ನಿಸರ್ಗ ಸಂಪತ್ತು ಹೊಂದಿರುವ ಜಿಲ್ಲೆ. 2022-23 ರಲ್ಲಿ ಎಕಾಲಾಜಿಕ್ ಬಜೆಟ್ ಮಾಡಿದ್ದೆ. ಕಳಚೆ ಭೂಕುಸಿತ ಪ್ರದೇಶಕ್ಕೆ ವಿಶೇಷ ಅನುದಾನ ನೀಡಿದ್ದೇನೆ. ಕೊಳಚೆ ಗ್ರಾಮ ಪುನರ್ವಸತಿ ಯೋಜನೆಗೆ ಹಣ ನೀಡಿದ್ದೇನೆ. ಇನ್ನೂ ನೀಡಲು ಸಿದ್ದನಿದ್ದೇನೆ‌’ ಎಂದಿದ್ದಾರೆ.

    ಇದೇ ಸಂದರ್ಭದಲ್ಲಿ ಎನ್ವಿರಾನ್​ಮೆಂಟ್​ ಯುನಿವರ್ಸಿಟಿ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ದು ಅದರ ಬಗ್ಗೆಯೂ ತೀರ್ಮಾನ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಸಿಎಂ, ‘ಬರುವ ಬಜೆಟಲ್ಲಿ ಈ ಬಗ್ಗೆ ಮಂಡಿಸಲಿದ್ದೇವೆ. ಅರಣ್ಯೀಕರಣ ಮಾಡುವಲ್ಲಿ ಹೆಚ್ಚಿನ‌ ಗಮನ ನೀಡಲಾಗುವುದು. ಅರಣ್ಯವಾಸಿಗಳ ರಕ್ಷಣೆ ಮಾಡುವ ಅವಶ್ಯಕತೆ ಇದೆ. ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಕೆಲಸ ಸರ್ಕಾರ ಮಾಡಲ್ಲ. ಸುಪ್ರಿಂಕೋರ್ಟಲ್ಲಿ ಕೇಸ್ ‌ನಿಖಾಲಿ ಆಗೋವರೆಗೆ ಅರಣ್ಯವಾಸಿಗಳಿಗೆ ತೊಂದರೆ ಕೊಡಬಾರದು’ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts