More

    ಹಿಂಡಲಗಾ ಕೈದಿ ಕೇಂದ್ರ ಸಚಿವರಿಗೆ ಫೋನ್​ ಮಾಡಿದ್ದು ಹೇಗೆ?!

    ಬೆಳಗಾವಿ: ಬೆಳಗಾವಿಯ ಹಿಂಡಲಗಾ ಸೆಂಟ್ರಲ್ ಜೈಲಿನ ಕೈದಿಯಿಂದಲೇ ಶನಿವಾರ ಬೆಳಗ್ಗೆ ನಿತಿನ್​ ಗಡ್ಕರಿಗೆ ಕರೆ ಮಾಡಿ, ಬಾಂಬ್ ಇಟ್ಟು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಮಾಹಿತಿ ಸಿಕ್ಕ ಕೂಡಲೆ ಶನಿವಾರ ರಾತ್ರಿ ನಾಗ್ಪುರದ ಪೊಲೀಸ್ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ. ಆದರೆ ಎಲ್ಲರನ್ನೂ ಕಾಡುತ್ತಿದ್ದ ಪ್ರಶ್ನೆ ಒಂದೇ. ಕೈದಿಯೊಬ್ಬ, ಕೇಂದ್ರ ಮಂತ್ರಿಗೆ ಜೈಲಿನಿಂದ ಕರೆ ಮಾಡಿದ್ದು ಹೇಗೆ ಎಂದು

    ಜೀವ ಬೆದರಿಕೆ ಸಂಬಂಧ ಮಹಾರಾಷ್ಟ್ರದ ನಾಗ್ಪುರದ ಪೊಲೀಸರ ಗಮನಕ್ಕೆ ನಿತಿನ್​ ಗಡ್ಕರಿ ತಂದಿದ್ದು, ಆರೋಪಿ ಶೋಧಕ್ಕೆ ಹಿಂಡಲಗಾ ಜೈಲಿಗೆ ಬಂದು ನಾಗ್ಪುರ ಪೊಲೀಸರು ಶನಿವಾರ ರಾತ್ರಿಯಿಂದ ವಿಚಾರಣೆ ನಡೆಸಿದ್ದಾರೆ. ನಾಗ್ಪುರ ಪೊಲೀಸರಿಗೆ ಕೊಲ್ಲಾಪುರ, ಸಾಂಗ್ಲಿ ಬೆಳಗಾವಿ ನಗರ ಪೊಲೀಸರು ಸಾಥ್ ನೀಡಿದ್ದರು. ಈ ಸಂದರ್ಭ ಆರೋಪಿ ಪತ್ತೆಯಾಗಿದ್ದು ಆತ ಫೋನ್​ ಮಾಡಿದ್ದು ಹೇಗೆ ಎಂಬ ಮಾಹಿತಿ ಲಭಿಸಿದೆ.

    ಇದನ್ನೂ ಓದಿ: ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ಗಡ್ಕರಿಗೆ ಬೆದರಿಕೆ!? ಬೆಳಗಾವಿಯಲ್ಲಿ ನಾಗ್ಪುರ ಪೊಲೀಸರ ಕಾರ್ಯಾಚರಣೆ

    ಬೆಳಗಾವಿಯಿಂದಲೇ ನಿನ್ನೆ ಬೆಳಗ್ಗೆ ಕೇಂದ್ರ ಸಚಿವ ನಿತೀನ್ ಗಡ್ಕರಿಗೆ ಜೀವ ಬೆದರಿಕೆಯ ಕರೆ ಬಂದಿತ್ತು. ಸಂಜೆ ಮೂರು ಗಂಟೆಗಳ ಕಾಲ ಜೈಲಿನಲ್ಲಿ ಶೋಧಕಾರ್ಯ ನಡೆಸಿರುವ ಪೊಲೀಸರು ಈಗ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿದ್ದಾರೆ. ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಂಗಳೂರು ಮೂಲದ ಆರೋಪಿ ಕರೆ ಮಾಡಿದ್ದು ಎಂದು ತಿಳಿದುಬಂದಿದೆ.

    ಜೈಲಿನಲ್ಲಿದ್ದ ಬೆಳಗಾವಿ ನಗರದ ಆರೋಪಿ ಮೊಬೈಲಿನಿಂದ ಕರೆ ತನ್ನ ಮಗಳಿಗೆ ಕರೆ ಮಾಡುವುದಾಗಿ ಹೇಳಿ ಕೇಂದ್ರ ಸಚಿವರಿಗೆ ಜೀವಬೆದರಿಕೆ ಹಾಕಿದ್ದಾನೆ. ಸದ್ಯಕ್ಕೆ ಮಹಾರಾಷ್ಟ್ರ ಹಾಗೂ ಬೆಳಗಾವಿ ಪೊಲೀಸರಿಂದ ತನಿಖೆ ನಡೆಯುತ್ತಿದ್ದು ಇಂದು ಜೈಲಿನಲ್ಲಿ ಶೋಧ ಕಾರ್ಯಾಚರಣೆ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಈ ಹಿಂದೆ ಉತ್ತರ ವಲಯ ಐಜಿಪಿ ಆಗಿದ್ದ ಅಲೋಕಕುಮಾರ್‌ಗೆ ಕೂಡ ಹಿಂಡಲಗಾ ಜೈಲಿನ ಕೈದಿಗಳು ಜೀವ ಬೆದರಿಕೆ ಹಾಕಿದ್ದರು. ಹಲವು ಸಲ ಸರ್ಪೈಸ್ ದಾಳಿಯಾದರೂ ಜೈಲಿನಲ್ಲಿ ಮೊಬೈಲ್ ಬಳಕೆ ನಿಲ್ಲುತ್ತಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಗೃಹ ಸಚಿವ ಆರಗ ಜ್ಞಾನೇಂದ್ರ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts