More

    ಇಂದಿನಿಂದ ಬಹುನಿರೀಕ್ಷಿತ ಕೆಂಪೇಗೌಡ ಟರ್ಮಿನಲ್​-2 ಕಾರ್ಯಾರಂಭ

    ದೇವನಹಳ್ಳಿ: ಹಿಂದೆ ಪ್ರಧಾನಿ ಮೋದಿ ಬೆಂಗಳೂರಿಗೆ ಬಂದು ವಿಶೇಷ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್​2 ಅನ್ನು ಉದ್ಘಾಟಿಸಿದ್ದರು. ಟರ್ಮಿನಲ್​2 ಅನೇಕ ದಿನಗಳಿಂದ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿತ್ತು. ಇದೀಗ ಟರ್ಮಿನಲ್​2 ಗೆ ಸಾರ್ವಜನಿಕರಿಗೂ ಪ್ರವೇಶ ಸಿಕ್ಕಿದ್ದು ಇಂದು ಅಲ್ಲಿಂದ ಮೊದಲನೇ ವಿಮಾನ ಹಾರಲಿದೆ.

    5000 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿದ್ದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್2 ಇಂದಿನಿಂದ ಕಾರ್ಯರಂಭ ಮಾಡಿದೆ. ಇಲ್ಲಿಂದ ಹಾರಲಿರುವ ಮೊದಲ ವಿಮಾನ ಸ್ಟಾರ್ ಏರ್ ಸಂಸ್ಥೆಯದ್ದಾಗಿದ್ದು ವಿಮಾನ ಬೆಂಗಳೂರಿನಿಂದ ಕಲಬುರಗಿಗೆ ಟೇಕ್ ಆಫ್​ ಮಾಡಿದೆ.

    ಬೆಳಗ್ಗೆ‌ 8.40 ಕ್ಕೆ ಟರ್ಮಿನಲ್2 ನಲ್ಲಿ ಸ್ಟಾರ್ ಏರ್ ವಿಮಾನ ಮೊದಲ ವಿಮಾನ ಟೇಕ್ ಆಫ್​ ಮಾಡಿದ್ದು ಟರ್ಮಿನಲ್2 ರಲ್ಲಿ ಮೊದಲ ವಿಮಾನ ಹತ್ತುವ ಪ್ರಯಾಣಿಕರಿಗೆ ಸಂಪ್ರದಾಯಕವಾಗಿ ಶಾಲು ಹೊರಿಸಿ ವಿಮಾನ ನಿಲ್ದಾಣದ ಸಿಬ್ಬಂದಿ ಸ್ವಾಗತ ಕೋರಿದ್ದಾರೆ. ಟರ್ಮಿನಲ್2 ನಲ್ಲಿ ಪ್ರಯಾಣಿಕರು ಉತ್ಸಾಹಭರಿತರಾಗಿದ್ದು ಮೊದಲ ವಿಮಾನದಲ್ಲಿ 44 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ.

    ಶೀಘ್ರದಲ್ಲೇ ಏರ್ ಇಂಡಿಯಾ, ವಿಸ್ತಾರ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಟರ್ಮಿನಲ್ 2 ನಿಂದ ಸೇವೆ ಆರಂಭಿಸಲಿವೆ. ಸದ್ಯಕ್ಕೆ ದೇಶಿಯ ವಿಮಾನಗಳ ಹಾರಾಟಕ್ಕೆ ಮಾತ್ರ ಟರ್ಮಿನಲ್ 2ನಲ್ಲಿ ಅವಕಾಶ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts