More

    ಚಿಕ್ಕಬಳ್ಳಾಪುರದ ‘ಆದಿಯೋಗಿ’ ಪ್ರತಿಮೆ ಇಂದು ಸಿಎಂ ಬೊಮ್ಮಾಯಿ ಸಮ್ಮುಖದಲ್ಲಿ ಅನಾವರಣ

    ಚಿಕ್ಕಬಳ್ಳಾಪುರ: ಜಗತ್ತಿನ ಅತೀ ದೊಡ್ಡ ಮುಖ ಎಂದು ಹೆಸರುವಾಸಿಯಾಗಿರುವ ಕೊಯಮತ್ತೂರಿನ ಆದಿಯೋಗಿ ಪ್ರತಿಮೆ ದೇಶಾದ್ಯಂತ ಜನರನ್ನು ಆಕರ್ಷಿಸುತ್ತಿದೆ. ಅಂತಹದೇ ಒಂದು ಪ್ರತಿಮೆ ಕರ್ನಾಟಕದಲ್ಲೂ ಕೆಲ ತಿಂಗಳುಗಳಿಂದ ನಿರ್ಮಾಣ ಆಗುತ್ತಿತ್ತು. ಕಡೆಗೂ ಆ ಪ್ರತಿಮೆ ನಿರ್ಮಾಣ ಪೂರ್ತಿಯಾಗಿದ್ದು ಇಂದು ಅನಾವರಣಗೊಳ್ಳಲಿದೆ. ಇಂದು ಮುಖ್ಯಮಂತ್ರಿ ಬೊಮ್ಮಾಯಿ ಆದಿಯೋಗಿ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಇಶಾ ಫೌಂಡೇಶನ್ ವತಿಯಿಂದ ಆದಿಯೋಗಿ ಪ್ರತಿಮೆ ಅನಾವರಣಗೊಳ್ಳಲಿದ್ದು 112 ಅಡಿಗಳ ಆದಿಯೋಗಿ ಮೂರ್ತಿ ಉದ್ಘಾಟನೆಗೆ ಸನ್ನದ್ಧವಾಗಿದೆ. ಇಂದು ರಾತ್ರಿ 8 ಗಂಟೆಗೆ ಹೊತ್ತಿಗೆ ಪ್ರಮುಖ ನಾಯಕರ ಸಮ್ಮುಖದಲ್ಲಿ ಪ್ರತಿಮೆ ಅನಾವರಣಗೊಳ್ಳಲಿದ್ದು ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಹಳ್ಳಿ ಬಳಿ ಇಂದು ಸಂಜೆ ಆದಿಯೋಗಿ ಮೂರ್ತಿ ಉದ್ಘಾಟನೆಯಾಗಲು ಸಜ್ಜಾಗಿದೆ. 112 ಅಡಿಗಳ ಅದಿಯೊಗಿ ಮೂರ್ತಿ ಮನುಷ್ಯನ ಶರೀರದಲ್ಲಿರುವ 112 ಚಕ್ರಗಳನ್ನು ಬಿಂಬಿಸುತ್ತದೆ ಎನ್ನಲಾಗುತ್ತದೆ. ಇನ್ನು ಮೂರ್ತಿ ಉದ್ಘಾಟನೆ ಆಗುತ್ತಿರುವ ದಿನವೂ ಬಹಳ ವಿಶೇಷವಾಗಿದ್ದು ಇಂದು ಮಕರ ಸಂಕ್ರಮಣ ಕೂಡ ಹೌದು. ಇಂದು ರಾತ್ರಿ 8 ಗಂಟೆ ಸುಮಾರಿಗೆ ಅಆವರಣಗೊಂಡು ಇಡೀ ರಾತ್ರಿ ಸಾರ್ವಜನಿಕರಿಗೆ ಅದಿಯೊಗಿ ದರ್ಶನ‌ ಕೊಡಲಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts