More

  ಜಿಲ್ಲಾಡಳಿತದ ಸಹಯೋಗದಲ್ಲಿ ಅದ್ದೂರಿಯಾಗಿ ಸೈನಿಕ ಶಾಲೆಯಲ್ಲಿ ಯೋಗಾಥಾನ್​ ಆಯೋಜನೆ

  ವಿಜಯಪುರ: ಯೋಗಿಗಳ ನಾಡು, ಶರಣರ ಬೀಡು, ಸೂಫಿ ಸಂತರ ನೆಲೆವೀಡು ಎಂದು ಕರೆಯಲ್ಪಡುವ ನಲ್ಲಿ ಯೋಗಾಥಾನ್​-2023 ಅದ್ದೂರಿಯಾಗಿ ನೆರವೇರಿತು.

  ರಾಜ್ಯದ ಪ್ರತಿಷ್ಠಿತ ಸೈನಿಕ ಶಾಲೆ ಆವರಣಲದಲ್ಲಿ ಭಾನುವಾರ ಬೆಳಗ್ಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಯೋಗಾಥಾನ್- 2023 ಯಶಸ್ವಿಯಾಗಿ ನೆರವೇರಿತು.

  ಜಿಲ್ಲೆಯ ವಿವಿಧ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸರ್ಕಾರಿ ಕಚೇರಿಯ ಸಿಬ್ಬಂದಿ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ, ಎನ್ ಸಿಸಿ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಯೋಗಪಟುಗಳು ಭಾಗವಹಿಸಿದ್ದರು.

  ನಸುಕಿನ ನಾಲ್ಕು ಗಂಟೆಯಿಂದಲೇ ಯೋಗಪಟುಗಳು ಸರತಿ ಸಾಲಿ‌ನಲ್ಲಿ ಸೈನಿಕ ಶಾಲೆ ಆವರಣಕ್ಕೆ ಆಗಮಿಸಿದ್ದರು. ಮ್ಯಾಟ್, ಬೆಡ್ ಸೀಟ್, ಚಾಪೆ ಮತ್ತಿತರ ಸಾಮಗ್ರಿ ಹಿಡಿದು ಯೋಗಾಥಾನ್ ಟಿ- ಶರ್ಟ್ ಧರಿಸಿ ಯೋಗದ ಆಸನಗಳು ಹಾಕುತ್ತಿದ್ದರೆ ವಿಶಾಲ ಮೈದಾನದಲ್ಲಿ ಕೊಕ್ಕರೆಯ ಬಳಗ ಜಮಾಯಿಸಿ ಸಾಮೂಹಿಕ ಆಸನ ಹಾಕಿದಂತಿತ್ತು.

  ಜಿಲ್ಲಾಡಳಿತದ ಸಹಯೋಗದಲ್ಲಿ ಅದ್ದೂರಿಯಾಗಿ ಸೈನಿಕ ಶಾಲೆಯಲ್ಲಿ ಯೋಗಾಥಾನ್​ ಆಯೋಜನೆ

  ಅದಲ್ಲದೇ ವಿಶೇಷ ಆಕರ್ಷಣೆಯಾಗಿ ಮುಸಲ್ಮಾನ ವಿದ್ಯಾರ್ಥಿನಿಯರು ವಿಶೇಷವಾಗಿ ಒಟ್ಟಾಗಿ ಸಾಮೂಹಿಕ ಯೋಗಾಸನ ಮಾಡಿ ಎಲ್ಲರ ಮನಸ್ಸನ್ನು ಗೆದ್ದರು. ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಸಿಇಒ ರಾಹುಲ್ ಶಿಂಧೆ, ಎಸ್ ಪಿ ಎಚ್.ಡಿ. ಆನಂದಕುಮಾರ ಮತ್ತಿತರ ಅಧಿಕಾರಿಗಳು ಅಚ್ಚುಕಟ್ಟಾಗಿ ಆಯೋಜನೆ ಮಾಡಿ ಗಮನ ಸೆಳೆದರು. ವಿರೇಶವಾಲಿ, ಪ್ರಶಾಂತ ಚೌದರಿ, ಪರಶುರಾಮ ಭಜಂತ್ರಿ, ಶಿವಾನಂದ ಭಜಂತ್ರಿ ಮತ್ತಿತರ ಕಲಾವಿದರು ನಾಡಗೀತೆ ಪ್ರಸ್ತುತಪಡಿಸಿದರು. ಖ್ಯಾತ ನಿರೂಪಕ ಹುಮಾಯೂನ್ ಮಮದಾಪುರ ನಿರ್ವಹಿಸಿದರು.

  ಜಿಲ್ಲಾಡಳಿತದ ಸಹಯೋಗದಲ್ಲಿ ಅದ್ದೂರಿಯಾಗಿ ಸೈನಿಕ ಶಾಲೆಯಲ್ಲಿ ಯೋಗಾಥಾನ್​ ಆಯೋಜನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts