More

    8 ರೂಪಾಯಿ ಷೇರಿನ ಪವಾಡ: 1 ಲಕ್ಷವಾಯ್ತು 55 ಲಕ್ಷ; ಹೂಡಿಕೆದಾರರು ಕೋಟ್ಯಧಿಪತಿಗಳು

    ಮುಂಬೈ: ಸೂರಜ್ ಪ್ರಾಡಕ್ಟ್ಸ್ ಲಿಮಿಟೆಡ್​ (SURAJ PRODUCTS LTD) ಕಳೆದ ಕೆಲವು ವರ್ಷಗಳಿಂದ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳಲ್ಲಿ ಒಂದಾಗಿದೆ. ಈ ಕಂಪನಿಯ ಷೇರುಗಳ ಬೆಲೆ ರೂ 8 ರಿಂದ
    445 ರೂಪಾಯಿ ಮಟ್ಟಕ್ಕೆ ಏರಿಕೆ ಕಂಡಿರುವುದು ಒಂದು ದಾಖಲೆಯಾಗಿದೆ. ಈ ಅವಧಿಯಲ್ಲಿ ಷೇರು ಖರೀದಿಸಿದ ಹೂಡಿಕೆದಾರರನ್ನು ಕೋಟ್ಯಧಿಪತಿಗಳನ್ನಾಗಿ ಮಾಡಿದೆ.

    ಈ ಕಂಪನಿಯ ಷೇರುಗಳ ಬೆಲೆಯು ಕೇವಲ 4 ವರ್ಷಗಳಲ್ಲಿ 8 ರೂ.ನಿಂದ 445 ರೂ. ತಲುಪಿದೆ. ಅಂದರೆ, ಈ ಅವಧಿಯಲ್ಲಿ ಈ ಷೇರು 5400 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಕಳೆದ 6 ತಿಂಗಳಿಂದ ಈ ಷೇರಿಗೆ ಸಾಕಷ್ಟು ಬೇಡಿಕೆ

    ಕಳೆದ 6 ತಿಂಗಳಲ್ಲಿ ಈ ಷೇರಿನ ಹಣವು ಬಹುತೇಕ ದ್ವಿಗುಣವಾಗಿದೆ. ಕಳೆದ 6 ತಿಂಗಳಿಂದ ಕಂಪನಿಯ ಷೇರುಗಳನ್ನು ಹೊಂದಿರುವ ಹೂಡಿಕೆದಾರರು ಇದುವರೆಗೆ ಶೇಕಡಾ 95 ರಷ್ಟು ಲಾಭವನ್ನು ಪಡೆದಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್‌ನ ಬೆಲೆಗಳು ಶೇಕಡಾ 4 ರಷ್ಟು ಹೆಚ್ಚಾಗಿದ್ದು, ಷೇರುಗಳ ಬೆಲೆ 425 ರೂ.ನಿಂದ 445 ರೂ.ಗೆ ಏರಿದೆ.

    ಇನ್ನು 1 ವರ್ಷದ ಹಿಂದೆ ಈ ಷೇರಿನ ಬೆಲೆ ಕೇವಲ 135 ರೂ. ಇತ್ತು. ಆಗ ಷೇರುಗಳಲ್ಲಿ ಹೂಡಿಕೆ ಮಾಡಿದವರು ಇದುವರೆಗೆ ಶೇ. 230ರಷ್ಟು ಲಾಭ ಮಾಡಿಕೊಂಡಿದ್ದಾರೆ. ಇನ್ನು 2 ವರ್ಷಗಳ ಕಾಲ ಹೂಡಿಕೆ ಮಾಡಿದವು ಶೇ. 300 ರಷ್ಟು ಲಾಭ ಗಳಿಸಿದ್ದಾರೆ. 3 ವರ್ಷಗಳ ಹಿಂದೆಯಂತೂ ಈ ಷೇರು 35 ರೂ.ಗೆ ಲಭ್ಯವಿತ್ತು. ಆಗ ಈ ಷೇರುಗಳನ್ನು ಖರೀಸಿದವರು 1200% ಕ್ಕಿಂತಲೂ ಹೆಚ್ಚಿನ ಲಾಭವನ್ನು ಪಡೆದುಕೊಂಡಿದ್ದಾರೆ.

    ಹೂಡಿಕೆದಾರರು 1 ವರ್ಷದ ಹಿಂದೆ ಈ ಷೇರುಗಳ ಮೇಲೆ ಬಾಜಿ ಕಟ್ಟಿದ್ದರೆ, ಅವರ ಆದಾಯವು 3.30 ಲಕ್ಷ ರೂ. ಆಗುತ್ತಿತ್ತು. 3 ವರ್ಷಗಳ ಹಿಂದೆ 1 ಲಕ್ಷ ರೂ ಹೂಡಿಕೆ ಮಾಡಿದ್ದರೆ, 13 ಲಕ್ಷ ರೂ. ಆಗುತ್ತಿತ್ತು. ಕಳೆದ 4 ವರ್ಷಗಳವರೆಗೆ ಈ ಷೇರಿನಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಅದು 55 ಲಕ್ಷ ರೂಪಾಯಿಗೆ ಏರುತ್ತಿತ್ತು.

    ಈ ಷೇರಿನ 52 ವಾರದ ಕನಿಷ್ಠ ಮಟ್ಟವು 116.50 ರೂಪಾಯಿ ಇದ್ದರೆ, ಗರಿಷ್ಠ ಮೌಲ್ಯವು 455.60 ರೂಪಾಯಿ ಇದೆ. ಈ ಕಂಪನಿಯ ಮಾರುಕಟ್ಟೆ ಮೌಲ್ಯ 506 ಕೋಟಿ ರೂಪಾಯಿ ಇದೆ.

    ಟಿಎಂಟಿ ಬಾರ್, ಸ್ಪಾಂಜ್ ಕಬ್ಬಿಣ, ಪಿಗ್ ಕಬ್ಬಿಣ ಮತ್ತು ಎಂಎಸ್​ ಇಂಗೋಟ್/ಬಿಲೆಟ್ ಮೊದಲಾದವುಗಳನ್ನು ಈ ಕಂಪನಿ ಉತ್ಪಾದಿಸುತ್ತದೆ. ಈ ಕಂಪನಿಯು ಪ್ರತಿ ವರ್ಷಕ್ಕೆ ಅಂದಾಜು 36,000 ಟನ್ (TPA) ಉತ್ಪಾದನೆ ಸಾಮರ್ಥ್ಯವನ್ನು ಹೊಂದಿದೆ.

    ನಿಮ್ಮ ಮನೆ ಮೇಲ್ಛಾವಣಿಯಲ್ಲಿ ಏನೂ ಖರ್ಚಿಲ್ಲದೆ ವಿದ್ಯುತ್​ ಉತ್ಪಾದಿಸಿ: ರೂಫ್​ ಟಾಪ್​ ಸೋಲಾರ್​ ಸಬ್ಸಿಡಿ ಹೆಚ್ಚಳ; ಸೂರ್ಯೋದಯ ಯೋಜನೆಯ ವಿವರ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts