More

    ಸಿಎಂ ಮನಸ್ಸಿಗೆ ನೋವಾಗಿದೆ… ಚರ್ಚೆಗೆ ಫುಲ್​ಸ್ಟಾಪ್ ಹಾಕಿ : ಸಚಿವರ ಕೋರಿಕೆ

    ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನ, ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ, ಕೆಲವರು ದೆಹಲಿಗೆ ಪಯಣ ಬೆಳೆಸಿದ್ದು… ಕರೊನಾ ಸಂದರ್ಭದಲ್ಲಿ ಈ ರೀತಿಯ ನಡವಳಿಕೆ ನೋಡಿ ಸಿಎಂ ಮನಸ್ಸಿಗೆ ನೋವಾಗಿದೆ ಎಂದು ಕಂದಾಯ ಸಚಿವ ಆರ್​.ಅಶೋಕ್ ಹೇಳಿದ್ದಾರೆ.

    ‘ಹೈಕಮಾಂಡ್​ ಹೇಳಿದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ’ ಎಂಬ ಸಿಎಂ ಯಡಿಯೂರಪ್ಪ ಅವರ ಮಾತಿಗೆ ಪ್ರತಿಕ್ರಿಯಿಸಿರುವ ಸಚಿವ ಅಶೋಕ್​, ಮಹಾರಾಷ್ಟ್ರ ಮತ್ತು ಬೇರೆ ಬೇರೆ ರಾಜ್ಯದಲ್ಲಿನ ಸಿಎಂ ಹೊರಗೇ ಬರೋದಿಲ್ಲ, ಆದರೆ ನಮ್ಮ ಸಿಎಂ ಹೊರಗೆ ಹೋಗಿ ಕೆಲಸ ಮಾಡ್ತಿದ್ದಾರೆ. ಜನರಿಗೆ ಎರಡು ಪ್ಯಾಕೇಜ್ ಕೊಟ್ಟಿದ್ದಾರೆ. ಇಷ್ಟೆಲ್ಲ ಕೆಲಸ ಮಾಡಿದ್ರೂ ನಾಯಕತ್ವ ಬದಲಾವಣೆ ವಿಚಾರ ಮಾತಾಡ್ತಾರೆ. ಇದರಿಂದ ಬೇಸರಗೊಂಡು ಸಿಎಂ ಮಾತಾಡಿರಬಹುದು ಎಂದಿದ್ದಾರೆ.

    ಇದನ್ನೂ ಓದಿ: ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ

    “ನಾಯಕತ್ವದ ಬಗ್ಗೆ ಮಾತನಾಡಿದ ಯೋಗೇಶ್ವರ್ ಅವರೇ ಯಡಿಯೂರಪ್ಪ ನಮ್ಮ ನಾಯಕ ಎಂದು ಹೇಳಿದ್ದಾರೆ. ನಾವು ಸಿಎಂ ಜೊತೆ ಇದ್ದೇವೆ, ನಾಯಕತ್ವ ಬದಲಾವಣೆಯ ಚರ್ಚೆಗೆ ಫುಲ್​​ಸ್ಟಾಪ್ ಹಾಕಬೇಕು. ಮುಂದಿನ ಪೂರ್ಣ ಅವಧಿ ಬಿಎಸ್​ವೈ ಅವರೇ ಪೂರೈಸ್ತಾರೆ. ಇವತ್ತಿಗೆ ಈ ವಿಚಾರ ಅಂತ್ಯ, ಇವತ್ತೇ ಇದಕ್ಕೆ ಇತಿಶ್ರೀ ಹಾಕಿದ್ದಾರೆ” ಅಶೋಕ್ ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಇವತ್ತಿನಿಂದ ನಾಯಕತ್ವ ಬದಲಾವಣೆ ವಿಚಾರಕ್ಕೆ ಇತಿಶ್ರೀ ಹಾಡಬೇಕು ಎಂದಿದ್ದಾರೆ. “ಹೈಕಮಾಂಡ್, ಯಡಿಯೂರಪ್ಪನವರು ಪೂರ್ಣ ಅವಧಿ ಪೂರೈಸ್ತಾರೆ ಎಂದು ಹೇಳಿದ್ದಾರೆ, ರಾಜ್ಯಾಧ್ಯಕ್ಷರೂ ಹೇಳಿದ್ದಾರೆ. ಹೀಗಾಗಿ ನಾಯಕತ್ವ ಬದಲಾವಣೆ ವಿಚಾರ ಇಲ್ಲ. ಬರುವ ದಿನದಲ್ಲೂ ಅವರ ನಾಯಕತ್ವವೇ ಶ್ರೀರಕ್ಷೆ ಆಗಿರಬೇಕು” ಎಂದಿದ್ದಾರೆ.

    ಇದನ್ನೂ ಓದಿ: ಇದು ಬಿಜೆಪಿಯ ವಿಶೇಷತೆ, ನಮ್ಮ ಕಾರ್ಯಕರ್ತರಿಗೆ ಸಿಎಂ ಯಡಿಯೂರಪ್ಪ ಆದರ್ಶ: ನಳಿನ್​ ಕುಮಾರ್​ ಕಟೀಲ್​

    “ಪ್ರಕೃತಿ ವಿಕೋಪ, ಕೋವಿಡ್ ಸಂದರ್ಭದಲ್ಲಿ ಸಿಎಂ ಸಮರ್ಥವಾಗಿ ಕೆಲಸ ಮಾಡ್ತಿದ್ದಾರೆ. ಹಗಲಿರುಳು ದುಡಿಯುವ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವವರು, ನಾನು ಸಿಎಂ ಎಂದು ಪದೇ ಪದೇ ಮಾತನಾಡಿರುವುದು -ಇವೆಲ್ಲಾ ಅವರಿಗೆ ಬೇಸರವಾಗಿರಬಹುದು ಎಂದ ಬೊಮ್ಮಾಯಿ, “ಯಡಿಯೂರಪ್ಪನವರು ಹೋರಾಟದಿಂದ, ಜನರ ಮಧ್ಯದಿಂದ ಬಂದವರು. ಜನರಿಗಾಗಿ ಅಭಿವೃದ್ದಿ ಕಾರ್ಯ ಮಾಡಿಕೊಂಡು ಬಂದವರು. ಈ ಬಾರಿ ಯಡಿಯೂರಪ್ಪನವರಿಗೆ ಮ್ಯಾನ್ಡೇಟ್ ಬಂದಿದೆ, ಅವರ ನಾಯಕತ್ವಕ್ಕೆ ಬಂದಿದೆ. ಯಾರು ಅಪಸ್ವರ ಎತ್ತುತ್ತಿದ್ದಾರೆ ಅವರು ಸರ್ಕಾರ ಬರಲು ತಮ್ಮ ಪಾತ್ರ ಏನು ಎಂಬುದನ್ನ ಯೋಚಿಸಬೇಕು” ಎಂದರು.

    “ದೆಹಲಿಯಲ್ಲಿ ಬೆಳವಣಿಗೆಗಳು ಆಗ್ತಿವೆ, 2-3 ದಿನಗಳಲ್ಲಿ ಗೊತ್ತಾಗಲಿದೆ…”

    VIDEO | ‘ಚಿಕ್ಕ ಮಕ್ಕಳಿಗೆ ಇಷ್ಟೊಂದು ಕೆಲಸವೇಕೆ, ಮೋದಿ ಸಾಬ್ ?’ ಮುದ್ದು ಹುಡುಗಿಯ ಪ್ರಶ್ನೆ !

    ಸ್ಯಾಂಡಲ್‌ವುಡ್ ನಟಿಯ ತಂದೆ ಗೂಂಡಾ ಕಾಯ್ದೆಯಡಿ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts