More

    ಸಚಿವರು ಊಟಕ್ಕೆ ಹಾಜರ್, ಸದನಕ್ಕೆ ಚಕ್ಕರ್!

    ಬೆಂಗಳೂರು: ಊಟಕ್ಕೆ ಹಾಜರ್, ಸದನಕ್ಕೆ ಚಕ್ಕರ್… ಚರ್ಚೆ ಬರೀ ಸೊನ್ನೆ… ವಿಧಾನ ಪರಿಷತ್‌ನಲ್ಲಿ ಬುಧವಾರ ಮಧ್ಯಾಹ್ನದ ನಂತರ ಕಂಡು ಬಂದ ಸನ್ನಿವೇಶವಿದು.

    ಹೀಗಾಗಿ ಅಧಿವೇಶನವನ್ನು ಸೋಮವಾರ ಬೆಳಗ್ಗೆ 10 ಗಂಟೆವರೆಗೂ ಸಭಾಪತಿ ಬಸವರಾಜ ಹೊರಟ್ಟಿ ಮುಂದೂಡಿದರು. ಅಷ್ಟೇ ಅಲ್ಲ, ಸಚಿವರು ಗೈರಾದ ಕಾರಣಕ್ಕೆ ಮುಂದೂಡಲಾಗುತ್ತಿದೆ ಎಂದೂ ದಾಖಲಿಸಿದರು. ಪ್ರತಿಪಕ್ಷ ಕಾಂಗ್ರೆಸ್‌ನ ಚರ್ಚೆಯ ಉತ್ಸಾಹಕ್ಕೂ ಬ್ರೇಕ್ ಬಿತ್ತು.
    ‘ಚಿಂತಕರ ಚಾವಡಿ’ ಎಂದೇ ಕರೆಯಲ್ಪಡುವ ಮೇಲ್ಮನೆಯಲ್ಲಿ ಮಧ್ಯಾಹ್ನ ಭೋಜನ ವಿರಾಮದ ಬಳಿಕ ಕಲಾಪ ಪಟ್ಟಿ ಪ್ರಕಾರ ಬಜೆಟ್ ಮೇಲಿನ ಚರ್ಚೆ ಮುಂದುವರಿಸಲು ಸಭಾಪತಿ ಅವಕಾಶ ಕಲ್ಪಿಸಿದರು. ಇದನ್ನೂ ಓದಿರಿ ಎಸ್​ಡಿಎ ಪರೀಕ್ಷೆ ಮುಂದೂಡಿಕೆ

    ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ಮಾತನಾಡಲು ಎದ್ದು ನಿಂತಾಗ ಸಭಾನಾಯಕ, ಆಡಳಿತ ಪಕ್ಷದ ಬೆರೆಳೆಣಿಕೆಯಷ್ಟು ಸದಸ್ಯರಿದ್ದರು. ಪ್ರತಿಪಕ್ಷದ ಸಾಲಿನಲ್ಲೂ ಪ್ರತಿಪಕ್ಷ ನಾಯಕ, ಕಾಂಗ್ರೆಸ್-ಜೆಡಿಎಸ್‌ನ ಕೆಲ ಸದಸ್ಯರಿದ್ದರು.

    ಸಚಿವರು ಯಾರೂ ಇಲ್ಲದ್ದನ್ನು ಕಂಡು ಅವಕ್ಕಾದ ಸಭಾಪತಿ, ಸರ್ಕಾರದ ಮುಖ್ಯ ಸಚೇತಕರಿಗೆ ಮೊಬೈಲ್ ಕರೆ ಮಾಡಿ ತಿಳಿಸಿ, ಸಚಿವರನ್ನು ಕರೆಯಿಸಿಕೊಳ್ಳಿ ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿಗೆ ಸೂಚಿಸಿದರು.

    ಸಚಿವ ಆರ್.ಶಂಕರ್ ಆಹ್ವಾನದ ಮೇರೆಗೆ ಸಚಿವರೆಲ್ಲರೂ ಅವರ ಮನೆಗೆ ಮಧ್ಯಾಹ್ನದ ಊಟಕ್ಕೆ ಹೋಗಿದ್ದಾರೆ. ಬರುವುದು ಸ್ವಲ್ಪ ವಿಳಂಬವಾಗಬಹುದು, ಚರ್ಚೆ ಮುಂದುವರಿಸಿ ಅಷ್ಟರೊಳಗೆ ಬಂದು ಸೇರುತ್ತಾರೆ ಕೋಟ ಶ್ರೀನಿವಾಸ ಪೂಜಾರಿ ವಿನಂತಿಸಿದರು.
    15 ನಿಮಿಷಗಳ ಕಾಲ ಬೆಲ್ ಬಾರಿಸಿಯಾಗಿದೆ ಎಂದು ಹೊರಟ್ಟಿ ಸಿಡಿಮಿಡಿಗೊಂಡರು. ಸಚಿವರು ಬರುತ್ತಾರೆ ಎನ್ನುವುದಾದರೆ 10 ನಿಮಿಷ ಇಲ್ಲವೇ ಅರ್ಧ ತಾಸು ಮುಂದೂಡುವೆ ಎಂದರು. ಇದನ್ನೂ ಓದಿರಿ ಅಪ್ಪ-ಮಕ್ಕಳದ್ದೂ ಸೇರಿ ಇನ್ನೂ 23 ಸಿಡಿ ಇವೆ ಎಂದ ಯತ್ನಾಳ್

    ಈ ಮಾತಿಗೆ ಕೋಟ ನಿರುತ್ತರರಾದರೆ, ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅವರು ಇದೆಂತಹ ಬಂಡ ಸರ್ಕಾರ, ಬೇಜವಾಬ್ದಾರಿ ಸರ್ಕಾರವೆಂದು ಕಿಡಿಕಾರಿದರು. ಇದನ್ನೊಪ್ಪದ ಕೋಟ ಶ್ರೀನವಾಸ ಪೂಜಾರಿ,ನೀವು (ಕಾಂಗ್ರೆಸ್) ಅಧಿಕಾರದಲ್ಲಿದ್ದಾಗ ಇಂತಹದ್ದೆಲ್ಲ ಆಗಿಲ್ಲವೆ? ಸಚಿವರು ಕರೆದಿದ್ದಾರೆ ಎಂದು ಊಟಕ್ಕೆ ಹೋಗಿದ್ದಾರಷ್ಟು ಎಂದು ಸಮಜಾಯಿಷಿ ನೀಡಿದರು.

    ಈ ಮಧ್ಯೆ ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ ಅವರು ಸಭಾಪತಿ ಉದ್ದೇಶಿಸಿ, ಸರ್, ವಿಧಾನಸಭೆ ಅಧಿವೇಶನ ಅದಾಗಲೇ ಮುಂದೂಡಿಕೆಯಾಗಿದೆ. ಎಲ್ಲರೂ ನಾಳೆಯ ಶಿವರಾತ್ರಿ ಹಬ್ಬಕ್ಕೆ ಊರಿಗೆ ಹೋಗಲು ಸಜ್ಜಾಗಿದ್ದು, ಸೋಮವಾರದವರೆಗೆ ಮುಂದೂಡಿ ಎಂದು ಕೋರಿದರು.

    ಮತ್ತದೇ ಮಾತು ಪುನರುಚ್ಚರಿಸಿದಾಗ, ಶ್ರೀಕಂಠೇಗೌಡರೇ ನೀವು ಹೇಳೋದು ಅರ್ಥವಾಗಿದೆ. ಸುಮ್ನ ಕೂಡ್ರಿ, ಇತ್ಲಾಗ ಸಚಿವರು ಬರ್ತಾರೋ ಇಲ್ಲಾಂತ ಸಭಾನಾಯಕರನ್ನ ಕೇಳ್ಯಾಕತ್ತೀದ್ದೀನಿ ಎಂದ ಹೊರಟ್ಟಿ, ಬಿಜೆಪಿಯ ಎನ್.ರವಿಕುಮಾರ್ ಕಡೆಗೆ ತಿರುಗಿ, ನೀವಾರ ಹೇಳ್ರಿ ಏನು ಮಾಡೋಣ? ಎಂದು ಕೇಳಿದರು.

    ಆರ್.ಶಂಕರ್ ಮನೆಗೆ ಊಟಕ್ಕೆ ಹೋಗಿರುವ ಬಹುತೇಕ ಸಚಿವರು ಸದನಕ್ಕೆ ಹಾಜರಾಗುವ ಗ್ಯಾರಂಟಿಯಿಲ್ಲ. ಅಧಿವೇಶನ ಮುಂದೂಡುವುದೇ ಲೇಸು ಎಂದು ಎನ್.ರವಿಕುಮಾರ್ ಹೇಳಿದರು. ಯಾವ ಕಾರಣಕ್ಕಾಗಿ ಸದನ ಮುಂದೂಡಲಾಗುತ್ತಿದೆ ಎಂಬುದನ್ನು ಸಭಾಪತಿ ದಾಖಲಿಸಿ, ಪ್ರತಿಪಕ್ಷ ಕಾಂಗ್ರೆಸ್‌ನ ಬೇಸರ-ಅಸಮಾಧಾನ ಶಮನ ಮಾಡಿದರು.

    ಅಪ್ಪ-ಮಕ್ಕಳದ್ದೂ ಸೇರಿ ಇನ್ನೂ 23 ಸಿಡಿ ಇವೆ ಎಂದ ಯತ್ನಾಳ್

    ಸೊಸೆಯನ್ನ ಕೊಂದು ಮಾವ ಆತ್ಮಹತ್ಯೆ! ಊಟಕ್ಕೆ ಬಂದ ಮಗನಿಗೆ ಕಾದಿತ್ತು ಆಘಾತ…

    ನಾನು 20 ವರ್ಷ ಕಾಂಗ್ರೆಸ್​ನಲ್ಲೇ ಇದ್ದೆ, ಜಾರಕಿಹೊಳಿ ಸಿಡಿ ಮಾಡಿದ್ದೇ ಕಾಂಗ್ರೆಸ್​: ಸಚಿವರ ಸ್ಫೋಟಕ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts