More

    ಎಸ್​ಡಿಎ ಪರೀಕ್ಷೆ ಮುಂದೂಡಿಕೆ

    ಬೆಂಗಳೂರು: ಮಾ.20 ಮತ್ತು 21ರಂದು ನಡೆಯಬೇಕಿದ್ದ ಎಸ್​ಡಿಎ (ದ್ವಿತೀಯ ದರ್ಜೆ ಸಹಾಯಕರು/ಕಿರಿಯ ಸಹಾಯಕರ) ಪರೀಕ್ಷೆಯನ್ನು ಮೂಂದೂಡಿ ಕೆಪಿಎಸ್​ಸಿ ಆದೇಶ ಹೊರಡಿಸಿದೆ.

    2020ರ ಮೇ 14ರ ಅಧಿಸೂಚನೆಯನ್ವಯ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2019ನೇ ಸಾಲಿನ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಜೂನ್​ 6 ಮತ್ತು 7ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಕರೊನಾ ಕಾರಣಕ್ಕೆ ಮೂಂದೂಡಲಾಗಿತ್ತು. ತದನಂತರ 2021ರ ಮಾರ್ಚ್​ 20ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಮತ್ತು ಮಾರ್ಚ್​ 21ರಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನ ನಡೆಸಲು ದಿನಾಂಕವನ್ನು ಕೆಪಿಎಸ್​ಸಿ ಮರುನಿಗದಿ ಮಾಡಿತ್ತು. ಇದೀಗ ಈ ದಿನಾಂಕವನ್ನ ರದ್ದು ಮಾಡಿ ಎಕ್ಸಾಂ ಮುಂದೂಡಿದೆ. ಪರೀಕ್ಷೆ ನಡೆಯುವ ದಿನಾಂಕವನ್ನು ಮರುನಿಗದಿ ಮಾಡಿ ಶೀಘ್ರವೇ ಪ್ರಕಟಿಸಲಾಗುವುದು ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ

    ಜ.24ರಂದು ನಡೆಯಬೇಕಿದ್ದ ಎಫ್​ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮುನ್ನಾದಿನವೇ ಸೋರಿಕೆ ಆಗಿತ್ತು. ಹಾಗಾಗಿ ಈ ಪರೀಕ್ಷೆಯನ್ನು ಮುಂದೂಡಿದ್ದ ಕೆಪಿಎಸ್​ಸಿ, ಫೆ.28ರಂದು ಪರೀಕ್ಷೆ ನಡೆಸಿತ್ತು. ಈ ಕಾರಣದಿಂದ ಮೊದಲೇ ನಿಗದಿ ಪಡಿಸಿದ್ದ ದಿನಾಂಕ(ಮಾ.20, 21)ದಲ್ಲಿ ಎಸ್​ಡಿಎ ಎಕ್ಸಾಂ ನಡೆಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲು ಆಯೋಗಕ್ಕೆ ಕಾಲಾವಕಶಾದ ಕೊರತೆ ಇದೆ. ಹಾಗಾಗಿ ಎಸ್​ಡಿಎ ಎಕ್ಸಾಂ ಅನ್ನು ಮುಂದೂಡಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಅಪ್ಪ-ಮಕ್ಕಳದ್ದೂ ಸೇರಿ ಇನ್ನೂ 23 ಸಿಡಿ ಇವೆ ಎಂದ ಯತ್ನಾಳ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts