More

    ಹುಟ್ಟುಹಬ್ಬದ ಸಂಭ್ರಮದಲ್ಲಿ ಗೋವಾ ಬೀಚ್​ನಲ್ಲಿ ಬೆತ್ತಲೆ ಓಡಾಡಿದ ಬಾಲಿವುಡ್​ ನಟ

    ಪಣಜಿ: ಬಾಲಿವುಡ್ ನಟ ಮತ್ತು ಫಿಟ್​ನೆಸ್​ ಐಕಾನ್​ ಮಿಲಿಂದ್ ಸೋಮನ್​ ಆಗಾಗ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಜತೆಗೆ ಸುದ್ದಿ ಮಾಡುತ್ತಿರುತ್ತಾರೆ. ಫಿಟ್​ನೆಸ್​ಗೆ ಸಂಬಂಧಿಸಿದ ವಿಡಿಯೋಗಳನ್ನು ಹಂಚಿಕೊಂಡು ಸ್ಪೂರ್ತಿದಾಯಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಚೂರು ಮುಜುಗರಕ್ಕೀಡು ಮಾಡುವ ವಿಡಿಯೋವೊಂದನ್ನು ಸ್ವತಃ ಮಿಲಿಂದ್ ತಮ್ಮ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಬಾಲಿವುಡ್​ ಹಿರಿಯ ನಟ ಬೆಂಗಳೂರು ಆಸ್ಪತ್ರೆಯಲ್ಲಿ ನಿಧನ

    ಪತ್ನಿ ಅಂಕಿತಾ ಜತೆಗೆ ಗೋವಾದ ಬೀಚ್​ನಲ್ಲಿ 55ನೇ ವರ್ಷಕ್ಕೆ ಕಾಲಿರಿಸಿದ ಸಂಭ್ರಮವನ್ನು ಮಿಲಿಂದ್​ ಆಚರಿಸುತ್ತಿದ್ದಾರೆ. ಇದೇ ವೇಳೆ ಬೀಚ್​ನಲ್ಲಿ ಬಟ್ಟೆ ತೊಡದೆ ಓಡಾಡಿದ್ದಾರೆ. ಹಾಗೆ ಓಡಾಡಿದ ಒಂದು ಫೋಟೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಾಕಿದ್ದಾರೆ. ಹ್ಯಾಪಿ ಬರ್ತಡೇ ಟು ಮಿ ಎಂಬ ಕ್ಯಾಪ್ಶನ್​ ಸಹ ನೀಡಿದ್ದಾರೆ.

    ಹುಟ್ಟುಹಬ್ಬದ ಸಂಭ್ರಮದಲ್ಲಿ ಗೋವಾ ಬೀಚ್​ನಲ್ಲಿ ಬೆತ್ತಲೆ ಓಡಾಡಿದ ಬಾಲಿವುಡ್​ ನಟ

    ಇದನ್ನೂ ಓದಿ: ಫಿಕ್ಸ್​ ಆಯ್ತು ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್​ ಮದುವೆ ದಿನಾಂಕ: ಟ್ವೀಟ್​ ಮೂಲಕ ಸರ್ಪ್ರೈಸ್​!

    ನೆಟ್ಟಿಗರು ಜನ್ಮದಿನದ ಶುಭಾಶಯ ಕೋರುವುದರ ಜತೆಗೆ ಒಂದಷ್ಟು ಜನ ಶೇಮ್​ ಶೇಮ್​ ಎಂದರೆ, ಈ ಫೋಟೋ ತೆಗೆದವರೂ ಅಷ್ಟೇ ಪ್ರತಿಭಾವಂತರು ಎಂದೂ ಕಾಲೆಳೆದಿದ್ದಾರೆ. (ಏಜೆನ್ಸೀಸ್​)

    ನಟಿ ಕಂಗನಾ ರಣಾವತ್​ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಜಾವೇದ್ ಅಖ್ತರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts