More

    ದೆಹಲಿಯಲ್ಲಿ ಭೂಕಂಪ!; ವರ್ಷಾರಂಭದಲ್ಲೇ ನಡುಗಿದ ಭೂಮಿ, ಆತಂಕದಲ್ಲಿ ರಾಜಧಾನಿಯ ಜನತೆ

    ನವದೆಹಲಿ: ವರ್ಷದ ಮೊದಲ ದಿನವಾದ ಯುಗಾದಿಯಂದೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೂಕಂಪ ಸಂಭವಿಸಿದ್ದು, ಆತಂಕ ಸೃಷ್ಟಿಸಿದೆ. ಇಂದು ಸಂಜೆ ಸುಮಾರಿಗೆ ಈ ಭೂಕಂಪನ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲೂ ಇದರ ತೀವ್ರತೆ ದಾಖಲಾಗಿದೆ.

    ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿರುವಾಗಲೇ ಹೃದಯಾಘಾತ; ನರ್ತಿಸುತ್ತಿರುವಾಗ ಕುಸಿದು ಬಿದ್ದು ಸಾವಿಗೀಡಾದ ಮಹಿಳೆ

    ನ್ಯಾಷನಲ್ ಸೆಂಟರ್​ ಫಾರ್ ಸೀಸ್ಮಾಲಜಿ (ಎನ್​ಸಿಎಸ್​) ಮಾಹಿತಿ ಪ್ರಕಾರ ಇಂದು ಸಂಜೆ 4.42 ನಿಮಿಷದಲ್ಲಿ ಭೂಕಂಪ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 2.7ರಷ್ಟಿತ್ತು. ಅದರಲ್ಲೂ ಈ ಭೂಕಂಪದ ಕೇಂದ್ರಬಿಂದು ಪಶ್ಚಿಮ ದೆಹಲಿ ಭಾಗದಲ್ಲಿ ಕಂಡುಬಂದಿತ್ತು ಎಂದು ಎನ್​ಸಿಎಸ್ ಹೇಳಿದೆ.

    ಇದನ್ನೂ ಓದಿ: 50 ಅಡಿ ಆಳದ ಬಾವಿಗೆ ಬಿದ್ದರೂ ಬದುಕುಳಿದ ಶ್ವಾನ; ‘ಆಪರೇಷನ್​ ಡಾಗ್’​ಗೆ ಮೆಚ್ಚುಗೆ

    ಅಫ್ಘಾನಿಸ್ತಾನ ಕೇಂದ್ರಬಿಂದುವಾಗಿದ್ದ ಭಾರಿ ಭೂಕಂಪ ನಿನ್ನೆ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆ 6.8ರಷ್ಟಿತ್ತು. ಈ ಭೂಕಂಪ ಅಫ್ಘಾನಿಸ್ತಾನ, ಪಾಕಿಸ್ತಾನ ಮಾತ್ರವಲ್ಲದೆ ಉತ್ತರ ದೆಹಲಿಯ ಕೆಲವು ಭಾಗದಲ್ಲಿ ಕಂಪನವನ್ನು ಉಂಟುಮಾಡಿತ್ತು. ಇದರ ಮರುದಿನವೇ ಇಂದು ಮತ್ತೆ ಭೂಕಂಪ ಉಂಟಾಗಿದ್ದು ಆತಂಕವನ್ನು ಹೆಚ್ಚಾಗಿಸಿದೆ.

    ಇದನ್ನೂ ಓದಿ: ಹತ್ತು ವರ್ಷಗಳಿಗೂ ಅಧಿಕ ಕಾಲ ಒಂದಾದ ಮೇಲೊಂದು ಹೆರಿಗೆ; 28ನೇ ವಯಸ್ಸಿನಲ್ಲೇ 9 ಮಕ್ಕಳ ಮಹಾತಾಯಿ!

    ಇದು ಲಘು ಭೂಕಂಪವಾದರೂ ದೆಹಲಿಯ ಜಾಮಿಯಾನಗರ, ಕಲ್ಕಜಿ ಮತ್ತು ಷಹದಾರ ಪ್ರದೇಶಗಳಲ್ಲಿ ಕಟ್ಟಡಗಳು ವಾಲಿದ್ದಲ್ಲದೆ, ಬಿರುಕುಂಟಾಗಿವೆ ಎಂದು ದೆಹಲಿ ಅಗ್ನಿಶಾಮಕ ದಳಕ್ಕೆ ಕರೆಗಳು ಬಂದಿದ್ದವು. ಆದರೆ ಅಂಥ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ, ಜನರು ಆತಂಕ ಹಾಗೂ ಅನುಮಾನದಿಂದ ಕರೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts