More

    ಮಹಾರಾಷ್ಟ್ರ ಬಳಿಕ ಗೋವಾದಲ್ಲೂ ರಾಜಕೀಯ ತಲ್ಲಣ?; ಕಾಂಗ್ರೆಸ್​ ಮುಖಂಡರಿಂದಲೇ ಷಡ್ಯಂತ್ರ!

    ಪಣಜಿ: ಕಳೆದ ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ನಡೆದಿದ್ದ ರಾಜಕೀಯ ತಲ್ಲಣ ಸದ್ಯದಲ್ಲೇ ಗೋವಾದಲ್ಲೂ ಕಾಣಿಸಿಕೊಂಡರೆ ಅಚ್ಚರಿ ಏನೂ ಇಲ್ಲ ಎನ್ನುವಂಥ ಬೆಳವಣಿಗೆಗಳು ನಡೆದಿವೆ. ಕಾಂಗ್ರೆಸ್​ ವಿರುದ್ಧ ಪಕ್ಷದ ನಾಯಕರೇ ಷಡ್ಯಂತ್ರ ನಡೆಸಿರುವುದು ಕಂಡುಬಂದಿದ್ದು, ಪಕ್ಷ ಅವರ ವಿರುದ್ಧ ಕ್ರಮ ಕೈಗೊಂಡಿದೆ.

    ಗೋವಾದಲ್ಲಿನ ವಿಪಕ್ಷ ನಾಯಕ, ಕಾಂಗ್ರೆಸ್​ನ ಮೈಕೆಲ್ ಲೋಬೋ ಮತ್ತು ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಅವರು ಬಿಜೆಪಿ ಜೊತೆ ಕೈಜೋಡಿಸಿ ಕಾಂಗ್ರೆಸ್​ ವಿರುದ್ಧವೇ ಷಡ್ಯಂತ್ರ ನಡೆಸಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಮೈಕೆಲ್ ಲೋಬೋವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಪಕ್ಷ ನಾಯಕ ಸ್ಥಾನದಿಂದ ತೆಗೆದು ಹಾಕಲಾಗಿದೆ ಎಂದು ಗೋವಾ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

    ಬಿಜೆಪಿ ವಿರೋಧ ಪಕ್ಷವನ್ನು ನಾಶ ಮಾಡಲು ಯತ್ನಿಸುತ್ತಿದೆ. ಅದಕ್ಕಾಗಿ ಅದು ನಮ್ಮ ಪಕ್ಷದ ಶಾಸಕರು ಪಕ್ಷ ಬಿಟ್ಟು ಹೊರಬರುವಂತೆ ಮಾಡಲು ಭಾರಿ ಹಣದ ಆಮಿಷವೊಡ್ಡಿದೆ. ಆದರೆ ನಮ್ಮ 6 ಶಾಸಕರು ಅದನ್ನು ನಿರಾಕರಿಸಿದ್ದು, ನಾನು ಅವರ ಬಗ್ಗೆ ಹೆಮ್ಮೆ ಪಡುತ್ತಿದ್ದೇನೆ ಎಂದಿದ್ದಾರೆ.

    ಎಷ್ಟು ಜನ ಬಿಟ್ಟು ಹೋಗುತ್ತಾರೆ, ಎಷ್ಟು ಮಂದಿ ಉಳಿಯುತ್ತಾರೆ ಎಂದು ನೋಡೋಣ. ನಮ್ಮ ಐವರು ಶಾಸಕರು ಇಲ್ಲಿದ್ದಾರೆ, ಉಳಿದವರೊಂದಿಗೆ ನಾವು ಸಂಪರ್ಕದಲ್ಲಿದ್ದು, ಅವರು ನಮ್ಮೊಂದಿಗೆ ಸೇರಲಿದ್ದಾರೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

    ದಿಗಂಬರ್ ಕಾಮತ್ ಹಲವಾರು ಕೇಸ್​ಗಳನ್ನು ಎದುರಿಸುತ್ತಿರುವುರಿಂದ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಮೈಕೆಲ್ ಲೋಬೋ ಸ್ಥಾನ-ಮಾನಕ್ಕಾಗಿ ಬಿಜೆಪಿ ಜತೆ ಶಾಮೀಲಾಗಿದ್ದಾರೆ. ಇವರಿಬ್ಬರೂ ಬಿಜೆಪಿಯೊಂದಿಗೆ ಸೇರಿಕೊಂಡು ಷಡ್ಯಂತ್ರ ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಇದರಿಂದ ವಿಚಲಿತಗೊಂಡಿಲ್ಲ ಎಂದು ದಿನೇಶ್ ಹೇಳಿದ್ದಾರೆ.

    ಈ ಜಿಲ್ಲೆಯಲ್ಲಿ ನಾಳೆ ಶಾಲೆ-ಕಾಲೇಜುಗಳಿಗೆ ರಜೆ ಇಲ್ಲ; ಹರಿದಾಡುತ್ತಿರುವುದು ನಕಲಿ ಆದೇಶ!

    ಕನ್ಹಯ್ಯ ಲಾಲ್​ ಕೊಲೆ ಪ್ರಕರಣ; ಇನ್ನೊಬ್ಬ ಆರೋಪಿಯ ಬಂಧನ..

    ಫುಡ್​ ಡೆಲಿವರಿ ಬಾಯ್ ಆಗಿ ಮನೆ ಮನೆಗೂ ತೆರಳಿದ ನಾಯಕ ನಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts