More

    ನೀಲಿ ಚಿತ್ರಗಳ ತಾರೆ ಮಿಯಾ ಖಲೀಫಾ ಟಿಕ್​ಟಾಕ್​ ಬ್ಯಾನ್​! ರೊಚ್ಚಿಗೆದ್ದ ಪಾಕಿಸ್ತಾನಿ ಅಭಿಮಾನಿಗಳು

    ಇಸ್ಲಾಮಾಬಾದ್​: ಭಾರತದಲ್ಲಿ ಟಿಕ್​ಟಾಕ್​ ಬ್ಯಾನ್​ ಆಗಿದೆ. ಅದೇ ರೀತಿ ಪಕ್ಕದ ಪಾಕಿಸ್ತಾನದಲ್ಲೂ ಟಿಕ್​ಟಾಕ್​ನ್ನು ಎರಡೆರೆಡು ಬಾರಿ ನಿಷೇಧಿಸಿ ಆಮೇಲೆ ಅನುಮತಿ ನೀಡಲಾಗಿದೆ. ಇದೀಗ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ಹೊಸ ರೀತಿಯಲ್ಲಿ ಟಿಕ್​ಟಾಕ್​ ಮೇಲೆ ಕಣ್ಣಿಡಲು ಪ್ರಾರಂಭಿಸಿದೆ. ಆ್ಯಪ್​ನಲ್ಲಿರುವ ಕಂಟೆಂಟ್​ನ್ನೂ ಸೆನ್ಸಾರ್​ ಮಾಡಿ, ವೈಯಕ್ತಿಕ ಖಾತೆಗಳಿಗೇ ಕತ್ತರಿ ಹಾಕಲಾಗುತ್ತಿದೆ.

    ಇದೀಗ ಪೋರ್ನ್​ ಸ್ಟಾರ್​ ಮಿಯಾ ಖಲೀಫಾಳ ಟಿಕ್​ಟಾಕ್​ ಖಾತೆಗೂ ಪಿಟಿಎ ಕತ್ತರಿ ಹಾಕಿದೆ. ಯಾವುದೇ ಅಧಿಕೃತ ಪ್ರಕಟಣೆ ನೀಡದೆಯೇ ಖಾತೆಯನ್ನು ಬ್ಯಾನ್​ ಮಾಡಲಾಗಿದೆ. ಯಾವ ಕಾರಣಕ್ಕೆ ಬ್ಯಾನ್​ ಮಾಡಿದ್ದೇವೆ ಎನ್ನುವ ವಿಚಾರವನ್ನೂ ಪಿಟಿಎ ತಿಳಿಸಿಲ್ಲ. ಈ ವಿಚಾರವಾಗಿ ಸ್ವತಃ ಮಿಯಾ ಅವರೇ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಆಕ್ರೋಶ ಹೊರಹಾಕಿದ್ದರು. ಮಿಯಾ ಅವರಿಗೆ ಪಾಕ್​ನಲ್ಲಿ ಸಾಕಷ್ಟು ಅಭಿಮಾನಿಗಳಿದ್ದು, ಅವರು ಇದೀಗ ತಮ್ಮ ಸರ್ಕಾರದ ಮೇಲೆ ಆಕ್ರೋಶ ಹೊರಹಾಕಲಾರಂಭಿಸಿದ್ದಾರೆ.

    ಪಾಕಿಸ್ತಾನಿ ಅಭಿಮಾನಿಗಳ ಬೆಂಬಲಕ್ಕೆ ಮನಸೋತಿರುವ ಮಿಯಾ, ಅವರ ಆಕ್ರೋಶವನ್ನು ಕಡಿಮೆ ಮಾಡುವ ಕೆಲಸವನ್ನೂ ಮಾಡಿದ್ದಾರೆ. ಟಿಕ್​ಟಾಕ್​ ಇಲ್ಲವೆಂದು ಬೇಸರ ಬೇಡ, ನಾನು ಇನ್ನು ಮುಂದೆ ನನ್ನ ಟಿಕ್​ಟಾಕ್​ ವಿಡಿಯೋಗಳನ್ನು ಟ್ವಿಟ್ಟರ್​ನಲ್ಲೂ ಹಾಕುತ್ತೇನೆ. ಇಲ್ಲೇ ನನ್ನ ವಿಡಿಯೋ ನೋಡಿ ಎಂದು ಆಕೆ ಪಾಕ್​ ಅಭಿಮಾನಿಗಳಿಗೆ ತಿಳಿಸಿದ್ದಾಳೆ. (ಏಜೆನ್ಸೀಸ್​)

    ಫ್ಲೈಟ್​ನಲ್ಲೇ ಶುರುವಾಯ್ತು ಗಂಡ ಹೆಂಡತಿಯ ರೊಮ್ಯಾನ್ಸ್​! ಬ್ಲಾಂಕೆಟ್​ ಹಾಕಿ ಸುಮ್ಮನಾದ ಸಿಬ್ಬಂದಿ

    ಅತ್ತೆಯ ಕುಪ್ಪಸದಿಂದ ಅವಳದ್ದೇ ಕತ್ತು ಹಿಸುಕಿದ ಸೊಸೆ! ಪೊದೆಯಲ್ಲಿ ಅಡಗಿತ್ತು ಮಗ ಸೊಸೆಯ ರಹಸ್ಯ

    ಅಶ್ಲೀಲ ಸಿಡಿ ಕೇಸ್‌ಗೆ ಬಿಗ್ ಟ್ವಿಸ್ಟ್​! ವಿಡಿಯೋದಲ್ಲಿ ಇರುವುದು ನಾನೇ, ಸಹಮತದಿಂದ ಒಟ್ಟಿಗೆ ಇದ್ದೆವೆಂದ ಜಾರಕಿಹೊಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts