More

    ಬೆಳಗಾವಿಯಲ್ಲಿ ಕನ್ನಡ ಬಾವುಟ ತೆಗೆಯಲು ಕೋರಿ ಎಂಇಎಸ್ ಮುಖಂಡರ ಮೆರವಣಿಗೆ

    ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಹಾರಾಡುತ್ತಿರುವ ಕನ್ನಡ ಬಾವುಟ ತೆರವು ಮಾಡುವಂತೆ ಆಗ್ರಹಿಸಿ ನಡೆಸುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಾಯಕರ ಮೆರವಣಿಗೆಯನ್ನು ಬೆಳಗಾವಿ ಪೊಲೀಸರು ತಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರೊಂದಿಗೆ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಎಂಇಎಸ್​ ಮುಖಂಡರು ತೀವ್ರ ವಾಗ್ವಾದ ನಡೆಸಿದ್ದಾರೆ.

    ನಗರದ ಸಂಭಾಜಿ ವೃತ್ತದಿಂದ ಮೆರವಣಿಗೆಯಲ್ಲಿ ಹೊರಟ ಎಂಇಎಸ್ ನಾಯಕರು ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಸಭೆ ನಡೆಸಬೇಕೆಂಬ ಉದ್ದೇಶ ಹೊಂದಿದ್ದರು. ಈ ರಾಲಿಯು ಜಿಲ್ಲಾಧಿಕಾರಿ ಕಛೇರಿಯ ಮಾರ್ಗವಾಗಿ ಮಹಾನಗರ ಪಾಲಿಕೆ ಕಡೆಗೆ ತೆರಳುತ್ತಿತ್ತು. ಮುಂಜಾಗ್ರತಾ ಕ್ರಮವಾಗಿ ರಸ್ತೆ ಮಧ್ಯದಲ್ಲೇ ರಾಲಿ ಮುಂದೆ ಹೋಗದಂತೆ ಪೊಲೀಸರು ತಡೆದರು.

    ಇದನ್ನೂ ಓದಿ: ಬಜೆಟ್: ಹೊಸ ತೆರಿಗೆಗೆ ತಡೆ: ಹೊಸ ಸಾಲಕ್ಕೆ ನಡೆ

    ಈ ಬಗ್ಗೆ ಪೊಲೀಸರೊಂದಿಗೆ ವಾಗ್ವಾದ ಶುರುಮಾಡಿದ ಎಂಇಎಸ್ ನಾಯಕರು ‘ನಾವು ಹೋಗೇ ಹೋಗುತ್ತೇವೆ’ ಎಂದು ಪಟ್ಟು ಹಿಡಿದರು. ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಲು ಆರಂಭಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ನಾಯಕರಿಗೆ ಹಿಂತಿರುಗುವಂತೆ ಹೇಳಿದರು. ಆದರೆ, ಮಹಾನಗರ ಪಾಲಿಕೆ ಎದುರಿಗಿರುವ ಕನ್ನಡ ಬಾವುಟವನ್ನು ತೆರವು ಮಾಡುವಂತೆ ಕಾರ್ಯಕರ್ತರು ಪಟ್ಟು ಹಿಡಿದರು.

    ಮೊಂಡುತನ ಪ್ರದರ್ಶನ ಮಾಡಿದ ಎಂಇಎಸ್ ಕಾರ್ಯಕರ್ತರು, ಜಿಲ್ಲಾಧಿಕಾರಿಗಳು ಹಿಂದಿಯಲ್ಲಿ ಮಾತನಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ‘ಕನ್ನಡ ಆಡಳಿತ ಭಾಷೆ. ಕನ್ನಡದಲ್ಲೇ ಮಾತನಾಡುತ್ತೇನೆ’ ಎಂದು ಜಿಲ್ಲಾಧಿಕಾರಿ ಹಿರೇಮಠ ಉತ್ತರ ನೀಡಿದರು. ಸ್ವಲ್ಪ ಸಮಯದ ನಂತರ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಹಿಂದಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ‘ಬಜೆಟ್​ ಅಧಿವೇಶನ ಶುರುವಾಗಿದೆ. ಹೀಗಾಗಿ ಈ ವಿವಾದದ ಕುರಿತು ಮತ್ತೊಮ್ಮೆ ಮಾತನಾಡೋಣ’ ಎಂದು ಸಮಾಧಾನ ಪಡಿಸಿದರು.

    ಇದನ್ನೂ ಓದಿ: ಬೆಸ್ಕಾಮ್​ಗೆ ವಂಚನೆ ಮಾಡಿದ್ದವರಿಗೆ ಎಫ್​ಐಆರ್​ ಶಾಕ್​; ನಕಲಿ ಅಂಕಪಟ್ಟಿ ಸಲ್ಲಿಸಿದ್ದರು ನಾಲ್ವರು ಲೈನ್​ಮ್ಯಾನ್​

    ಈ ನಡುವೆ ರಾಲಿಯಲ್ಲಿ ಭಾಗಿಯಾದ ಬಳಿಕ ಪೊಲೀಸರ ಕಣ್ಣು ತಪ್ಪಿಸಿ ಮಹಾನಗರ ಪಾಲಿಕೆ ಕಡೆಗೆ ಕೆಲವು ಎಂಇಎಸ್ ಕಾರ್ಯಕರ್ತರು ತೆರಳಿದರು. ಮಾಜಿ ಮೇಯರ್ ಸರೀತಾ ಪಾಟೀಲ್, ರೇಣು ಕಿಲ್ಲೇಕರ್ ನೇತೃತ್ವದಲ್ಲಿ ಭಗವಾಧ್ವಜ ನೆಡಲು ಪ್ರಯತ್ನ ನಡೆಸಿದ್ದರು. ಪೊಲೀಸರ ಭದ್ರತೆ ಇದ್ದ ಪಾಲಿಕೆ ಮುಂದೆ ಭಗವಾಧ್ವಜ ನೆಡುತ್ತಿದ್ದಾಗ ಮಹಿಳಾ ಕಾರ್ಯಕರ್ತೆಯರನ್ನು ಪೊಲೀಸರು ವಶಕ್ಕೆ ಪಡೆದರು.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    “ಟಿಎಂಸಿ ಸೃಷ್ಟಿ ಮಾಡಿರುವ ಕೊಚ್ಚೆಯಿಂದಾಗಿ ಕಮಲ ಅರಳಲಿದೆ” : ಕೊಲ್ಕತಾದಲ್ಲಿ ಮೋದಿ

    ಅಪ್ಪನ ಹೆಸರು ಕೇಳಿದವನಿಗೆ ಕಾದಿತ್ತು ಶಾಕ್! 27 ವರ್ಷಗಳ ಹಿಂದೆ ನಡೆದಿತ್ತು ಅಪರಾಧ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts