More

    ಕೊನೆಗೂ ನಿಲ್ಲುತ್ತಾ ಮಣಿಪುರದ ಗಲಭೆ? ಮಾತುಕತೆಗೆ ಮುಂದಾದ ಮೀತಿ- ಕುಕಿ ಸಂಘಟನೆಗಳು

    ನವದೆಹಲಿ: ಮಣಿಪುರದಲ್ಲಿ ನಿರಂತರವಾಗಿ ಗಲಭೆಗಳು ನಡೆಯುತ್ತಿದ್ದು, ಹಿಂಸಾಚಾರಕ್ಕೆ ಇತೀ ಶ್ರೀ ಹಾಡಲು ಮುಂದಾಗಿರುವ ಕೇಂದ್ರ ಸರ್ಕಾರ, ಕುಕಿ ಮತ್ತು ಮೀತಿ ಸಮುದಾಯದ ಮುಖಂಡರೊಂದಿಗೆ ಸಂವಹನ ಮಾರ್ಗಗಳನ್ನು ಕಂಡುಹಿಡಿಯಲು ತೀವ್ರವಾಗಿ ಪ್ರಯತ್ನಿಸುತ್ತಿದೆ.

    ಬುಧವಾರ, ಈಶಾನ್ಯಕ್ಕೆ ಕೇಂದ್ರ ಸರ್ಕಾರದಿಂದ ನೇಮಕಗೊಂಡ ಐಬಿ ಅಧಿಕಾರಿ ಅಕ್ಷಯ್ ಮಿಶ್ರಾ ಅವರು ಕುಕಿ ಉಗ್ರಗಾಮಿ ಗುಂಪುಗಳ ನಾಯಕರೊಂದಿಗೆ ಸರ್ಕಾರದೊಂದಿಗಿನ ಕಾರ್ಯಾಚರಣೆಯ ಅಮಾನತು (SoO) ಒಪ್ಪಂದದ ಅಡಿಯಲ್ಲಿ ಮಾತುಕತೆ ನಡೆಸಿದರು ಎಂದು ವರದಿಯಾಗಿದೆ . ಮತ್ತೊಂದು ಸುತ್ತಿನ ಮಾತುಕತೆಯಲ್ಲಿ ಸರ್ಕಾರವು ಮಣಿಪುರ ಸಮಗ್ರತೆಯ ಸಮನ್ವಯ ಸಮಿತಿಯ (COCOMI) ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿತು.

    ಇದನ್ನೂ ಓದಿ: ಮಣಿಪುರ ಮಹಿಳೆಯರ ವೈರಲ್ ವಿಡಿಯೋ ಕುರಿತು ಪ್ರತಿಕ್ರಿಯಿಸಿದ ಅಮೆರಿಕ

    ಪ್ರತಿಪಕ್ಷಗಳು ಮತ್ತು ನೆರೆಯ ರಾಜ್ಯಗಳ ನಡುವೆ, ವಿಶೇಷವಾಗಿ ಮಿಜೋರಾಂನಲ್ಲಿ ಹೆಚ್ಚುತ್ತಿರುವ ಭಿನ್ನಾಭಿಪ್ರಾಯ ಇರುವಾಗ, ಬೇರೆ ರಾಜ್ಯದ ಆಂತರಿಕ ವಿಷಯಗಳಲ್ಲಿ ಮಧ್ಯಪ್ರವೇಶಿಸದಂತೆ ಮಿಜೋರಾಂ ಸಿಎಂ ಝೋರಂತಂಗಾಗೆ ಮಣಿಪುರ ಸಿಎಂ ಸ್ಪಷ್ಟವಾಗಿ ಸೂಚಿಸಿದ್ದಾರೆ. ಇತ್ತೀಚೆಗೆ, ಜನಾಂಗೀಯ ಹಿಂಸಾಚಾರ-ಪೀಡಿತ ಮಣಿಪುರದಲ್ಲಿ ಕುಕಿ ಬುಡಕಟ್ಟು ಜನಾಂಗದವರ ಜತೆ ಒಗ್ಗಟ್ಟಿನಿಂದ ನಡೆಸಲಾದ ರ್ಯಾಲಿಯಲ್ಲಿ ಝೋರಂತಂಗಾ ಸೇರಿಕೊಂಡಿದ್ದರು.

    ಇದನ್ನೂ ಓದಿ: ATM ಒಳಗೆ ಹೋದಾಗ ಅಪಹರಣ​: ಇಡೀ ರಾತ್ರಿ ಬೆಟ್ಟದಲ್ಲಿ ನಡೆದ ಕರಾಳ ಘಟನೆ ಬಿಚ್ಚಿಟ್ಟ ಮಣಿಪುರದ ಯುವತಿ.

    ಎರಡು ಸಮುದಾಯಗಳ ನಡುವೆ ಕೇಂದ್ರ ಸರ್ಕಾರವು ಕೆಲ ತಿಂಗಳ ಕಾಲ ಮಧ್ಯಸ್ಥಿಕೆ ವಹಿಸಿದ್ದು, ಇದೀಗ ರಾಜ್ಯದಲ್ಲಿ ಶಾಂತಿ ನೆಲೆಸುವತ್ತ ಗಮನಹರಿಸಿದೆ. ಮೇ ತಿಂಗಳಲ್ಲಿ ಹಿಂಸಾಚಾರದ ಮೊದಲು, ಕೇಂದ್ರವು ರಾಜಕೀಯ ಪರಿಹಾರಕ್ಕಾಗಿ ಮಾತುಕತೆಯಲ್ಲಿ ತೊಡಗಿತ್ತು. ಆದರೆ ಕೇಂದ್ರ ಮತ್ತು ಎರಡು ಸಮುದಾಯಗಳ ನಡುವಿನ ಪ್ರಸ್ತುತ ಮಾತುತೆಯ ಸರಣಿಯು ಮುಖ್ಯವಾಗಿ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಪರಿಹಾರವನ್ನು ಕಂಡುಕೊಳ್ಳುವತ್ತ ಗಮನಹರಿಸಿದೆ ಎಂದು ಐಇಯ ಡೆಪ್ಟಿಮಾನ್ ತಿವಾರಿ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದಾರೆ.

    ಕೇಂದ್ರದ ಮೀತಿ ಮತ್ತು ಕುಕಿ ಸಮುದಾಯದ ನಡುವಿನ ಪ್ರಸ್ತುತ ಸುತ್ತಿನ ಮಾತುಕತೆಗಳ ಪರಿಣಾಮ ಏನು?

    ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಘಟನೆಗಳ ನಿಯಮಿತ ಮೇಲ್ವಿಚಾರಣೆಯು ಪ್ರಸ್ತುತ ಸುತ್ತಿನ ಮಾತುಕತೆಗಳ ಪರಿಣಾಮವನ್ನು ಪ್ರತಿಬಿಂಬಿಸುತ್ತಿದೆ. ಮಣಿಪುರದಲ್ಲಿ ಹಿಂಸಾಚಾರದ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೂ ಕೆಲ ಪ್ರದೇಶಗಳಲ್ಲಿ ಗುಂಡಿನ ದಾಳಿ ಮತ್ತು ಬೆಂಕಿ ಹಚ್ಚುವ ಘಟನೆಗಳು ಪ್ರತಿದಿನ ವರದಿಯಾಗುತ್ತಿವೆ ಎಂದು ಮಣಿಪುರದ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಪವನ್​ ಕಲ್ಯಾಣ್​ ಕ್ರೇಜ್​; ಟೆಸ್ಲಾ ಲೈಟ್ ಶೋ ಮೂಲಕ ‘ಬ್ರೋ’ ಚಿತ್ರಕ್ಕೆ ಶುಭಾಶಯ ತಿಳಿಸಿದ ಅಮೆರಿಕಾ ಫ್ಯಾನ್ಸ್!​

    ಮಣಿಪುರದಲ್ಲಿ ರಾಜಕೀಯ ಪರಿಸ್ಥಿತಿ ಹದಗೆಟ್ಟಿದೆ

    ಮಣಿಪುರದಲ್ಲಿ ಹಿಂಸಾಚಾರಕ್ಕೆ ಪರಿಹಾರವನ್ನು ತರುವ ಪ್ರಯತ್ನಗಳು ನಡೆಯುತ್ತಿರುವುದರಿಂದ, ಮೀತಿ ಮತ್ತು ಕುಕಿ ಸಮುದಾಯಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ರಾಜಕೀಯ ಪರಿಹಾರವು ಸ್ಥಗಿತಗೊಂಡಿದೆ. ರಾಜ್ಯ ಸರ್ಕಾರದ ಮೇಲಿನ ಎಲ್ಲಾ ಭರವಸೆಯನ್ನು ಕಳೆದುಕೊಂಡ ನಂತರ, ಕುಕಿಗಳು ಪ್ರತ್ಯೇಕ ಆಡಳಿತಕ್ಕೆ ಒತ್ತಾಯಿಸುತ್ತಿದ್ದಾರೆ. ಆದರೆ ಸಿಎಂ ಯಥಾಸ್ಥಿತಿಯನ್ನು ಸ್ಥಾಪಿಸುವತ್ತ ಒಲವು ತೋರುತ್ತಿದ್ದಾರೆ ಎಂದು ವರದಿಯಾಗಿದೆ. ಎರಡೂ ಸನ್ನಿವೇಶಗಳು ರಾಜ್ಯದಲ್ಲಿ ಮತ್ತೊಂದು ಹಿಂಸಾಚಾರದ ಸರಣಿಯನ್ನು ಪ್ರಚೋದಿಸಬಹುದು. ಕುಕಿಗಳಿಗೆ ಪ್ರತ್ಯೇಕ ಆಡಳಿತವು ಪ್ರಸ್ತುತ ಪರಿಸ್ಥಿತಿಯಲ್ಲಿ ಮೀತಿ ಸಮುದಾಯಕ್ಕೆ ಕೋಪ ತರಬಹುದು. ಆದರೆ ಕುಕಿಗಳು ಯಥಾಸ್ಥಿತಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ನಡೆಯುತ್ತಿರುವ ಮಾತುಕತೆಗಳಲ್ಲಿ ಭಾಗಿಯಾಗಿರುವ ಪ್ರಮುಖ ರಾಜಕೀಯ ನಾಯಕ ತಿಳಿಸಿದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts