More

    ನನ್ನನ್ನು ಸಾವಿನ ಕಡೆಗೆ ನೂಕಲಾಗುತ್ತಿದೆ: ಪ್ರಧಾನಿ ಮೋದಿಗೆ ಟ್ವೀಟ್​ ಟ್ಯಾಗ್​ ಮಾಡಿ ಕಣ್ಣೀರಿಟ್ಟ ನಟಿ!

    ಚೆನ್ನೈ: ಸದಾ ವಿವಾದಗಳಿಂದ ಸುದ್ದಿ ಮಾಡುವ ಕಾಲಿವುಡ್​ ನಟಿ ಮೀರಾ ಮಿಥುನ್​ ಇದೀಗ ಆತ್ಮಹತ್ಯೆಯ ಮಾತುಗಳನ್ನಾಡಿದ್ದಾರೆ. ಈ ಹಿಂದೆ ಸೂರ್ಯ, ವಿಜಯ್​ ಸೇರಿದಂತೆ ಅನೇಕ ನಟರ ವಿರುದ್ಧ ಮಾತನಾಡಿ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಲ್ಲದೆ, ನಟರ ಅಭಿಮಾನಿಗಳಿಂದ ತೀವ್ರ ನಿಂದನೆಗೆ ಒಳಗಾಗಿದ್ದರು.

    ಆತ್ಮಹತ್ಯೆ ನಿರ್ಧಾರ ಮಾಡಿರುವುದಾಗಿ ಟ್ವಿಟರ್​ನಲ್ಲಿ ತಿಳಿಸಿರುವ ಮೀರಾ ಮಿಥುನ್​, ಪ್ರಧಾನಿ ಮೋದಿ ಅವರಿಗೆ ಟ್ಯಾಗ್​ ಮಾಡಿದ್ದಾರೆ. ಕೆಲವು ಜನರ ಕಿರುಕುಳದಿಂದ ನಾನು ಖಿನ್ನತೆಗೆ ಒಳಗಾಗಿದ್ದು, ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದೇನೆ. ನಾನು ಆತ್ಮಹತ್ಯೆ ಖಿನ್ನತೆ ಹೊಂದಿದ್ದೇನೆ. ನನ್ನ ಖಿನ್ನತೆಯನ್ನು ಎಲ್ಲ ಜಾಲತಾಣ ವೇದಿಕೆಯಲ್ಲೂ ರೆಕಾರ್ಡ್​ ಮಾಡಿದ್ದೇನೆ. ಆದರೂ ನನ್ನ ಮೇಲಿನ ಕಿರುಕುಳ ಮಾತ್ರ ಕಡಿಮೆ ಆಗಿಲ್ಲ. ನನ್ನ ಮಾನಸಿಕ ಆರೋಗ್ಯ ಹದಗೆಡುತ್ತಿದೆ ಎಂದು ಮೀರಾ ಮಿಥುನ್​ ನೋವು ತೋಡಿಕೊಂಡಿದ್ದಾರೆ.

    ಇದನ್ನೂ ಓದಿರಿ: ಪ್ರಾಮಿಸ್​ ದಿನದಂದೇ ಪ್ರೀತಿ ತಿರಸ್ಕರಿಸಿದ ಯುವತಿಗೆ ಸಾವಿನ ಶಿಕ್ಷೆ ಕೊಟ್ಟ ಪ್ರಿಯಕರ!

    ಕಳೆದ ಮೂರು ವರ್ಷದಿಂದ ನನಗೆ ಕಿರುಕುಳ ನೀಡಲಾಗುತ್ತಿದೆ. ಆದ್ದರಿಂದ ನಾನು ಜಾಲತಾಣದಲ್ಲಿ ಸಕ್ರಿಯಳಾಗಿರಲಿಲ್ಲ. ಆದರೂ ನನ್ನ ಸಾಮರ್ಥ್ಯದಿಂದ ಮತ್ತೆ ಜಾಲತಾಣದಲ್ಲಿ ಸಕ್ರಿಯಳಾಗಿದ್ದೇನೆ. ಏಕೆಂದರೆ, ನನ್ನ ಅಭಿಮಾನಿಗಳು, ಜನರು, ಮತ್ತು ನನ್ನ ಕೆಲಸದ ಬಗ್ಗೆ ಸಂವಹನ ನಡೆಸುವ ಮಾಧ್ಯಮ ಇದಾಗಿದೆ. ಆದರೆ, ಭಾರತದಲ್ಲಿರುವ ಸ್ವಜನಪಕ್ಷಪಾತ ನನ್ನನ್ನು ಕೊಲ್ಲುತ್ತಿದೆ. ನಾನೀಗ ಸಂಪೂರ್ಣ ಖಿನ್ನತೆಗೆ ಒಳಗಾಗಿದ್ದೇನೆ. ನನಗಾಗುತ್ತಿರುವ ನೋವನ್ನು ತಡೆಯಲೇಬೇಕಿದೆ. ಹೀಗಾಗಿ ನಾನು ಸಾಯಲೇಬೇಕಿದೆ.

    ನಾನು ನನ್ನ ಖಿನ್ನತೆಯನ್ನು ಜಾಲತಾಣದಲ್ಲಿ ರೆಕಾರ್ಡ್​ ಮಾಡಿದ್ದೇನೆ. ಸಾಕಷ್ಟು ಕೆಟ್ಟ ಕಾಮೆಂಟ್​ಗಳು ಬರುತ್ತಿವೆ. ನಾನು ಈ ಜಗತ್ತಿನಲ್ಲಿ ಜೀವಿಸಲು ಆಗುತ್ತಿಲ್ಲ, ನಾನು ಸಹ ಒಳ್ಳೆಯ ಕೆಲಸವನ್ನು ಹೊಂದಿದ್ದೇನೆ. ನನಗೂ ಕುಟುಂಬ ಮತ್ತು ಸ್ನೇಹಿತರು ಇದ್ದಾರೆ. ಆದರೆ, ದ್ವೇಷಿಗಳು ನನ್ನ ಸಾವನ್ನು ಬಯಸಿದ್ದಾರೆ. ಶತ್ರುಗಳು ನನಗೆ ನೋವು ನೀಡುತ್ತಿದ್ದಾರೆ. ಹೀಗಾಗಿ ನನ್ನ ನೋವಿಗೆ ಕೊನೆಗಾಣಿಸಬೇಕಿದೆ. ನಾನು ಸಾಯಲೇಬೇಕಿದೆ.

    ಇದನ್ನೂ ಓದಿರಿ: ನಾಯಿ ಹೆಸರಿಗೆ 36 ಕೋಟಿ ರೂ. ಮೌಲ್ಯದ ಆಸ್ತಿ ಬರೆದ ಭೂಪ! ಸಾಕುವವರಿಗೂ ಸಿಗುತ್ತೆ ಲಕ್ಷ ಲಕ್ಷ ಹಣ!

    ಕಾಮೆಂಟ್​ಗಳನ್ನು ನನ್ನನ್ನು ಸಾಯುವಂತೆ ಮಾಡಿವೆ. ನಾನು ವೈಫಲ್ಯಳು ಎಂಬ ಭ್ರಮೆಯನ್ನು ಸೃಷ್ಟಿ ಮಾಡಿದೆ. ನಾನು ಗೆಲುತ್ತೇನೆಂದರು, ಈ ಕಾಮೆಂಟ್​ಗಳು ಮಾತ್ರ ನಿಲ್ಲುತ್ತಿಲ್ಲ. ನನ್ನನ್ನು ಸಾವಿನ ಕಡೆಗೆ ನೂಕುತ್ತಿದೆ. ದಯವಿಟ್ಟು ನನಗೆ ಯಾರಾದರೂ ಸಹಾಯ ಮಾಡಿ ಎಂದು ಮೀರಾ ಕೇಳಿಕೊಂಡಿದ್ದಾರೆ.

    ಒಂದು ವೇಳೆ ನಾನು ಆತ್ಮಹತ್ಯೆ ಮಾಡಿಕೊಂಡರೆ, ನನ್ನ ಸಾವಿಗೆ ಕಾರಣರಾದ ಎಲ್ಲರನ್ನು ನೇಣಿಗೆ ಏರಿಸಬೇಕು ಎಂದು ನರೇಂದ್ರ ಮೋದಿ ಅವರಿಗೆ ಮೀರಾ ಟ್ಯಾಗ್​ ಮಾಡಿ ಮನವಿ ಮಾಡಿದ್ದಾರೆ.

    ಇದನ್ನೂ ಓದಿರಿ: ಇದ್ದಕ್ಕಿದ್ದಂತೆ ಹಸಿರು ಬಣ್ಣಕ್ಕೆ ತಿರುಗಿದ ಎದೆಹಾಲು! ಕಾರಣ ಕೇಳಿದ ತಾಯಿಗೆ ಶಾಕ್​

    ಇನ್ನು ಮೀರಾ ಮಿಥುನ್ ತಮಿಳಿನ ಬಿಗ್​ಬಾಸ್​​ ಸೀಸನ್​​​ 3ರ ಸ್ಪರ್ಧಿಯಾಗಿದ್ದರು. ಅಲ್ಲದೆ ಜೋಡಿ ನಂಬರ್​ ಒನ್​ ರಿಯಾಲಿಟಿ ಶೋನಲ್ಲಿಯೂ ಸ್ಪರ್ಧಿಸಿದ್ದರು. ಇಷ್ಟೇ ಅಲ್ಲದೆ, ಆಗಾಗಾ ಸ್ಟಾರ್​ ನಟರ ಕಾಲೆಳೆಯುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts