More

  ಮೀರಾಗೆ ಕೈಲಾಸಕ್ಕೆ ಹೋಗೋ ಆಸೆಯಂತೆ …

  ಕಳೆದೆರೆಡು ತಿಂಗಳುಗಳಿಂದ ಸತತ ಸುದ್ದಿಯಲ್ಲಿದ್ದವರು ಎಂದರ ಅದು ಕಾಲಿವುಡ್​​ ನಟಿ ಮೀರಾ ಮಿಥುನ್​. ರಜನಿಕಾಂತ್​, ವಿಜಯ್​, ಸೂರ್ಯ, ಜ್ಯೋತಿಕಾ, ತ್ರಿಷಾ ಸೇರಿದಂತೆ ಕಾಲಿವುಡ್​ನ ಜನಪ್ರಿಯ ನಟ-ನಟಿಯರ ಕಾಲೆಳೆಯುತ್ತಿದ್ದ ಮೀರಾ, ಅದೇ ಕಾರಣಕ್ಕೆ ಸುದ್ದಿಯಲ್ಲಿದ್ದರು.

  ಒಂದು ಹಂತದಲ್ಲಿ ಇದೆಷ್ಟು ಅತಿಯಾಯಿತೆಂದರೆ, ಹಿರಿಯ ನಿರ್ದೇಶಕ ಭಾರತೀರಾಜ ಅವರು ಮಧ್ಯಪ್ರವೇಶಿಸಿ, ಮೀರಾಗೆ ಸುಮ್ಮನಿರುವುದಕ್ಕೆ ಹೇಳಬೇಕಾಯಿತು. ಬರೀ ಈ ರೀತಿ ಪುಗಸಟ್ಟೆ ಪ್ರಚಾರ ಪಡೆಯುವುದಕ್ಕಿಂತ ಏನಾದರೂ ಮಾಡಿ ತೋರಿಸು ಎಂದು ಬುದ್ಧಿವಾದ ಹೇಳಿದ್ದರು.

  ಇದನ್ನೂ ಓದಿ: Photos: ಕೌನ್​ ಬನೇಗಾ ಕರೋಡ್​ಪತಿ ಚಿತ್ರೀಕರಣದಲ್ಲಿ ಅಮಿತಾಭ್​ …

  ಭಾರತೀರಾಜ ಅವರ ಬುದ್ಧಿವಾದದ ನಂತರ ಮೀರಾ ಮಿಥುನ್​ ಅವರ ಸುದ್ದಿಯೇ ಇರಲಿಲ್ಲ. ಕಳೆದ 15 ದಿನಗಳಿಂದ ಸುಮ್ಮನಿದ್ದ ಮೀರಾ, ಇದೀಗ ಮತ್ತೊಮ್ಮೆ ಮಾತನಾಡಿದ್ದಾರೆ. ಈ ಬಾರಿ, ಅವರು ಯಾವುದೇ ವಿವಾದ ಮೈಮೇಲೆ ಎಳೆದುಕೊಂಡಿಲ್ಲ. ಬದಲಿಗೆ ಸ್ವಯಂಘೋಷಿತ ದೇವಮಾನವ ಬಿಡದಿ ಮೂಲದ ನಿತ್ಯಾನಂದರ ಬಗ್ಗೆ ಮಾತನಾಡಿದ್ದಾರೆ.

  ಕೈಲಾಸ ಎಂಬ ಹೊಸ ರಾಷ್ಟ್ರವನ್ನು ಸ್ಥಾಪಿಸಿರುವ ನಿತ್ಯಾನಂದ, ಗಣಪತಿ ಹಬ್ಬದಂದು ತಮ್ಮ ದೇಶ ಹೊಸ ಕರೆನ್ಸಿ ಬಿಡುಗಡೆ ಮಾಡಿದ್ದರು. ಈ ವಿಷಯವಾಗಿ ಮೀರಾ ಒಂದು ಟ್ವೀಟ್​ ಮಾಡಿದ್ದಾರೆ. ಕೈಲಾಸಕ್ಕೆ ಒಮ್ಮೆ ಹೋಗಿ ಬರಬೇಕು ಎಂಬ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

  ಇದನ್ನೂ ಓದಿ: ಈ ಎಲ್ಲಾ ಷಡ್ಯಂತ್ರ ಅವರಿಬ್ಬರದ್ದೇ … ಸುಶಾಂತ್​ ಜಿಮ್​ ಪಾರ್ಟ್ನರ್​

  ಈ ಕುರಿತು ಟ್ವೀಟ್​ ಮಾಡಿರುವ ಅವರು, ‘ಎಲ್ಲರೂ ಅವರ ಕಾಲೆಳೆದರು. ಎಲ್ಲರೂ ಅವಮಾನ ಮಾಡಿದರು. ಆದರೆ, ಈಗ ಅವರೊಂದು ರಾಷ್ಟ್ರವನ್ನು ಮುನ್ನಡೆಸುತ್ತಿದ್ದಾರೆ. ದೊಡ್ಡದೊಡ್ಡ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಒಮ್ಮೆ ಕೈಲಾಸಲ್ಲೆ ಭೇಟಿ ಕೊಡಬೇಕು’ ಎಂದು ಅವರು ಬರೆದುಕೊಂಡಿದ್ದಾರೆ.

  See also  ನಿರ್ಮಾಪಕಿಯಾದ ತಾಪ್ಸೀ ಪನ್ನು: 'ಬ್ಲರ್​' ನಿರ್ಮಾಣ

  ನಿತ್ಯಾನಂದ ಅವರ ಅಭಿಮಾನಿಯಾಗಿರುವ ಮೀರಾ, ಅವರ ಬಗ್ಗೆ ಈ ಹಿಂದೆ ಹಲವು ಬಾರಿ ಮಾತನಾಡಿದ್ದಾರೆ. ನಿತ್ಯಾನಂದ ಅವರ ‘ಲಿವಿಂಗ್​ ಎನ್​ಲೈಟ್​ಮೆಂಟ್​’ ಪುಸ್ತಕವನ್ನು ಓದಿ, ಈ ಹಿಂದೆ ಒಮ್ಮೆ ಒಂದು ವಿಡಿಯೋ ಸಹ ಹಾಕಿದ್ದರು.

  ಬಣ್ಣ ಹಚ್ಚೋಕೆ ರೋಜಾ ರೆಡಿಯಂತೆ … ಆದರೆ, ಒಂದು ಕಂಡೀಷನ್​!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts