More

    ಮುಂದಿನ ವರ್ಷ ಎಲ್ಲ ಮಠ ಮಾನ್ಯಗಳಿಗೆ ಅನುದಾನ ನೀಡುತ್ತೇವೆ: ಆರೋಪಕ್ಕೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ್

    ವಿಜಯಪುರ: ಈ ಬಾರಿಯ ಬಜೆಟ್​ನಲ್ಲಿ ಮಠ ಮಾನ್ಯಗಳ ಅನುದಾನ ಕಡಿತ ಮಾಡಲಾಗಿದೆ ಎನ್ನುವ ಆರೋಪವನ್ನು, ಮಾಜಿ ಸಚಿವ ಸಿ.ಸಿ. ಪಾಟೀಲ್ ಹೊರಿಸಿದ್ದು, ಈ ಕುರಿತಾಗಿ ವಿಜಯಪುರದಲ್ಲಿ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, “ನಮಗೆ ಮಠ ಮಾನ್ಯಗಳ ಬಗ್ಗೆ ಅಪಾರ ಗೌರವ ಇದೆ. ಈ ವರ್ಷ ನಾವು ಗ್ಯಾರಂಟಿಗಳಿಗೆ ಹಣ ಮೀಸಲು ಮಾಡಿದ್ದೇವೆ. ಮುಂದಿನ ವರ್ಷ ಎಲ್ಲ ಮಠ ಮಾನ್ಯಗಳಿಗೆ ಅನುದಾನ ಕೊಡ್ತೇವೆ.

    ಇದನ್ನೂ ಓದಿ: ಟೆಸ್ಲಾ ಕಂಪನಿಯು ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪಿಸುವುದಾದರೆ ಸರ್ಕಾರ ಸಹಕಾರ ನೀಡಲಿದೆ: ಎಂ.ಬಿ ಪಾಟೀಲ್​​

    ಸಿ.ಸಿ. ಪಾಟೀಲ್​ರ ಮಠ ಇದ್ದರು ಹೇಳರಿ. ಅವರದ್ದು ಯಾವುದು ಮಠ ಇದ್ರೆ ಹೇಳು ಅಂತ ಹೇಳರಿ” ಎಂದು ಸಿ.ಸಿ. ಪಾಟೀಲ್​ಗೆ ಎಂ.ಬಿ. ಪಾಟೀಲ್ ಟಾಂಗ್ ಕೊಟ್ಟಿದ್ದಾರೆ.

    ಇದೇ ವೇಳೆ ಅವರು “ನಾವು ಬೇದ-ಭಾವ ಮಾಡಲ್ಲ ಎಲ್ಲರಿಗೂ ಅನುದಾನ ಕೊಡುತ್ತೇವೆ. ಹಿಂದೂ ಮಠಗಳು, ಕ್ರಿಶ್ಚಿಯನ್ ಚರ್ಚಗಳಿಗೆ, ಮುಸ್ಲಿಂ ಮಸೀದಿ, ಜೈನರ ಬಸದಿ, ಬೌದ್ಧ ವಿಹಾರಗಳನ್ನ ಸಮಾನವಾಗಿ ಕಾಣುತ್ತೇವೆ. ಎಲ್ಲರಿಗೂ ಹಣಕಾಸಿನ ಅನುದಾನ‌ ಕೊಡುತ್ತೇವೆ. ಒಂದು ವರ್ಷ ಸಿ.ಸಿ. ಪಾಟೀಲ್​ರಿಗೆ ತಾಳ್ಮೆ ಇರಲಿ” ಎಂದಿದ್ದಾರೆ.

    ಹಿಂದಿನ ಸರ್ಕಾರದ ಮೇಲೆ ಗಂಭೀರ ಆರೋಪ

    ಇದೇ ವೇಳೆ ಹಿಂದಿನ ಬಿಜೆಪಿ ಆಡಳಿತದ ಸರ್ಕಾರದ ಮೇಲೆ ಎಂ.ಬಿ. ಪಾಟೀಲ್​ ಗಂಭೀರ ಆರೋಪ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು “ಸಿ.ಸಿ. ಪಾಟೀಲ್​ರು, ತಮ್ಮ ಬಜೆಟ್​ಗಿಂತ ನಾಲ್ಕೈದು ಸಾವಿರ ಕೋಟಿ ಜಾಸ್ತಿ ಖರ್ಚು ಮಾಡಿದ್ದಾರೆ. ಸಿ.ಸಿ. ಪಾಟೀಲ್​ರು ಯಾಕೆ ಹೆಚ್ಚು ಖರ್ಚು ಮಾಡಿದ್ರು, ಗೊತ್ತಲ್ಲ?

    ನೀರಾವರಿ ಇಲಾಖೆಯಲ್ಲಿ 10-15 ಸಾವಿರ ಕೋಟಿ ಹೆಚ್ಚು ಖರ್ಚು ಮಾಡಿದ್ದಾರೆ. ಬಜೆಟ್​ಗಿಂತ ಹೆಚ್ಚು ಯಾಕೆ ಖರ್ಚು ಮಾಡಿದ್ದೀರಿ? ಜನರನ್ನ ಯಾಕೆ ಮರಳು ಮಾಡಿದ್ದೀರಿ? ಇದರ‌ ಹಿಂದಿನ ಉದ್ದೇಶ ಏನು ಹಾಗಿದ್ರೆ?” ಎಂದು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: ಸೂಲಿಬೆಲೆ ವಿರುದ್ಧ ಸಚಿವ ಎಂ.ಬಿ ಪಾಟೀಲ್ ಹೇಳಿಕೆಯನ್ನು ಪ್ರಶ್ನಿಸಿದ ನಟ ಜಗ್ಗೇಶ್

    “ಬಿಬಿಎಂಪಿಯಲ್ಲೂ ಇದೆ ಭ್ರಷ್ಟಾಚಾರ”

    ಇನ್ನು ಬಿಬಿಎಂಪಿಯಲ್ಲೂ ಭ್ರಷ್ಟಾಚಾರ ಇರುವ ಬಗ್ಗೆ ಮಾತನಾಡಿದ ಎಂ.ಬಿ. ಪಾಟೀಲ್, “ಲೂಟಿ ಹೊಡೆಯಲು ಬಜೆಟ್​ಗಿಂತ ಹೆಚ್ಚಿನ ಅನುದಾನ ಖರ್ಚು ಮಾಡಿದ್ದೀರಿ. ಬಜೆಟ್​ಗಿಂತ ಹೆಚ್ಚು ಖರ್ಚು ಮಾಡುವಾಗ ನಿಮ್ಮ ಶಿಸ್ತು ಎಲ್ಲಿತ್ತು? ನೀವು ಮಾಡಿದ ಅಕ್ರಮಗಳನ್ನ, ಅಶಿಸ್ತನ್ನ ಎಳೆ-ಎಳೆಯಾಗಿ ನಮ್ಮ ಸಿಎಂ ಬಜೆಟ್ ಪುಸ್ತಕದಲ್ಲಿಯೆ ಹೇಳಿ ಬಿಟ್ಟಿದ್ದಾರೆ. ಇವರ ಮುಖ ಏನು ಉಳಿದಿಲ್ಲ, ಇವರನ್ನ ಸಿಎಂ ಎಕ್ಸ್​ಪೋಸ್ ಮಾಡಿದ್ದಾರೆ” ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts