More

    ಮ್ಯಾಕ್ಸ್​​ವೆಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ BBL ದಾಖಲೆಗಳೆಲ್ಲ ಉಡೀಸ್!

    ಆಸ್ಟ್ರೇಲಿಯಾದ ಸ್ಟಾರ್ ಆಲ್​ರೌಂಡರ್​ ಗ್ಲೆನ್ ಮ್ಯಾಕ್ಸ್​ವೆಲ್​ ಬಿಗ್​​ಬ್ಯಾಶ್​ ಲೀಗ್​​ನ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಹಲವು ದಾಖಲೆಗಳಿಗೆ ಪಾತ್ರರಾಗಿದ್ದಾರೆ.

    ಮೆಲ್ಬೋರ್ನ್​ ಸ್ಟಾರ್ಸ್ ತಂಡ ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿದೆ. ಆದರೆ, ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಮುಗಿಸುವ ತವಕದಲ್ಲಿತ್ತು. ಹೋಬರ್ಟ್ ಹರಿಕೇನ್ಸ್ ವಿರುದ್ದ ಮೊದಲು ಬ್ಯಾಟಿಂಗ್ ಇಳಿದ ಮೆಲ್ಬೋರ್ನ್​ ಸ್ಟಾರ್ಸ್ 20 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು ಬರೋಬ್ಬರಿ 273 ರನ್​ಗಳಿಸಿತು.​ ಆರಂಭಿಕನಾಗಿ ಕಣಕ್ಕಿಳಿದಿದ್ದ ಮ್ಯಾಕ್ಸ್​ವೆಲ್ ತಮ್ಮ 2ನೇ ಬಿಬಿಎಲ್ ಮತ್ತು ಲೀಗ್ ಇತಿಹಾಸದ 2ನೇ ವೇಗದ ಶತಕ ದಾಖಲಿಸಿದರು.

    ತಮ್ಮ 100ನೇ ಬಿಬಿಎಲ್​ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಅವರು ಒಟ್ಟಾರೆ 64 ಎಸೆತಗಳಲ್ಲಿ 22 ಬೌಂಡರಿ, 4 ಸಿಕ್ಸರ್​ಗಳ ಸಹಿತ ಅಜೇಯ 154 ರನ್​ ಚಚ್ಚಿದರು. ಇವರಿಗೆ ಸಾಥ್​ ನೀಡಿದ ಮಾರ್ಕಸ್ ಸ್ಟೋಯ್ನಿಸ್​ 31 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್​ಗಳ ಸಹಿತ ಅಜೇಯ 75 ರನ್​ ಚಚ್ಚಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts