More

    ಗಂಭೀರ ಕಳವಳಕಾರಿ ವಿಷಯ’: ಸಂಸತ್ತಿನ ಭದ್ರತಾ ಲೋಪದ ಕುರಿತು ಸಂಸದರಿಗೆ ಪತ್ರ ಬರೆದ ಸ್ಪೀಕರ್​

    ನವದೆಹಲಿ: ಸಂಸತ್ತಿನ ಭದ್ರತಾ ಲೋಪ ಪ್ರಕರಣ ಕುರಿತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಶನಿವಾರ ಎಲ್ಲಾ ಸಂಸದರಿಗೆ ಪತ್ರ ಬರೆದಿದ್ದಾರೆ. ಇದು ತೀವ್ರ ಕಳವಳಕಾರಿ ವಿಷಯವಾಗಿದೆ ಎಂದಿರುವ ಅವರು, ವಿವಿಧ ರೀತಿಯಲ್ಲಿ ಪರಿಶೀಲನೆಗಾಗಿ “ಉನ್ನತ ಅಧಿಕಾರ ಸಮಿತಿ” ರಚಿಸಿರುವುದಾಗಿ ಸದನದ ಸದಸ್ಯರಿಗೆ ತಿಳಿಸಿದ್ದಾರೆ.

    ಸಂಸತ್ತಿನ ಸಂಕೀರ್ಣದಲ್ಲಿ ಭದ್ರತೆ ಮತ್ತು ಡಿಸೆಂಬರ್ 13ರ ಘಟನೆ ಪುನರಾವರ್ತನೆಯಾಗದಂತೆ ಖಾತ್ರಿಪಡಿಸಲು ಕ್ರಿಯಾ ಯೋಜನೆಯನ್ನು ಇದು ರೂಪಿಸಲಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

    ಘಟನೆ ಬಗ್ಗೆ ಆಳವಾದ ತನಿಖೆಗಾಗಿ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಲಾಗಿದೆ. ಸಂಸತ್ತಿನ ಸಂಕೀರ್ಣದಲ್ಲಿ ಭದ್ರತೆಯ ವಿವಿಧ ಅಂಶಗಳನ್ನು ಪರಿಶೀಲಿಸಲು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಚಿತಪಡಿಸಿಕೊಳ್ಳಲು ಬಲವಾದ ಕ್ರಿಯಾ ಯೋಜನೆ ರೂಪಿಸಲು ನಾನು ಉನ್ನತ ಅಧಿಕಾರದ ಸಮಿತಿ ಸಹ ರಚಿಸಿದ್ದೇನೆ ಎಂದು ಓಂ ಬಿರ್ಲಾ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

    “ಈ ಸಮಿತಿಯ ವರದಿಯನ್ನು ಶೀಘ್ರದಲ್ಲೇ ಸದನದೊಂದಿಗೆ ಹಂಚಿಕೊಳ್ಳಲಾಗುವುದು” ಎಂದೂ ಅವರು ಹೇಳಿದ್ದಾರೆ.

    2001ರ ಸಂಸತ್ತಿನ ಭಯೋತ್ಪಾದಕ ದಾಳಿಯ ವರ್ಷಾಚರಣೆ ಸಂದರ್ಭದಲ್ಲಿ ಭದ್ರತಾ ಉಲ್ಲಂಘನೆ ಸಂಭವಿಸಿದೆ. ಕಳೆದ ಡಿ. 13ರಂದು ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ. ಎಂಬುವರು ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದ್ದು, ಡಬ್ಬಿಗಳಿಂದ ಹಳದಿ ಅನಿಲ ಬಿಡುಗಡೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಲಲಿತ್ ಝಾ ಸೇರಿ 6 ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ.

    14 ಸಂಸದರ ಅಮಾನತಿಗೂ ಡಿಸೆಂಬರ್ 13ರ ಘಟನೆಗೂ ಯಾವುದೇ ಸಂಬಂಧವಿಲ್ಲ. ಸದನದ ಪಾವಿತ್ರ್ಯತೆ ಎತ್ತಿಹಿಡಿಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಲೋಕಸಭೆ ಸ್ಪೀಕರ್ ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

    “ಕೆಲವು ಗೌರವಾನ್ವಿತ ಸದಸ್ಯರನ್ನು ಸದನದ ಸೇವೆಯಿಂದ ಅಮಾನತುಗೊಳಿಸುವ ಸದನದ ನಿರ್ಧಾರವನ್ನು ಡಿಸೆಂಬರ್ 13ರಂದು ಸಂಭವಿಸಿದ ಘಟನೆಗೆ ಕೆಲವು ಗೌರವಾನ್ವಿತ ಸದಸ್ಯರು ಮತ್ತು ರಾಜಕೀಯ ಪಕ್ಷಗಳು ಜೋಡಿಸುತ್ತಿರುವುದು ನಿಜಕ್ಕೂ ದುರದೃಷ್ಟಕರ ’’ ಎಂದು ಬಿರ್ಲಾ ಹೇಳಿದ್ದಾರೆ.

    ಮುಂದಿನ ಮಾರುಕಟ್ಟೆಗೆ 11 ಐಪಿಒಗಳು ಲಗ್ಗೆ: ಹೊಸ ಕಂಪನಿಯ ಷೇರು ಖರೀದಿಸುವವರಿಗೆ ಸುಗ್ಗಿ

    ವಿದ್ಯಾರ್ಥಿ ಜತೆ ಶಿಕ್ಷಕಿಯ ರತಿಕ್ರೀಡೆ: ಇದನ್ನು ಪತ್ತೆ ಮಾಡಲು ತಾಯಿ ಬಳಸಿದ ಟ್ರ್ಯಾಕಿಂಗ್ ಆ್ಯಪ್​ ಯಾವುದು ಗೊತ್ತೆ?

    ಸ್ಕೂಟರ್​ನಲ್ಲಿ ಕುಳಿತು ಆಗಸದಲ್ಲಿ ಹಾರಾಟ ನಡೆಸಿದ: ಇದು ಸಾಧ್ಯವಾದದ್ದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts