More

    ಸ್ಕೂಟರ್​ನಲ್ಲಿ ಕುಳಿತು ಆಗಸದಲ್ಲಿ ಹಾರಾಟ ನಡೆಸಿದ: ಇದು ಸಾಧ್ಯವಾದದ್ದು ಹೇಗೆ?

    ನವದೆಹಲಿ: ಸ್ಕೂಟರ್​ ಎಲ್ಲಿ ಓಡುತ್ತದೆ? ನೆಲದ ಮೇಲೆ, ರಸ್ತೆಯಲ್ಲಿ ಅಂಥ ಯಾರಾದರೂ ಪಟ್ಟನೇ ಉತ್ತರ ಹೇಳಬಹುದು. ಆದರೆ, ಸಾಕಷ್ಟು ವೈರಲ್​ ಆಗಿರುವ ಈ ವಿಡಿಯೋ ನೋಡಿದರೆ, ಸ್ಕೂಟರ್​ ಗಾಳಿಯಲ್ಲೂ ಹಾರಾಡುತ್ತದೆ ಎಂದೇ ಹೇಳಬೇಕಾಗುತ್ತದೆ.

    ಎಲೆಕ್ಟ್ರಿಕ್ ದ್ವಿಚಕ್ರ ವಾಹನದಲ್ಲಿಯೇ ಕುಳಿತುಕೊಂಡು ವ್ಯಕ್ತಿಯೊಬ್ಬರು ಪ್ಯಾರಾಗ್ಲೈಡಿಂಗ್​ ಮಾಡಿ, ಗಾಳಿಯಲ್ಲಿ ಹಾರುತ್ತಿರುವುದನ್ನು ತೋರಿಸುವ ಆಕರ್ಷಕ ವಿಡಿಯೋ ಹಿಮಾಚಲ ಪ್ರದೇಶದಲ್ಲಿ ಕಂಡುಬಂದಿತು. ಈ ವಿಚಿತ್ರ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಅದು ಸಾಕಷ್ಟು ವೈರಲ್ ಆಗಿದೆ.

    ತೂಕವನ್ನು ಕಡಿಮೆ ಮಾಡಲು ಮತ್ತು ಹಾರಾಟದ ಸಮಯದಲ್ಲಿ ಯಾವುದೇ ಸಮಸ್ಯೆಯನ್ನು ತಪ್ಪಿಸಲು ಈ ಪ್ಯಾರಾಗ್ಲೈಡರ್ ದ್ವಿಚಕ್ರ ವಾಹನದ ಬ್ಯಾಟರಿಯನ್ನು ತೆಗೆದುಹಾಕಿದ್ದಾರೆ. ಹಿಮಾಚಲ ಪ್ರದೇಶದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಬಾಂಡ್ಲಾ ಧಾರ್‌ನಲ್ಲಿ ಈ ವಿಶಿಷ್ಟ ಘಟನೆ ನಡೆದಿದೆ.

    ಹರ್ಷ ಎಂಬ ಪೈಲಟ್ ಗುರುವಾರ ಇಂತಹ ಪ್ಯಾರಾಗ್ಲೈಡಿಂಗ್ ನಡೆಸಿದ್ದಾರೆ. ಈ ಪ್ರವಾಸಿ ತಾಣದಿಂದ ಇಂತಹ ಸಾಹಸಮಯ ಪ್ರಯತ್ನ ನಡೆದಿರುವುದು ಇದೇ ಮೊದಲಾಗಿದೆ.

    ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಹಷ, ಪ್ಯಾರಾಗ್ಲೈಡಿಂಗ್ ಸಮಯದಲ್ಲಿ ಯಾರಾದರೂ ದ್ವಿಚಕ್ರ ವಾಹನದ ಮೇಲೆ ಕುಳಿತುಕೊಂಡಿರುವುದು ಬಹುಶಃ ಇದೇ ಮೊದಲು ಎಂದು ಸಂತಸದಿಂದಲೇ ಹೇಳಿದ್ದಾನೆ.
    ಇವರು ಪಂಜಾಬ್ ಮೂಲದವರಾಗಿದ್ದು, ತರಬೇತಿ ಪಡೆದ ಪ್ಯಾರಾಗ್ಲೈಡರ್ ಆಗಿದ್ದಾರೆ.

    ವಿಶ್ವದ ಮೂರು ಅಗ್ರ ಆಕ್ರೊ ಪ್ಯಾರಾಗ್ಲೈಡಿಂಗ್ ಸೈಟ್‌ಗಳಲ್ಲಿ ಬಾಂಡ್ಲಾ ಧಾರ್ ಒಂದಾಗಿದೆ. ಪ್ಯಾರಾಗ್ಲೈಡಿಂಗ್ ಮಾಡುವಾಗ ಈ ತಾಣವು ಗೋವಿಂದ್ ಸಾಗರ್ ಜಲಾಶಯದ ಅದ್ಭುತ ನೋಟವನ್ನು ನೀಡುತ್ತದೆ.

    ಪ್ಯಾರಾಗ್ಲೈಡಿಂಗ್, ರೋಮಾಂಚಕ ಸಾಹಸ ಕ್ರೀಡೆಯಾಗಿದೆ, ಗಾಳಿಯ ಸಹಾಯದಿಂದ ತೇಲುವ ಪ್ಯಾರಾಚೂಟ್ ತರಹದ ರೆಕ್ಕೆಯೊಂದಿಗೆ ಆಕಾಶದಲ್ಲಿ ಮೇಲೇರಲು ಅನುವು ಮಾಡಿಕೊಡುತ್ತದೆ. ಪೈಲಟ್‌ಗಳು ಎತ್ತರದ ಬಿಂದುಗಳಿಂದ (ಸಾಮಾನ್ಯವಾಗಿ ಪರ್ವತದ ತುದಿಯಿಂದ) ಉಡಾವಣೆ ಮಾಡುತ್ತಾರೆ, ಎತ್ತರಕ್ಕೆ ಹೋಗಲು ಮತ್ತು ಆಕಾಶ ನ್ಯಾವಿಗೇಟ್ ಮಾಡಲು ಗಾಳಿಯ ಪ್ರವಾಹವನ್ನು ಬಳಸಿಕೊಳ್ಳುತ್ತಾರೆ.

    ಸಂಸತ್ ಭದ್ರತೆ ಉಲ್ಲಂಘನೆ ಪ್ರಕರಣ: ಬಂಧಿತ 6ನೇ ಆರೋಪಿ ಮಹೇಶ್ ಕುಮಾವತ್ ಯಾರು?

    ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ: ಭಕ್ತರಿಗೆ ಸಿಹಿ ಸುದ್ದಿ ನೀಡಿದೆ ರೈಲ್ವೆ ಇಲಾಖೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts