More

    ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ: ಭಕ್ತರಿಗೆ ಸಿಹಿ ಸುದ್ದಿ ನೀಡಿದೆ ರೈಲ್ವೆ ಇಲಾಖೆ…

    ನವದೆಹಲಿ: ರಾಮ ಮಂದಿರ ಉದ್ಘಾಟನೆಗಾಗಿ ಅಯೋಧ್ಯೆಗೆ ಭೇಟಿ ನೀಡಲು ಬಯಸುವ ಭಕ್ತರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಜನವರಿ 22 ರಂದು ಬಹು ನಿರೀಕ್ಷಿತ ಮಹಾಮಸ್ತಕಾಭಿಷೇಕ ಸಮೀಪಿಸುತ್ತಿದ್ದಂತೆ, ಭಾರತೀಯ ರೈಲ್ವೇ ವ್ಯಾಪಕ ಕಾರ್ಯಾಚರಣೆಗೆ ಸಜ್ಜಾಗಿದೆ, ಹಿಂದೂ ಭಕ್ತರಿಗೆ ತೀರ್ಥಯಾತ್ರೆಗೆ ಅನುಕೂಲವಾಗುವಂತೆ ದೇಶದ ವಿವಿಧ ಭಾಗಗಳಿಂದ 1,000 ವಿಶೇಷ ರೈಲುಗಳನ್ನು ಓಡಿಸಲು ಯೋಜಿಸಲಾಗಿದೆ.

    ಈ ರೈಲುಗಳ ಕಾರ್ಯಾಚರಣೆಯು ಜನವರಿ 19 ರಂದು ಪ್ರಾರಂಭವಾಗಲಿದ್ದು, ಭವ್ಯ ಮಂದಿರ ಉದ್ಘಾಟನೆಯ ಮೊದಲ 100 ದಿನಗಳಲ್ಲಿ, ಪವಿತ್ರ ನಗರಕ್ಕೆ ಭೇಟಿ ನೀಡಲು ಭಕ್ತರಿಗೆ ಸಾಕಷ್ಟು ಸಾರಿಗೆ ಅವಕಾಶಗಳನ್ನು ಇದು ಒದಗಿಸಿಕೊಡಲಿದೆ.

    ವಿಶೇಷ ರೈಲುಗಳು ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಪುಣೆ, ಕೋಲ್ಕತ್ತಾ, ನಾಗ್ಪುರ, ಲಖನೌ ಮತ್ತು ಜಮ್ಮು ಸೇರಿದಂತೆ ಪ್ರಮುಖ ನಗರಗಳನ್ನು ಅಯೋಧ್ಯೆಗೆ ಸಂಪರ್ಕಿಸಲಿವೆ. “ಈ ಉದ್ದೇಶಿತ ರೈಲುಗಳ ಸಂಖ್ಯೆಯನ್ನು ಬೇಡಿಕೆಯನ್ನು ಪರಿಗಣಿಸಿ ನಿಯೋಜಿಸಬಹುದು. ಹೆಚ್ಚಿನ ಸಂಖ್ಯೆಯ ರೈಲುಗಳ ನಿಲುಗಡೆಗೆ ಅವಕಾಶ ಕಲ್ಪಿಸಲು ಅಯೋಧ್ಯೆಯಲ್ಲಿ ನಿಲ್ದಾಣವನ್ನು ನವೀಕರಿಸಲಾಗಿದೆ” ಎಂದು ಮೂಲಗಳನ್ನು ತಿಳಿಸಿವೆ.

    ಸಾರಿಗೆ ವ್ಯವಸ್ಥೆಗಳ ಜೊತೆಗೆ, ಭಾರತೀಯ ರೈಲ್ವೆಯ ಅಡುಗೆ ಮತ್ತು ಟಿಕೆಟ್ ವಿಭಾಗವು ಉದ್ಘಾಟನೆಯ 10-15 ದಿನಗಳಲ್ಲಿ ಸೇವೆಗಳನ್ನು ಒದಗಿಸಲು ಹಗಲಿರುಳು ಶ್ರಮಿಸಲು ಸಜ್ಜಾಗಿದೆ. ರಾಮಮಂದಿರ ಉದ್ಘಾಟನೆಯ ಸಮಯದಲ್ಲಿ ಮತ್ತು ನಂತರ ಭಕ್ತರ ಬೇಡಿಕೆಗಳನ್ನು ಪೂರೈಸಲು ಅಧಿಕಾರಿಗಳು ಹಲವಾರು ಆಹಾರ ಮಳಿಗೆಗಳನ್ನು ಸ್ಥಾಪಿಸಲು ಯೋಜಿಸುತ್ತಿದ್ದಾರೆ.

    ಪುನರಾಭಿವೃದ್ಧಿಗೊಂಡ ಅಯೋಧ್ಯೆ ರೈಲು ನಿಲ್ದಾಣವು ಪ್ರತಿದಿನ ಅಂದಾಜು 50,000 ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ, ಇದು ಜನವರಿ 15ರ ವೇಳೆಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

    ಜನವರಿ 22ರಂದು ಭಗವಾನ್ ಶ್ರೀರಾಮನ ವಿಗ್ರಹದ ಪ್ರತಿಷ್ಠಾಪನೆಯ ನಂತರ, ಜನವರಿ 23 ರಿಂದ ದೇವಾಲಯವು ಸಾರ್ವಜನಿಕರಿಗೆ ತೆರೆದಿರುತ್ತದೆ. 1,800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಭವ್ಯವಾದ ದೇವಾಲಯದ ನೆಲಮಹಡಿಯು ವರ್ಷಾಂತ್ಯದೊಳಗೆ ಪೂರ್ಣಗೊಳ್ಳಲಿದೆ.

    ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
    ರಾಮಮಂದಿರ ಟ್ರಸ್ಟ್ ಉದ್ಘಾಟನೆಯ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದೆ. ಮಹತ್ವದ ದಿನವನ್ನು ಗುರುತಿಸಲು ಪ್ರಸಾದ ವಿತರಣೆಗೆ ವಿಶೇಷ ವ್ಯವಸ್ಥೆಗಳೊಂದಿಗೆ 320 ಅಡಿ ದೂರದಿಂದ ಭಗವಾನ್ ರಾಮಲಲ್ಲಾನ ವಿಗ್ರಹ ನೋಡಲು ಭಕ್ತರಿಗೆ ಅವಕಾಶವಿದೆ. ಪ್ರತಿನಿತ್ಯ ಅಂದಾಜು 2 ಲಕ್ಷ ಜನರಿಗೆ ಮೂರ್ತಿಯ ದರ್ಶನ ಏರ್ಪಡಿಸಲು ಉದ್ದೇಶಿಸಲಾಗಿದೆ.

    ಸಂಸತ್​ ಭವನ ಲೋಪ ಪ್ರಕರಣ: ಆರನೇ ಆರೋಪಿ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts