More

    ಐದು ದಿನಗಳಿಗೆ 150 ಕೋಟಿ ಗಳಿಸಿ ದಾಖಲೆ ಮಾಡಿದ ‘ಮಾಸ್ಟರ್​’!

    ಚೆನ್ನೈ: ವಿಜಯ್​ ಅಭಿನಯದ ತಮಿಳು ಚಿತ್ರ ‘ಮಾಸ್ಟರ್​’ ಚಿತ್ರವು ಜನವರಿ 13ರ ಬುಧವಾರ, ಸಂಕ್ರಾಮತಿಯ ಸಂದರ್ಭದಲ್ಲಿ ಎಲ್ಲೆಡೆ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಜನ ಬರುತ್ತಾರೋ, ಇಲ್ಲವೋ ಎಂಬ ಆತಂಕ ಎಲ್ಲರಲ್ಲೂ ಇತ್ತು. ಆದರೆ, ಚಿತ್ರವು ಕೇವಲ ಐದು ದಿನಗಳಲ್ಲಿ ಜಾಗತಿಕವಾಗಿ 150 ಕೋಟಿ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ.

    ಇದನ್ನೂ ಓದಿ: ಏಜೆಂಟ್​ ಅಗ್ನಿಯಾಗಿ ಕತ್ತಿ ಝಳಪಿಸಿದ ಕಂಗನಾ …

    ಹೌದು, ‘ಮಾಸ್ಟರ್​’ ಚಿತ್ರವು ಕೇವಲ ಐದು ದಿನಗಳಲ್ಲಿ 150 ಕೋಟಿ ಸಂಗ್ರಹಿಸಿದೆ ಎಂದು ಹೇಳಲಾಗುತ್ತಿದೆ. ಈ ಪೈಕಿ ಭಾರತದಲ್ಲೇ 125 ಕೋಟಿ ಸಂಗ್ರಹವಾದರೆ, ವಿದೇಶಗಳಲ್ಲಿ 25 ಕೋಟಿ ಗಳಿಕೆ ಮಾಡಿದೆಯಂತೆ. ಇನ್ನು, ಭಾರತದಲ್ಲೂ ತಮಿಳುನಾಡು ಒಂದರಲ್ಲೇ ಐದು ದಿನಗಳಿಗೆ 83 ಕೋಟಿ ಕಲೆಕ್ಷನ್​ ಆದರೆ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ 25 ಕೋಟಿ, ಕರ್ನಾಟಕದಲ್ಲಿ 14 ಕೋಟಿ ಮತ್ತು ಕೇರಳಲ್ಲಿ ಏಳೂವರೆ ಕೋಟಿ ಬಂದಿದೆಯಂತೆ. ಚಿತ್ರವು ಹಿಂದಿಗೆ ಡಬ್​ ಆಗಿ ಬಿಡುಗಡೆಯಾಗಿದ್ದು, ಅಲ್ಲಿಂದಲೂ ಎರಡೂವರೆ ಕೋಟಿ ಗಳಿಸಿದೆ ಎಂದು ಸುದ್ದಿಯಾಗುತ್ತಿದೆ.

    ಲಾಕ್​​ಡೌನ್​ ನಂತರ ಜಗತ್ತಿನ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿ, ಇಷ್ಟೊಂದು ಗಳಿಕೆ ಮಾಡಿದ ಉದಾಹರಣೆ ಇಲ್ಲ. ಆ ನಿಟ್ಟಿನಲ್ಲಿ ‘ಮಾಸ್ಟರ್​’ ಹೊಸ ದಾಖಲೆ ಸೃಷ್ಟಿ ಮಾಡಿದೆ.

    ಮುಂಚೆ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಸರ್ಕಾರವು ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡಿತ್ತು. ಆದರೆ, ಕೇಂದ್ರ ಸರ್ಕಾರಕ್ಕೆ ಇದಕ್ಕೆ ಸಮ್ಮತಿ ಸೂಚಿಸದ ಹಿನ್ನೆಲೆಯಲ್ಲಿ ಶೇ. 50ರಷ್ಟು ಹಾಜರಾತಿಯಲ್ಲೇ ಬಿಡುಗಡೆ ಮಾಡುವುದಕ್ಕೆ ಸೂಚಿಸಿತ್ತು. ಶೇ. 100ರಷ್ಟು ಹಾಜರಾತಿಗೆ ಅನುಮತಿ ತಪ್ಪಿದರೂ, ತಮಿಳುನಾಡು ಸರ್ಕಾರವು ಹೆಚ್ಚು ಪ್ರದರ್ಶನಗಳನ್ನು ನಡೆಸುವುದಕ್ಕೆ ಅನುಮತಿ ನೀಡಿತ್ತು. ಇದರಿಂದ ‘ಮಾಸ್ಟರ್​’ ಚಿತ್ರದ ಪ್ರದರ್ಶನಗಳ ಸಂಖ್ಯೆ ಹೆಚ್ಚಾಗಿ, ಚಿತ್ರತಂಡಕ್ಕೆ ಸಾಕಷ್ಟು ಹಣ ಹರಿದುಬರುತ್ತಿದೆ. ‘ಮಾಸ್ಟರ್​​’ಗೆ ಸಿಕ್ಕ ಈ ಯಶಸ್ಸಿನಿಂದ ಬೇರೆಯವರಿಗೂ ಉತ್ತೇಜನ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.

    ಇದನ್ನೂ ಓದಿ: ‘ಮದಗಜ’ ಅಲ್ಲ, ಶ್ರೀಮುರಳಿ ಇದೀಗ ‘ಮದಯಾನೈ’

    ‘ಮಾಸ್ಟರ್​’ ಚಿತ್ರದಲ್ಲಿ ವಿಜಯ್​, ವಿಜಯ್​ ಸೇತುಪತಿ, ಮಾಳವಿಕಾ ಮೋಹನನ್​ ಮುಂತಾದವರು ನಟಿಸಿದ್ದು, ‘ಖೈದಿ’ ಖ್ಯಾತಿಯ ಲೋಕೇಶ್​ ಕನಕರಾಜ್​ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

    PHOTO GALLERY| ಮಾಲ್ಡೀವ್ಸ್​​ನಲ್ಲಿ ಯಶ್​- ರಾಧಿಕಾ ಸುತ್ತಾಟ; ಅಪ್ಪನ ತೋಳಲ್ಲಿ ಐರಾ, ಯಥರ್ವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts