More

    ಮದುವೆ ತಂದ ಆಪತ್ತು; ಕೋವಿಡ್​ಗೆ ವರನ ತಂದೆ, ವಧುವಿನ ತಾಯಿ ಬಲಿ; ಒಂದೇ ಕುಟುಂಬದ 32 ಜನರಿಗೆ ಸೋಂಕು

    ರಾಣೆಬೆನ್ನೂರು: ಮದುವೆ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ. ವರನ ತಂದೆ, ವಧುವಿನ ತಾಯಿ ಇಬ್ಬರೂ ಕರೊನಾಗೆ ಬಲಿಯಾಗಿದ್ದು, ಶುಕ್ರವಾರ ಒಂದೇ ದಿನ ಆ ಕುಟುಂಬದ 32 ಜನರಿಗೆ ಸೋಂಕು ದೃಢಪಟ್ಟಿದೆ.

    ಜು.29ರಂದು ಮಾರುತಿ ನಗರದ 55 ವರ್ಷದ ವ್ಯಕ್ತಿಯೊಬ್ಬರು ತನ್ನ ಮಗನ ಮದುವೆ ಮಾಡಿದ್ದರು. ಅದೇ ದಿನ ಆ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಗಾಗಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಕರೊನಾ ಸೋಂಕು ದೃಢಪಟ್ಟಿತ್ತು. ಜು.7ರಂದು ಚಿಕಿತ್ಸೆ ಫಲಕಾರಿಯಾಗದೆ ವರನ ತಂದೆ ದಾವಣಗೆರೆಯಲ್ಲಿ ಮೃತಪಟ್ಟಿದ್ದರು. ಇದಾದ ನಾಲ್ಕು ದಿನದಲ್ಲಿ ಅಂದರೆ ಜು.11ರಂದು ವಧುವಿನ ತಾಯಿ ಕೂಡ ಕರೊನಾ ಸೋಂಕಿಗೆ ಬಲಿಯಾಗಿದ್ದರು.

    ಇದನ್ನೂ ಓದಿರಿ video/ ಕಾಲು ಮುರಿದ ನೋವನ್ನೇ ಮರೆಸಿದ ‘ಕುರುಬನ ರಾಣಿ’, ಆಸ್ಪತ್ರೆಯಲ್ಲಿ ಮಲಗಿದ್ದರೂ ಡಾನ್ಸ್!

    ವರನ ತಂದೆಗೆ ಕರೊನಾ ಸೋಂಕು ದೃಢಪಟುತ್ತಿದ್ದಂತೆ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಒಂದೇ ಕುಟುಂಬದ 38 ಜನರನ್ನು ಅಂತರವಳ್ಳಿ ರಸ್ತೆಯ ಸರ್ಕಾರಿ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಎಲ್ಲರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಆ ಪೈಕಿ 32 ಜನರಿಗೆ ಸೋಂಕು ದೃಢಪಟ್ಟಿದೆ. ಇನ್ನೂ 6 ಜನರ ವರದಿ ಬರುವುದು ಬಾಕಿಯಿದೆ.

    ಕರೊನಾ ಸೋಂಕು ಆರಂಭದಿಂದಲೂ ದಿನಕ್ಕೆ 1 ಅಥವಾ 2 ಪ್ರಕರಣ ಕಾಣಿಸಿಕೊಳ್ಳುತ್ತಿದ್ದ ವಾಣಿಜ್ಯನಗರಿ ರಾಣೆಬೆನ್ನೂರಿನಲ್ಲಿ ಮದುವೆ ಸಮಾರಂಭವೊಂದರ ಪರಿಣಾಮ ಇಂದು 32 ಜನರಿಗೆ ಸೋಂಕು ದೃಢಪಟ್ಟಿದ್ದು, ಜನತೆ ಬೆಚ್ಚಿಬಿದ್ದಿದ್ದಾರೆ.

    ‘ರಮ್’ ಕುಡಿದ್ರೆ ಕರೊನಾ ಬರಲ್ಲ; ಕೌನ್ಸಿಲರ್ ರವಿಚಂದ್ರ ಗಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts