More

    ಮನುಷ್ಯರಲ್ಲಷ್ಟೇ ಅಲ್ಲ, ಪ್ರಾಣಿ, ಕೀಟ ಜಗತ್ತಿನಲ್ಲೂ ಶುರುವಾಗಿದೆ ಸಾಮಾಜಿಕ ಅಂತರ ನಿಯಮ ಪಾಲನೆ !

    ಜಗತ್ತಿನಾದ್ಯಂತ ಕರೊನಾ ವೈರಸ್​ ಆವರಿಸಿದೆ. ಇದೀಗ ಸಾಮಾಜಿಕ ಅಂತರ ನಿಯಮ ಪಾಲನೆ ಅತಿ ಮುಖ್ಯವಾಗಿದೆ. ಜಗತ್ತಿನೆಲ್ಲೆಡೆ ಜನರು ಇದನ್ನು ಪಾಲಿಸುತ್ತಿದ್ದಾರೆ. ಅದು ಸಜಹ ಕೂಡ…

    ಆದರೆ ಈ ಮಧ್ಯೆ ಇನ್ನೊಂದು ವಿಷಯ ಬೆಳಕಿಗೆ ಬಂದಿದೆ. ಬರೀ ಮನುಕುಲವಷ್ಟೇ ಅಲ್ಲ, ಪ್ರಾಣಿ ಸಾಮ್ರಾಜ್ಯದಲ್ಲೂ ಕೂಡ ಈ ಸಾಮಾಜಿಕ ಅಂತರ ನಿಯಮ ಪಾಲನೆಯಾಗುತ್ತಿದೆ ಎಂಬ ವಿಚಾರ ಅಧ್ಯಯನದಿಂದ ಬೆಳಕಿಗೆ ಬಂದಿದೆ.
    ಪಕ್ಷಿಗಳು, ಕೋತಿಗಳು, ಮೀನುಗಳು ಅಷ್ಟೇ ಅಲ್ಲ, ಕೀಟ ಸಂಕುಲದಲ್ಲೂ ಈ ಸಾಮಾಜಿಕ ಅಂತರ ಪಾಲನೆ ಮಾಡಲಾಗುತ್ತಿದೆ. ತಮ್ಮ ಪ್ರಬೇಧದಲ್ಲಿ ಯಾರಾದರೂ ಅನಾರೋಗ್ಯಕ್ಕೀಡಾಗಿದ್ದರೆ ಅವರ ಬಳಿ ಹೋಗಲು ಉಳಿದವರು ಹಿಂದೇಟು ಹಾಕುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

    ಹಾಗೇ, ಯಾವುವಾದರೂ ಪ್ರಾಣಿ ಜಡತ್ವದಿಂದಲೋ, ಹೊಟ್ಟೆ ತುಂಬಿದೆ ಎಂದು ಒಂದೆಡೆ ಮಲಗಿಕೊಂಡಿದ್ದರೂ ಉಳಿದವು ಅದನ್ನು ಗಮನಿಸುತ್ತವೆ. ಅವಕ್ಕೆ ಏನೋ ಆಗಿರಬೇಕು ಎಂದು ದೂರವೇ ಉಳಿಯುತ್ತವೆ ಎನ್ನಲಾಗಿದೆ.

    ಕೆರಿಬಿಯನ್​ ಸ್ಪೈನಿ ನಳ್ಳಿಗಳಲ್ಲಿ ಒಂದು ವಿಶೇಷ ಶಕ್ತಿಯಿದೆ. ಅನಾರೋಗ್ಯಕ್ಕೀಡಾದ ನಳ್ಳಿಗಳ ಮೂತ್ರದಲ್ಲಿ ಇರುವ ನಿರ್ದಿಷ್ಟ ರಾಸಾಯನಿಕವನ್ನು ಅವು ಪತ್ತೆ ಹಚ್ಚಬಲ್ಲವು. ಹಾಗೂ ಆ ನಳ್ಳಿಯನ್ನು ಯಾವುದೇ ಕಾರಣಕ್ಕೂ ಹತ್ತಿರ ಸೇರಿಸುವುದಿಲ್ಲ.
    ಬಾವಲಿಗಳೂ ಸಹ ತಮ್ಮ ಗುಂಪಿನಲ್ಲಿ ಯಾವುದಕ್ಕಾದರೂ ಅನಾರೋಗ್ಯ ಉಂಟಾದರೆ ಅವುಗಳನ್ನು ದೂರವೇ ಇಡುತ್ತಿವೆ ಎಂದು ಹೇಳಲಾಗಿದೆ. ಆದರೆ ಅವುಗಳಿಗೆ ತಿನ್ನಲು ಆಹಾರ ತಂದುಕೊಡುತ್ತವೆ ಎಂದು ವರ್ಜೀನಿಯಾದ ಪಾಲಿಟೆಕ್ನಿಕ್​ ಸಂಸ್ಥೆಯ ಜೀವಶಾಸ್ತ್ರಜ್ಞ ಡಾನಾ ಹಾವ್​​ಲೇ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಕೀಟ ಜಗತ್ತೂ ಕೂಡ ಇದೇ ದಾರಿ ಹಿಡಿದಿದೆ. ಹಲವು ಪ್ರಬೇಧದ ಕೀಟಗಳು ತಮ್ಮಷ್ಟಕ್ಕೇ ತಾವು ಇರಲು ಪ್ರಾರಂಭಿಸಿವೆ ಎಂದೂ ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರ ಮದುವೆ ವಯಸ್ಸು ಹದಿನೆಂಟಲ್ಲ..! ಕನಿಷ್ಠ ಪ್ರಾಯ ಹೆಚ್ಚಳದ ಸುಳಿವು ನೀಡಿದ ಪ್ರಧಾನಿ ಮೋದಿ

    ಅಷ್ಟೇ ಅಲ್ಲ, ಯಾವುದಾದರೂ ಜೇನು ನೊಣಗಳೂ ಸಹ ಇದೇ ಕ್ರಮ ಅನುಸರಿಸುತ್ತಿವೆ. ಯಾವುದೇ ನೊಣಕ್ಕೆ ಏನಾದರೂ ಸೋಂಕು ತಗುಲಿದ್ದರೆ, ಅನಾರೋಗ್ಯ ಉಂಟಾಗಿದ್ದರೆ ಅದು ತಮ್ಮ ಗುಂಪಿನ ಸದಸ್ಯರೊಟ್ಟಿಗೆ ಇರುವುದಿಲ್ಲ. ಪ್ರತ್ಯೇಕವಾಗಿ ಕುಳಿತುಕೊಳ್ಳುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ವೈದ್ಯಕೀಯ ಮ್ಯಾಗ್​​ಜಿನ್​ ವರದಿ ಮಾಡಿದೆ.

    ಆದರೆ ಈ ಸಾಮಾಜಿಕ ಅಂತರ ಪಾಲನೆ ಮಾಡುವುದು ಪ್ರಾಣಿ, ಪಕ್ಷಿ, ಕೀಟಗಳಿಗೆ ಒಳ್ಳೆಯದಲ್ಲ. ಇದರಿಂದ ಅಪಾಯ ಎದುರಾಗಬಹುದು ಎಂದು ವರ್ಜೀನಿಯಾದ ಪಾಲಿಟೆಕ್ನಿಕ್​ ಸಂಸ್ಥೆಯ ಜೀವಶಾಸ್ತ್ರಜ್ಞ ಡಾನಾ ಹಾವ್​​ಲೇ ತಿಳಿಸಿದ್ದಾರೆ. (ಏಜೆನ್ಸೀಸ್​)

    ಕರೊನಾ ನಿಯಂತ್ರಿಸುವಲ್ಲಿ ಮತ್ತೊಂದು ದಾಖಲೆ ಬರೆದ ದೆಹಲಿ; ದೇಶದಲ್ಲಿಯೇ ನಂಬರ್​ ಒನ್​…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts