ನವದೆಹಲಿ: ವಿಮಾನದಲ್ಲಿ ಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿ, ವಿಕೃತಿ ಮೆರೆದಿದ್ದ ಸಹ ಪ್ರಯಾಣಿಕನ ಗುರುತನ್ನು ಕೊನೆಗೂ ಪತ್ತೆಹಚ್ಚಲಾಗಿದೆ. ಆರೋಪಿಯನ್ನು ಶಂಕರ್ ಮಿಶ್ರಾ ಎಂದು ಗುರುತಿಸಲಾಗಿದೆ.
ಈ ಘಟನೆ ನವೆಂಬರ್ 26ರಂದು ನ್ಯೂಯಾರ್ಕ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್ನಲ್ಲಿ ನಡೆದಿತ್ತು. ವಿಮಾನದಲ್ಲಿ ಊಟದ ನಂತರ ಲೈಟ್ ಡಿಮ್ ಮಾಡಿದಾಗ 70ರ ಹರೆಯದ ಸಂತ್ರಸ್ತೆಯ ಮೇಲೆ ಪ್ರಯಾಣಿಕನೊಬ್ಬ ಜಿಪ್ ಬಿಚ್ಚಿ ಮೂತ್ರ ವಿಸರ್ಜನೆ ಮಾಡಿದ್ದ ನಂತರ ಅಲ್ಲಿಯೇ ನಿಂತು ತನ್ನ ಖಾಸಗಿ ಅಂಗಗಳನ್ನು ಪ್ರದರ್ಶಿಸುವುದನ್ನು ಮುಂದುವರೆಸಿದ್ದ. ಇತರ ಪ್ರಯಾಣಿಕರು ಗಮನಿಸಿ ಆರೋಪಿ ಪ್ರಯಾಣಿಕನನ್ನು ತೆರಳುವಂತೆ ಹೇಳಿದ ಬಳಿಕವೇ ಆತ ಅಲ್ಲಿಂದ ತೆರಳಿದ್ದ. ಆರೋಪಿ ಮಾಡಿದ ಕೃತ್ಯದಿಂದ ಮಹಿಳೆಯ ಬಟ್ಟೆ, ಶೂ ಹಾಗೂ ಬ್ಯಾಗ್ ಮೂತ್ರದಿಂದ ತೊಯ್ದು ಹೋಗಿತ್ತು. ಈ ಬಗ್ಗೆ ಸಂತ್ರಸ್ತ ಮಹಿಳೆ ಟಾಟಾ ಗ್ರೂಪ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರಿಗೆ ಪತ್ರ ಬರೆದು ದೂರು ನೀಡಿದ್ದರು. ಆ ಬಳಿಕವಷ್ಟೇ ಪ್ರಕರಣ ಬೆಳಕಿಗೆ ಬಂದಿತ್ತು.
ಅಂದಹಾಗೆ ಆರೋಪಿ ಶಂಕರ್ ಮಿಶ್ರಾ, ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಅಮೆರಿಕದ ಬಹುರಾಷ್ಟ್ರೀಯ ಹಣಕಾಸು ಸೇವೆಗಳ ಕಂಪನಿ ವೆಲ್ಸ್ ಫಾರ್ಗೋದ ಭಾರತ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ. ಅವರ ಲಿಂಕ್ಡಿನ್ ಪ್ರೊಫೈಲ್ ಪ್ರಕಾರ ಮುಂಬೈನಲ್ಲಿರುವ ಬಹುರಾಷ್ಟ್ರೀಯ ಸಂಸ್ಥೆಯೊಂದಿಗೆ ಶಂಕರ್ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತದೆ.
ಆರೋಪಿ ಶಂಕರ್ ಮಿಶ್ರಾ ವಿರುದ್ಧ ಲುಕ್ ಔಟ್ ನೋಟಿಸ್ ಕೋರಿ ದೆಹಲಿ ಪೊಲೀಸರು ಗುರುವಾರ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಮಿಶ್ರಾ ಅವರು ಸಂಪರ್ಕಕ್ಕೆ ಸಿಗದ ಕಾರಣ ಮತ್ತು ಪೊಲೀಸ್ ತನಿಖೆಗೆ ಸಹಕರಿಸಿದ ಕಾರಣ ದೆಹಲಿ ಪೊಲೀಸರು ಅವರ ವಿರುದ್ಧ ಲುಕ್ಔಟ್ ನೋಟಿಸ್ ಕೋರಿದ್ದಾರೆ.
ಮಿಶ್ರಾ ಅವರು ಮುಂಬೈ ನಿವಾಸಿಯಾಗಿದ್ದಾರೆ. ಸದ್ಯ ಆತ ತಲೆಮರೆಸಿಕೊಂಡಿದ್ದು, ನಮ್ಮ ತನಿಖಾ ತಂಡಗಳು ಅವರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಂಕರ್ ಮಿಶ್ರಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯ), 354 (ಮಹಿಳೆಗೆ ಆಕೆಯ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ಹಲ್ಲೆ), 509 (ಪದ, ಸನ್ನೆ ಅಥವಾ ನಡತೆಯನ್ನು ಅವಮಾನಿಸುವ ಉದ್ದೇಶ) ಮತ್ತು 510 (ಕುಡಿತದ ವ್ಯಕ್ತಿಯಿಂದ ಸಾರ್ವಜನಿಕವಾಗಿ ದುರ್ವರ್ತನೆ) ಹಾಗೂ ವಿಮಾನ ನಿಯಮಗಳ ಅಡಿಯಲ್ಲಿ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ. (ಏಜೆನ್ಸೀಸ್)
ನಗರ ಸಾರಿಗೆ ಬಸ್ನಲ್ಲಿ ಯುವತಿಯ ಎದುರೇ ಕಾಮುಕನಿಂದ ಹಸ್ತಮೈಥುನ: ದೂರು ಕೊಡಲು ಸಂತ್ರಸ್ತೆ ಹಿಂದೇಟು
PHOTOS| ಹಾವೇರಿಯಲ್ಲಿ ಅಕ್ಷರ ಜಾತ್ರೆ: ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆಯ ಫೋಟೋ ಝಲಕ್ ಇಲ್ಲಿದೆ…
ಕರೆದರೂ ಬಾರದ ವರ ಡಾನ್ಸ್ನಲ್ಲಿ ಮಗ್ನ! ಸ್ನೇಹಿತನ ಜತೆ ಮದ್ವೆಯಾಗಿ ವರನಿಗೆ ಶಾಕ್ ಕೊಟ್ಟ ವಧು