More

    VIDEO| ಯುನೈಸ್​ ಬಿರುಗಾಳಿ ನಡುವೆಯೂ ಸುರಕ್ಷಿತ ಲ್ಯಾಂಡಿಂಗ್:​ ಏರ್​ ಇಂಡಿಯಾ ಪೈಲಟ್ಸ್​ಗೆ ಭಾರೀ ಮೆಚ್ಚುಗೆ​

    ಲಂಡನ್​: ಲಂಡನ್​ನಲ್ಲಿ ಉಂಟಾಗಿರುವ “ಯುನೈಸ್” ಬಿರುಗಾಳಿಯು ಜನ ಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ನೂರಾರು ವಿಮಾನಗಳು ವಿಳಂಬವಾಗಿವೆ, ಕೆಲವು ವಿಮಾನಗಳ ಮಾರ್ಗವನ್ನು ಬದಲಿಸಲಾಗಿದೆ. ಇನ್ನು ಕೆಲವು ವಿಮಾನಗಳ ಪ್ರಯಾಣವೇ ರದ್ದಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಲಂಡನ್​ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ ಏರ್​ ಇಂಡಿಯಾ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್​ ಮಾಡುವ ಮೂಲಕ ಇಬ್ಬರು ಪೈಲಟ್​ಗಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದ್ದು, ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಏರ್​ ಇಂಡಿಯಾದ ಇಬ್ಬರು ಪೈಲಟ್​ಗಳಾದ ಕ್ಯಾಪ್ಟನ್​ ಅಂಚಿತ್​ ಭಾರದ್ವಜ್​ ಮತ್ತು ಕ್ಯಾಪ್ಟನ್​ ಆದಿತ್ಯ ರಾವ್ ಬಿರುಗಾಳಿಯ ನಡುವೆಯೂ ವಿಮಾನವನ್ನು ನಿಯಂತ್ರಣ ಮಾಡಿ ತಮ್ಮ ವೃತ್ತಿಪರತೆಯನ್ನು ಮೆರೆದಿದ್ದಾರೆ.

    ಚಂಡಮಾರುತವು ಹೀಥ್ರೂ ವಿಮಾನ ನಿಲ್ದಾಣದ ರನ್​ವೇ ಅನ್ನು ಅಪ್ಪಳಿಸಿತ್ತು. ಇದೇ ಸಂದರ್ಭದಲ್ಲಿ ಏರ್​ ಇಂಡಿಯಾ ವಿಮಾನ ಕೂಡ ಲ್ಯಾಂಡಿಂಗ್​ ಆಗುವುದರಲ್ಲಿತ್ತು. ಈ ವೇಳೆ ಸುರಕ್ಷಿತವಾಗಿ ವಿಮಾನ ಲ್ಯಾಂಡಿಂಗ್ ಆಯಿತು.​ ವಿಮಾನಗಳ ಲ್ಯಾಂಡಿಂಗ್​ ಮತ್ತು ಟೇಕಾಫ್​ ಅನ್ನು ನೇರಪ್ರಸಾರ ಮಾಡುವ “ಬಿಗ್​ ಜೆಟ್​ ಟಿವಿ” ಯೂಟ್ಯೂಬ್​ ಚಾನೆಲ್​ನಲ್ಲಿ ಏರ್​ ಇಂಡಿಯಾ ಲ್ಯಾಂಡಿಂಗ್​ ದೃಶ್ಯ ಸೆರೆಯಾಗಿದ್ದು, ವೈರಲ್​ ಆಗಿದೆ. ಪೈಲಟ್​ಗಳ ಕೌಶಲ್ಯತೆಯನ್ನು ಕಾಮೆಂಟೇಟರ್​ ಕೊಂಡಾಡಿದ್ದಾರೆ.

    ಏರ್​ ಇಂಡಿಯಾ ಸಂಸ್ಥೆಯು ಕೂಡ ತಮ್ಮ ಪೈಲಟ್​ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇತರೆ ವಿಮಾನಯಾನ ಸಂಸ್ಥೆಗಳು ಕೈಯಲ್ಲಿ ಸಾಧ್ಯವಾಗದಿದ್ದಾಗ ನಮ್ಮ ನುರಿತ ಪೈಲಟ್​ಗಳು ಲಂಡನ್​ನಲ್ಲಿ ಬಿರುಗಾಳಿಯ ನಡುವೆಯೂ ಸುರಕ್ಷಿತವಾಗಿ ಲ್ಯಾಂಡ್​ ಆಗಿದ್ದಾರೆ ಎಂದು ಏರ್​ ಇಂಡಿಯಾ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

    ಚಂಡಮಾರುತ ಕಾರಣ ಅನೇಕ ವಿಮಾನಗಳ ಲ್ಯಾಂಡಿಂಗ್​ ಅನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಲ್ಯಾಂಡಿಂಗ್​ ಕ್ಲಿಯೆರೆನ್ಸ್​ ಸಿಗದೇ ಕೆಲವು ವಿಮಾನಗಳು ಆಗಸದಲ್ಲೇ ಸುತ್ತುವಂತಹ ಆತಂಕಕಾರಿ ಪರಿಸ್ಥಿತಿಯು ಕೂಡ ಎದುರಾಗಿದೆ.

    ಯುನೈಸ್ ಚಂಡಮಾರುತವು ಲಂಡನ್‌ನಲ್ಲಿ ಹಿಂದೆಂದೂ ಕಾಣದಂತಹ “ಕೆಂಪು” ಹವಾಮಾನ ಎಚ್ಚರಿಕೆಯನ್ನು ಹುಟ್ಟುಹಾಕಿದೆ. 1987ರಲ್ಲಿ ಬ್ರಿಟನ್​ ಮತ್ತು ಉತ್ತರ ಫ್ರಾನ್ಸ್​ಗೆ ಅಪ್ಪಳಿಸಿದ್ದ “ಗ್ರೇಟ್​ ಸ್ಟಾರ್ಮ್​” ಚಂಡಮಾರುತದ ಬಳಿಕ ಎದುರಾಗಿರುವ ಅತ್ಯಂತ ಶಕ್ತಿಶಾಲಿ ಚಂಡಮಾರುತ ಇದಾಗಿದೆ.

    ಯುನೈಸ್ ಚಂಡಮಾರುತದಿಂದಾಗಿ ಪಶ್ಚಿಮ ಯುರೋಪಿನಾದ್ಯಂತ ವಿಮಾನಗಳು, ರೈಲುಗಳು ಮತ್ತು ಸಮುದ್ರ ಪ್ರಯಾಣಗಳು ಸಹ ತೀವ್ರವಾಗಿ ಅಸ್ತವ್ಯಸ್ತಗೊಂಡಿವೆ. ಇಂಗ್ಲೆಂಡ್‌ನಲ್ಲಿ 140,000 ಮತ್ತು ಐರ್ಲೆಂಡ್‌ನಲ್ಲಿ 80,000 ಮನೆಗಳು ಹಾಗೂ ಅನೇಕ ವ್ಯವಹಾರಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಲಕ್ಷಾಂತರ ಜನರು ತಮ್ಮ ಮನೆಗಳಲ್ಲಿ ಬಂಧನವಾಗಿದ್ದಾರೆ. (ಏಜೆನ್ಸೀಸ್​)

    ನಟಿ ಶ್ರುತಿ ಹರಿಹರನ್ ಇನ್​ಸ್ಟಾಗ್ರಾಂ ಖಾತೆ ಹ್ಯಾಕ್! ಅನುಯಾಯಿಗಳಿಗೆ ಎಚ್ಚರಿಕೆ…

    ಕಾಜಲ್ VS ಸಮಂತಾ: ಇನ್​ಸ್ಟಾಗ್ರಾಂನಲ್ಲಿ ಅನುಯಾಯಿಗಳ ವಿಚಾರದಲ್ಲಿ ಪೈಪೋಟಿ! ಹೆಚ್ಚು ಹವಾ ಯಾರದ್ದು?

    ಟಾಕ್​ ಆಫ್​ ದಿ ಟೌನ್​ ಆದ ಲಲನೆಯರು; ಒಂದೇ ವೇದಿಕೆಯಲ್ಲಿ 40 ಸೂಪರ್ ಮಾಡೆಲ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts