More

    30 ಸಾವಿರ ಸಸಿಗಳನ್ನು ನೆಟ್ಟ ಮಹಾನ್​ ಪ್ರಕೃತಿಪ್ರೇಮಿ, ಅಂತರ್ಯಾಮಿ!

    ನವದೆಹಲಿ: ಈಗಿನ ಪೀಳಿಗೆಯ ಹಲವರು ನೆಟ್ಟು ನೆಟ್ಟು ಎಂದು ಸದಾ ಇಂಟರ್​ನೆಟ್​ನಲ್ಲಿ ಕಾಲ ಕಳೆಯುವುದೇ ಹೆಚ್ಚು. ಆದರೆ ಇಲ್ಲೊಬ್ಬ ವ್ಯಕ್ತಿ ಅಕ್ಷರಶಃ ‘ನೆಟ್ಟು’ ತೋರಿಸಿದ್ದಾರೆ, ಅರ್ಥಾತ್​ ಒಬ್ಬನೇ ಒಬ್ಬ ವ್ಯಕ್ತಿ ಇದುವರೆಗೆ 30 ಸಾವಿರ ಸಸಿಗಳನ್ನು ನೆಟ್ಟಿದ್ದಾರೆ. ಈ ಮಹಾನ್ ಪ್ರಕೃತಿಪ್ರೇಮಿಯ ಹೆಸರು ಅಂತರ್ಯಾಮಿ ಸಾಹೂ. ಒಡಿಶಾದ ಕಂಟಿಲೊ ಗ್ರಾಮದ ಇವರು ವೃತ್ತಿಯಿಂದ ಶಿಕ್ಷಕ, ಪ್ರವೃತ್ತಿಯಿಂದ ವೃಕ್ಷಪ್ರೇಮಿ, ಪ್ರಕೃತಿಪ್ರೇಮಿ.

    ತನ್ನ 11ನೇ ವಯಸ್ಸಿನಲ್ಲಿ ಶಾಲಾ ಆವರಣದಲ್ಲಿ ಮೊದಲ ಸಲ ಸಸಿ ನೆಟ್ಟ ಖುಷಿ ಹಂಚಿಕೊಳ್ಳುವ ಇವರಿಗೆ ಈ 75 ವರ್ಷ. ಇದುವರೆಗೆ 30 ಸಾವಿರ ಸಸ್ಯಗಳನ್ನು ನೆಟ್ಟಿದ್ದಷ್ಟೇ ಅಲ್ಲ, ಅವುಗಳನ್ನು ಪ್ರದೇಶವಾರು ದಾಖಲೆ ಕೂಡ ಮಾಡಿಟ್ಟುಕೊಂಡಿದ್ದಾರೆ. ಬಾಲ್ಯದಿಂದಲೇ ಇದ್ದ ಇವರ ಸಸಿ ನೆಡುವ ಆಸಕ್ತಿ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಮೇಲೆ ತೀವ್ರವಾಯಿತು.

    ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!

    ಶಿಕ್ಷಕರಾದ ಬಳಿಕ ಇವರು ತಮ್ಮ ಶಾಲಾ ಆವರಣ, ಸುತ್ತಮುತ್ತಲ ಪ್ರದೇಶ, ಹಳ್ಳಿಗಳಲ್ಲಿ ಸಸಿ ನೆಡುವುದನ್ನೇ ಅಭಿಯಾನದ ರೀತಿ ನಡೆಸಿದ್ದಾರೆ. ನಾನು ಪ್ರಾಥಮಿಕ ಶಿಕ್ಷಕನಾಗಿ 1973ರಲ್ಲಿ ವೃತ್ತಿ ಆರಂಭಿಸಿದ್ದು, ಅದಾದ ಬಳಿಕ ಆರು ಶಾಲೆಗಳನ್ನು ಬದಲಾದರೂ ಎಲ್ಲ ಕಡೆ ನನ್ನ ಈ ಹವ್ಯಾಸ ಮುಂದುವರಿದಿತ್ತು ಎಂದು ಹೇಳಿಕೊಳ್ಳುತ್ತಾರೆ.

    2004ರ ವರೆಗೆ ಇವರು 10 ಸಾವಿರ ಸಸಿಗಳನ್ನು ನೆಟ್ಟಿದ್ದು, ಇವರ ವಿದ್ಯಾರ್ಥಿಗಳು 20 ಸಾವಿರ ಸಸಿಗಳನ್ನು ನೆಟ್ಟಿದ್ದಾರೆ. ಇನ್ನು ಅಂದಿನಿಂದಲೂ ಈ ಸಸಿ ನೆಡುವಿಕೆಯನ್ನು ಮುಂದುವರಿಸಿಕೊಂಡೇ ಬಂದಿರುವ ಅಂತರ್ಯಾಮಿ ಇಲ್ಲಿಯವರೆಗೆ 30 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟಿದ್ದಾರೆ. ಮಾತ್ರವಲ್ಲ, ಅದನ್ನು ಪ್ರದೇಶವಾರು ಡಾಕ್ಯುಮೆಂಟೇಷನ್ ಮಾಡಿ ಇಟ್ಟುಕೊಂಡಿರುವುದಾಗಿಯೂ ಹೇಳುತ್ತಾರೆ.

    ಇದನ್ನೂ ಓದಿ: ಕೋವಿಡ್ ಲಸಿಕೆ ತೆಗೆದುಕೊಂಡರೆ ನಪುಂಸಕತ್ವ ಬರೋದು ನಿಜವೇ?

    ಸಸಿ ನೆಡುವ ಜತೆಗೆ ಸಸಿ-ಬೀಜ ವಿತರಣೆಯನ್ನೂ ಮಾಡುವ ಇವರು, ಪ್ರಕೃತಿ ಸಂರಕ್ಷಣೆ ಕುರಿತ ಮಾಹಿತಿಯನ್ನೂ ಹಂಚಿಕೊಂಡು ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿಯೂ ಶ್ರಮಿಸುತ್ತಿದ್ದಾರೆ. ಅದಕ್ಕಾಗಿ ತಾವೇ ಪೋಸ್ಟರ್​ಗಳನ್ನು ಬರೆದು ಜಾಗೃತಿ ಮೂಡಿಸುತ್ತಿದ್ದಾರೆ. (ಏಜೆನ್ಸೀಸ್)

    ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ 2 ಸಾವಿರ ಮನೆಗಳ ಮೇಲೆ ದಾಳಿ, 1500 ರೌಡಿಗಳು ವಶಕ್ಕೆ…

    ದಯವಿಟ್ಟು ಬೇಜಾರ್ ಮಾಡ್ಕೋಬೇಡಿ: ಅಭಿಮಾನಿಗಳಲ್ಲಿ ನಟ ಶಿವರಾಜ​ಕುಮಾರ್​ ಮನವಿ

    ಪದ್ಮಶ್ರೀ-ಪದ್ಮಭೂಷಣ ಡಾ.ಪಿ.ಕೆ. ವಾರಿಯರ್ ಇನ್ನಿಲ್ಲ; ಇತ್ತೀಚೆಗಷ್ಟೇ 100 ವರ್ಷ ಪೂರೈಸಿದ್ದರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts