More

    ಲಾಟರಿಯಲ್ಲಿ 160 ಟಿಕೆಟ್​ ಮೂಲಕ 5.6 ಕೋಟಿ ಗೆದ್ದ ಅದೃಷ್ಟವಂತ! ಇದು ಸಾಧ್ಯವಾಗಿದ್ದು ಹೇಗೆ ಗೊತ್ತಾ?

    ವರ್ಜೀನಿಯಾ: ಲಾಟರಿ ಸಂಪೂರ್ಣವಾಗಿ ಅದೃಷ್ಟ ಮೇಲೆ ನಿಂತಿರುತ್ತದೆ. ನೀವು ಅದೆಷ್ಟೇ ಟಿಕೆಟ್​ ಖರೀದಿಸಿದರೂ ಅದೃಷ್ಟ ಚೆನ್ನಾಗಿದ್ದರೆ ಮಾತ್ರವೇ ಲಾಟರಿ ನಿಮ್ಮ ಕೈ ಹಿಡಿಯುತ್ತದೆ. ಇಲ್ಲೊಬ್ಬ ಮನುಷ್ಯ ತನ್ನ ಅದೃಷ್ಟ ಪರೀಕ್ಷೆಗೆಂದು 160 ಲಾಟರಿ ಟಿಕೆಟ್​ ಖರೀದಿಸಿದ್ದ. ಆತನ ಅದೃಷ್ಟ ಎಷ್ಟರ ಮಟ್ಟಿಗೆ ಚೆನ್ನಾಗಿತ್ತೆಂದರೆ ಕೊಂಡಿದ್ದ ಅಷ್ಟೂ ಟಿಕೆಟ್​ಗೆ ಲಾಟರಿ ಹಾರಿದೆ.

    ಇದನ್ನೂ ಓದಿ: ಬ್ಯಾಂಕ್ ಲೋನ್ ಕೊಡಿಸುತ್ತೇನೆ ಎನ್ನುತ್ತಲೇ ಪಂಗನಾಮ ಹಾಕುತ್ತಿದ್ದವ ಕೊನೆಗೂ ಸಿಕ್ಕಿ ಬಿದ್ದ

    ವರ್ಜೀನಿಯಾದ ಕ್ವಾಮೆ ಕ್ರಾಸ್​ ಆ ಅದೃಷ್ಟವಂತ. ಈತ ಡಿಸೆಂಬರ್​ 5ರಂದು ಟಿವಿ ನೋಡುತ್ತಾ ಕುಳಿತಿದ್ದನಂತೆ. ಆಗ ಟಿವಿಯಲ್ಲಿ ಕಂಡ ಒಂದು ಸಂಖ್ಯೆಯ ಈತನಿಗೆ ಆಕರ್ಷಿತವೆನಿಸಿದೆ. 7314 ಸಂಖ್ಯೆಯ ಮೇಲೆ ಬರೋಬ್ಬರಿ 160 ಲಾಟರಿ ಟಿಕೆಟ್​ ಖರೀದಿಸಿದ್ದಾನೆ. ಅದಾದ ಮೇಲೆ ಆತ ಅದರ ಯೋಚನೆ ಬಿಟ್ಟು ತನ್ನ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾನೆ.

    ಇತ್ತೀಚೆಗೆ ಲಾಟರಿ ವಿಜೇತರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಆ ಸಮಯದಲ್ಲಿ ಕ್ವಾಮೆ ರೆಸ್ಟೋರೆಂಟ್​ ಒಂದರಲ್ಲಿ ಫಾಸ್ಟ್​ ಫುಡ್​ ಆರ್ಡರ್​ ಮಾಡಿ, ಅದು ಬರುವುದನ್ನು ಕಾಯುತ್ತಾ ಕುಳಿತಿದ್ದನಂತೆ. ಆಗ ಈತನಿಗೆ ಕರೆ ಬಂದಿದ್ದು, ಈತನ 160 ಟಿಕೆಟ್​ಗಳು ಲಾಟರಿ ಗೆದ್ದಿರುವುದಾಗಿ ತಿಳಿಸಲಾಗಿದೆ. ಬರೋಬ್ಬರಿ 8 ಲಕ್ಷ ಡಾಲರ್​ (ಸರಿಸುಮಾರು 5.89 ಕೋಟಿ ರೂಪಾಯಿ)ನ್ನು ಈತ ಗೆದ್ದಿರುವುದಾಗಿ ಹೇಳಲಾಗಿದೆ. ತಕ್ಷಕ್ಕೆ ರೋಸ್ಲಿನ್​ಗೆ ಈ ಮಾತನ್ನು ನಂಬಲಾಗಿಲ್ಲ. ಹತ್ತಾರು ಬಾರಿ ತನ್ನ ಲಾಟರಿ ಟಿಕೆಟ್​ನ್ನು ನೋಡಿದ ಮೇಲೆ ಆತನಿಗೆ ತಾನು ಗೆದ್ದಿರುವುದರ ಬಗ್ಗೆ ನಂಬಿಕೆ ಹುಟ್ಟಿದೆ.

    ಇದನ್ನೂ ಓದಿ: ಸಿಬಿಐ ವಶದಲ್ಲಿದ್ದ 45 ಕೋಟಿ ರೂ. ಮೌಲ್ಯದ 103 ಕೆ.ಜಿ ಚಿನ್ನ ಕಳವು! ಸ್ಥಳೀಯ ಪೊಲೀಸರಿಂದ ವಿಚಾರಣೆ

    ಇದೀಗ ಕೋಟ್ಯಧಿಪತಿಯಾಗಿರುವ ಕ್ವಾಮೆ, ಗೆದ್ದ ಹಣವನ್ನು ಏನು ಮಾಡಬೇಕು ಎನ್ನುವುದರ ಬಗ್ಗೆ ಇನ್ನೂ ಯೋಚಿಸಿಲ್ಲವಂತೆ. ಇದೇ ರೀತಿ ರೇಮಂಡ್ ಹ್ಯಾರಿಂಗ್ಟನ್ಗ ಹೆಸರಿನ ವ್ಯಕ್ತಿ ಒಂದೇ ಸಂಖ್ಯೆಯ 25 ಲಾಟರಿ ಟಿಕೆಟ್​ ಖರೀದಿಸಿದ್ದು, ಅಷ್ಟೂ ಟಿಕೆಟ್​ಗಳು ವಿಜೇತವಾಗಿವೆ. ಆತನಿಗೆ 1.25 ಲಕ್ಷ ಡಾಲರ್​ನ್ನು ಬಹುಮಾನವಾಗಿ ನೀಡಲಾಗಿದೆ. (ಏಜೆನ್ಸೀಸ್​)

    ಮಾನಸಿಕ ಅಸ್ವಸ್ಥ ಗಂಡನೆದುರೇ ನಡೆಯುತ್ತಿತ್ತು ಅತ್ತಿಗೆಯ ಅಫೇರ್​! ವಿಷಯ ಗೊತ್ತಿದ್ದ ಮೈದುನನಿಗೆ ಅತ್ತಿಗೆ ಮಾಡಿದ್ದೇನು?

    8 ವರ್ಷ ಪ್ರೀತಿಸಿ ಮದುವೆಯಾದ ತಂಗಿ; ಮನೆಗೆ ಕರೆಸಿದ ಅಣ್ಣ ಎಂತಹ ಗಿಫ್ಟ್​ ಕೊಟ್ಟ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts