More

    ಮಗನಿಗೆ ನೋವಾಗಬಾರದೆಂದು ಕೊಂದೇ ಬಿಟ್ಟ! ಮಗನ ಶವದ ಜತೆಯೇ ರಾತ್ರಿ ಮಲಗಿದ

    ಲಖನೌ: ಲಾಕ್​ಡೌನ್​ ಅನೇಕ ಕುಟುಂಬಗಳ ನೆಮ್ಮದಿಯನ್ನು ಕಿತ್ತುಕೊಂಡಿದೆ. ಲಾಕ್​ಡೌನ್​ನಿಂದಾಗಿ ಕೆಲಸ ಕಳೆದುಕೊಂಡ ಅಪ್ಪನೊಬ್ಬ ತನ್ನ ಮುದ್ದಿನ ಮಗನನ್ನೇ ಕೊಂದು, ಆತನ ಶವದೊಂದಿಗೇ ಮಲಗಿ ನಿದ್ರಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

    ಇದನ್ನೂ ಓದಿ: ಮಾಸ್ಕ್​ ಹಾಕಲು ಹೇಳಿದ್ದಕ್ಕೆ ಪೊಲೀಸರಿಗೇ ಹಲ್ಲೆ ಬೆದರಿಕೆ ಹಾಕಿದ ನಿವೃತ್ತ ಮಹಿಳಾ ಅಧಿಕಾರಿ!

    ಅಲಂಕಾರ್​ ಶ್ರೀವಾಸ್ತವ್​ (43) ಮತ್ತು ಸಾರಿಕಾದ್ದು ಸುಖ ಸಂಸಾರವಾಗಿತ್ತು. ತುಲಿಕಾ (16), ಗೀತಿಕಾ (10) ಮತ್ತು ಋಷಾಂಕ್​ (7) ಹೆಸರಿನ ಮೂರು ಮಕ್ಕಳೊಂದಿಗೆ ನೆಮ್ಮದಿಯ ಜೀವನವನ್ನು ಅವರು ನಡೆಸುತ್ತಿದ್ದರು. ಆದರೆ ಲಾಕ್​ಡೌನ್​ ಆರಂಭವಾದ ಮೇಲೆ ಅವರ ಜೀವನಕ್ಕೆ ಸಂಕಷ್ಟಗಳು ಬಂದೊದಗಿದೆ. ಅಲಂಕಾರ್​ ಕೆಲಸ ಕಳೆದುಕೊಂಡಿದ್ದಾನೆ. ಅತ್ಯಂತ ಮುದ್ದಿನಿಂದ ಸಾಕಿದ್ದ ಮಕ್ಕಳನ್ನು ಸಾಕಲು ಕಷ್ಟವಾಗುತ್ತಿದೆ ಎಂದು ಸಾಕಷ್ಟು ನೊಂದುಕೊಂಡಿದ್ದಾನೆ.

    ಇದೇ ನೋವಿನಲ್ಲಿದ್ದ ಅಲಂಕಾರ್​ ಶುಕ್ರವಾರ ರಾತ್ರಿ ಮಗ ಮಲಗಿದ್ದ ಕೋಣೆಗೆ ತೆರಳಿದ್ದಾನೆ. ಮುದ್ದಿನ ಮಗನ ಕೊಲೆ ಮಾಡಿ, ಆ ಶವದೊಂದಿಗೇ ಪೂರ್ತಿ ರಾತ್ರಿ ಮಲಗಿದ್ದಾನೆ. ಅದಾದ ನಂತರ ಮುಂಜಾನೆ 5 ಗಂಟೆ ಹೊತ್ತಿಗೆ ತನ್ನ ಕೋಣೆಗೆ ಬಂದ ಆತ, ‘ನನ್ನ ಮಗನನ್ನು ನಾನು ಕೊಲೆ ಮಾಡಿಬಿಟ್ಟೆ. ಇನ್ನು ಯಾರೂ ಅವರಿಗೆ ತೊಂದರೆ ಕೊಡಲು ಸಾಧ್ಯವಿಲ್ಲ’ ಎಂದು ಪತ್ನಿಯ ಬಳಿ ಹೇಳಿದ್ದಾನೆ. ಗಾಬರಿಗೊಂಡ ಪತ್ನಿ ಮಗನ ಕೋಣೆಗೆ ಹೋಗಿ ನೋಡಿದಾಗ ಮಗನ ಶವ ಕಂಡುಬಂದಿದೆ.

    ಇದನ್ನೂ ಓದಿ: ಆನ್​ಲೈನ್​ನಲ್ಲಿ ಬಟ್ಟೆ ತರಿಸುವ ಖಯಾಲಿಯೇ? ಈ ವಿಚಾರದ ಬಗ್ಗೆ ಎಚ್ಚರವಾಗಿರಿ!

    ತಕ್ಷಣ ಈ ವಿಚಾರವನ್ನು ಕುಟುಂಬಸ್ಥರಿಗೆ ಕರೆ ಮಾಡಿ ತಿಳಿಸಲಾಗಿದೆ. ಸಾರಿಕಾ ಪತಿಯ ವಿರುದ್ಧ ಪೊಲೀಸರಿಗೂ ದೂರು ನೀಡಿದ್ದಾಳೆ. ಕೊಲೆ ಆರೋಪದಡಿಯಲ್ಲಿ ಅಲಂಕಾರ್​ನನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್​)

    ಒಂದೇ ವರ್ಷದಲ್ಲಿ 23 ಮಕ್ಕಳ ತಂದೆಯಾದ ಭೂಪ! ಹೆಣ್ಣು ಮಕ್ಕಳು ಇವನ ಮಾತನ್ನೇ ಕೇಳಲ್ವಂತೆ

    ಲಿಫ್ಟ್​ನ ಎರಡು ಬಾಗಿಲ ಮಧ್ಯೆ ಸಿಲುಕಿ ಐದು ವರ್ಷದ ಬಾಲಕ ಸಾವು; ಬೆಚ್ಚಿ ಬೀಳಿಸುತ್ತೆ ಫೋಟೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts