More

    ಅಂಜಲಿ-ನೇಹಾ ಕೊಲೆಗಾರರಿಗೆ ಗಲ್ಲು ಶಿಕ್ಷೆಯಾಗಲಿ

    ಲಿಂಗಸುಗೂರು: ಹುಬ್ಬಳ್ಳಿಯ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಕೊಲೆಗಾರರಿಗೆ ತ್ವರಿತವಾಗಿ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಹಿಂದುಳಿದ ವರ್ಗಗಳ ಒಕ್ಕೂಟದ ನೇತೃತ್ವದಲ್ಲಿ ನಾನಾ ಸಮುದಾಯಗಳ ಪ್ರಮುಖರು ಪ್ರತಿಭಟನೆ ನಡೆಸಿ ಎಸಿ ಅವಿನಾಶ ಶಿಂಧೆಗೆ ಗುರುವಾರ ಮನವಿ ಸಲ್ಲಿಸಿದರು.

    ಅಂಜಲಿ ಅಂಬಿಗೇರಗೆ ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತ್ ಕೊಲೆ ಮಾಡುವ ಬೆದರಿಕೆ ಹಾಕಿರುವ ವಿಷಯವನ್ನು ಗಮನಕ್ಕೆ ತಂದರೂ ಪೊಲೀಸರು ನಿರ್ಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ ಕೊಲೆಗಾರರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯದಲ್ಲಿ ತ್ವರಿತವಾಗಿ ವಿಚಾರಣೆ ಪೂರ್ಣಗೊಳಿಸಿ ಗಲ್ಲು ಶಿಕ್ಷೆ ವಿಧಿಸಬೇಕು. ಅಂಜಲಿ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಒದಗಿಸಿ ಆಕೆಯ ಸಹೋದರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಒತ್ತಾಯಿಸಿದರು.

    ಪ್ರಮುಖರಾದ ಹನುಮಂತ ಜಮಾದಾರ, ತಿಮ್ಮಾರಡ್ಡಿ, ಜಗನ್ನಾಥ, ಶರಣಬಸವ, ಮಹಾದೇವಯ್ಯ ಗೌಡೂರು, ವೀರಭದ್ರಯ್ಯ ಹಿರೇಮಠ, ಅಮರೇಶ ಗಂಭೀರಮಠ, ರಾಜು ಹಿರೇಮಠ, ಚನ್ನಬಸವ ಹಿರೇಮಠ, ಹನುಮಂತ ನಾಯಕ, ಭೀಮಸೇನ ಕುಲಕರ್ಣಿ, ರಮೇಶ ಗುತ್ತೇದಾರ, ಯಂಕೋಬ ಉಪ್ಪಾರ, ಜಗನ್ನಾಥ ಜಾಧವ, ದುರುಗಪ್ಪ ನಾಯಕ, ರುದ್ರಗೌಡ ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts