More

    ನೈಟ್​ ಕ್ಲಬ್​ ಸಿಬ್ಬಂದಿಗೂ ಗ್ರಾಹಕರಿಗೂ ಜಗಳ; ಖಡ್ಗ ಸೆಳೆದ ಕಿರಾತಕ!

    ಮುಂಬೈ: ಮುಂಬೈನ ನೈಟ್‌ಕ್ಲಬ್‌ನಲ್ಲಿ ಭಾನುವಾರ ಬೆಳಗ್ಗೆ ಕ್ಲಬ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆದಿದ್ದು ಗಿರಾಕಿಯೊಬ್ಬ ಖಡ್ಗ ಸೆಳೆದು ಜನರನ್ನು ಭಯಭೀತಗೊಳಿಸಿದ್ದಾನೆ. ಫೆಬ್ರವರಿ 12 ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಡೆದ ಘಟನೆಯ ವಿಡಿಯೋ ಹೊರಬಿದ್ದಿದ್ದು ಸಾಮಾಜಿಕ ಜಾಲತಾಣದಲ್ಲಿ ಜನರ ಗಮನ ಸೆಳೆದಿದೆ.

    ವರದಿಯ ಪ್ರಕಾರ, ಮುಂಬೈನ ಪಶ್ಚಿಮ ಅಂಧೇರಿಯಲ್ಲಿರುವ ಇಲ್ಯೂಷನ್‌ ಕ್ಲಬ್​ನಲ್ಲಿ ಇಂದು (ಭಾನುವಾರ) ಮುಂಜಾನೆ ಕ್ಲಬ್ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ವಾಗ್ವಾದ ನಡೆದಿದೆ. ಈ ವಿಚಾರಾಗಿ ಕೋಪಗೊಂಡ ಗ್ರಾಹಕನೊಬ್ಬ ಖಡ್ಗ ಸೆಳೆದಿದ್ದಾನೆ.

    ಇದೇ ರೀತಿಯ ಘಟನೆಗಳು ಮುಂಬೈನಲ್ಲಿ ಆಗಾಗ ನಡೆಯುತ್ತಿವೆ ಎನ್ನಲಾಗಿದ್ದು ಜನರಲ್ಲಿ ಭಯವನ್ನು ಹುಟ್ಟಿಸುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts