More

    ‘ನನ್ನ ತಂಡದಲ್ಲಿ ಬೊಕ್ಕ ತಲೆಯ ಜನರು ಬೇಕಾಗಿಲ್ಲ’ ಎಂದ ಮೇಲಧಿಕಾರಿ! ಮುಂದೆ ನಡೆದಿದ್ದೇನು?

    ನವದೆಹಲಿ: 61 ವರ್ಷದ ಸೇಲ್ಸ್​ ಡೈರೆಕ್ಟರ್​ ಒಬ್ಬರನ್ನು ಬೋಳುತಲೆಯ ಕಾರಣದಿಂದಾಗಿ ಕೆಲಸ ತೊರೆಯುವಂತೆ ಒತ್ತಡಕ್ಕೆ ಒಳಪಡಿಸಲಾಗಿತ್ತು. ಇದೀಗ ಆ ವ್ಯಕ್ತಿ ಬರೋಬ್ಬರಿ 71 ಸಾವಿರ ಯೂರೋ​ಗಳನ್ನು ಅಂದರೆ 58 ಲಕ್ಷ ರೂ.ಗಳನ್ನು ಗೆದ್ದಿದ್ದಾರೆ.

    ಲೀಡ್ಸ್ ಆಧಾರಿತ ಟ್ಯಾಂಗೋ ನೆಟ್‌ವರ್ಕ್​ನಲ್ಲಿ ಕೆಲಸ ಮಾಡುತ್ತಿರುವ ಮಾರ್ಕ್ ಜೋನ್ಸ್, ತಮ್ಮ ಕಂಪನಿಯ ವಿರುದ್ಧದ ಕೇಸ್​ನಲ್ಲಿ ವಿಜಯಶಾಲಿಯಾದರು. ಅವರು ತಮ್ಮ ವರ್ಷಕ್ಕೆ ಬರೋಬ್ಬರಿ 60,000 ಯೂರೋ​ ಗಳಿಸುತ್ತಿದ್ದರು.

    ಲೀಡ್ಸ್ ಕೋರ್ಟ್ ಮ್ಯಾನೇಜರ್ ಫಿಲಿಪ್ ಹೆಸ್ಕೆತ್, ಸ್ವತಃ ಬೋಳು ಮಧ್ಯವಯಸ್ಕ ವ್ಯಕ್ತಿಯಾಗಿದ್ದು, ಕೆಲಸದ ಸ್ಥಳದ ವೈವಿಧ್ಯತೆಗಾಗಿ ತನ್ನಂತೆಯೇ ಕಾಣುವ ಜನರು ತಂಡದಲ್ಲಿ ಬೇಡವೆಂದು ಹೀಗೆ ಮಾಡಿದ್ದಾರೆ ಎಂದು ವಕೀಲರು ಸಮರ್ಥಿಸಿಕೊಂಡಿದ್ದರು. “ನಾನು ಬೋಳು ತಲೆಯ 50 ವರ್ಷ ವಯಸ್ಸಿನ ಪುರುಷರ ತಂಡವನ್ನು ಬಯಸುವುದಿಲ್ಲ. ನಾನು ತಂಡದಲ್ಲಿ ಡೈನಾಮಿಕ್ಸ್ ಅನ್ನು ಬದಲಾಯಿಸಲು ಬಯಸುತ್ತೇನೆ. ಮಧ್ಯವಯಸ್ಕರಿಗಿಂತ ಯುವಕರ ತಂಡವನ್ನು ಹೊಂದಲು ಬಯಸಿದ್ದೆ” ಎಂದು ಅವರು ಹೇಳಿದ್ದರು.

    ಜೋನ್ಸ್​ ಮ್ಯಾನೇಜರ್​ನ ಈ ನಡೆಯಿಂದ ಆಘಾತಕ್ಕೆ ಒಳಗಾಗಿದ್ದರು. ಅವರು ಇನ್ನೂ ಎರಡು ವರ್ಷಗಳ ಕಾಲ ಟ್ಯಾಂಗೋದಲ್ಲಿದ್ದರೆ ಅವರು ಒಂದಷ್ಟು ಉದ್ಯೋಗದ ಲಾಭಗಳನ್ನು ಪಡೆಯುತ್ತಿದ್ದರು. ಆದರೆ ಒಂದು ವರ್ಷ ಅಲ್ಲಿದ್ದ ಅವರು ಅವನನ್ನು ತೆಗೆದುಹಾಕಲು ಹೀಗೆ ಮಾಡಲಾಗಿದೆ ಎಂದು ಜೋನ್ಸ್​ ಆರೋಪಿಸಿದ್ದರು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts