More

    6ರ ಪೋರ ಆ್ಯಂಬುಲೆನ್ಸ್​ ಸಿಗದೇ ತಳ್ಳುಗಾಡಿಯಲ್ಲಿ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ; ಜಿಲ್ಲಾಧಿಕಾರಿ ಹೇಳಿದ್ದಿಷ್ಟು…

    ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬರಿಗೆ ಅನಾರೋಗ್ಯ ಉಂಟಾಗಿದ್ದು ತುರ್ತಾಗಿ ಆಸ್ಪತ್ರೆಗೆ ದಾಖಲಿಸಬೇಕಾಗಿತ್ತು. ಆದರೆ ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್​ ಬರದ ಕಾರಣ ಪತ್ನಿ ಹಾಗೂ 6 ವರ್ಷದ ಮಗ ತಳ್ಳುಗಾಡಿಯಲ್ಲಿ ವ್ಯಕ್ತಿಯನ್ನು ಮಲಗಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ.

    ವಿಡಿಯೋದಲ್ಲಿ ಮಗು ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿ ತನಕ ತಳ್ಳುಗಾಡಿಯ ದಿಕ್ಕನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಗಾಡಿಯ ಇನ್ನೊಂದು ತುದಿಯಲ್ಲಿ ಹುಡುಗನ ತಾಯಿ ಗಾಡಿಯನ್ನು ಎಳೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.

    ಸಿಂಗ್ರೌಲಿಯಲ್ಲಿ ಈ ಘಟನೆ ವರದಿಯಾಗಿದ್ದು ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಷಾ ಕುಟುಂಬದವರು ಸರ್ಕಾರಿ ಆಸ್ಪತ್ರೆಗೆ ಕರೆ ಮಾಡಿ ಆಂಬ್ಯುಲೆನ್ಸ್‌ ಕಳಿಸಕೊಡುವಂತೆ ವಿನಂತಿಸಿದ್ದರು. ಆದರೆ 20 ನಿಮಿಷಗಳ ಕಾಲ ಕಾದು ನಂತರ ವ್ಯಕ್ತಿಯನ್ನು ಆಸ್ಪತ್ರೆಗೆ ತಳ್ಳುಗಾಡಿಯಲ್ಲಿ ಕರೆದುಕೊಂಡು ಹೋಗಲು ಕುಟುಂಬ ನಿರ್ಧರಿಸಿದೆ.

    ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ, ಸಿಂಗ್ರೌಲಿ ಜಿಲ್ಲಾಡಳಿತವು ವಿಷಯ ಕುರಿತು ಶನಿವಾರ ಸಂಜೆ ತನಿಖೆಗೆ ಆದೇಶಿಸಿದೆ. ಈ ಸಂದರ್ಭ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ “ಆಂಬ್ಯುಲೆನ್ಸ್ ಲಭ್ಯವಿಲ್ಲದ ಕಾರಣ, ರೋಗಿಯನ್ನು ಅವನ ಹೆಂಡತಿ ಮತ್ತು ಅಮಾಯಕ ಮಗ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು ಎಂದು ತಿಳಿದುಬಂದಿದೆ. ಆಂಬ್ಯುಲೆನ್ಸ್‌ಗಳ ಅಲಭ್ಯತೆಯ ಕಾರಣವನ್ನು ಕಂಡುಹಿಡಿಯಲು ಮುಖ್ಯ ವೈದ್ಯಕೀಯ ಅಧಿಕಾರಿ ಮತ್ತು ಸಿವಿಲ್ ಸರ್ಜನ್‌ಗೆ ಸೂಚಿಸಲಾಗಿದೆ” ಡಿಪಿ ಬರ್ಮನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು

    ಜನರು ರೋಗಿಗಳನ್ನು ಆಸ್ಪತ್ರೆಗಳಿಗೆ ಅಥವಾ ಮೃತ ದೇಹಗಳನ್ನು ಮನೆಗೆ ವಾಪಸ್​ ಕರೆದುಕೊಂಡು ಬರುವ, ಗರ್ಭಿಣಿಯರನ್ನೂ ಇದೇ ಕರೆದುಕೊಂಡು ಹೋಗುವ ಘಟನೆಗಳು ಮಧ್ಯಪ್ರದೇಶದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮುನ್ನೆಲೆಗೆ ಬರುತ್ತಿವೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts