More

    ಲಸಿಕೆ ಪಡೆದ 24 ಗಂಟೆಯೊಳಗೆ ಸಾವು! ಲಸಿಕೆಯಿಂದಾಗಿದ್ದಲ್ಲ ಎಂದ ಆರೋಗ್ಯ ಇಲಾಖೆ

    ಹೈದರಾಬಾದ್​: ಕರೊನಾ ಲಸಿಕೆ ವಿತರಣೆ ಕಾರ್ಯಕ್ರಮ ದೇಶದ ಎಲ್ಲ ಭಾಗದಲ್ಲೂ ಆರಂಭವಾಗಿದೆ. ಎಲ್ಲೋ ಕೆಲವರ ಮೇಲೆ ಲಸಿಕೆ ಕೆಲವು ಅಡ್ಡ ಪರಿಣಾಮ ಬೀರಿರುವುದಾಗಿ ಹೇಳಲಾಗಿದೆ. ಇದೀಗ ತೆಲಂಗಾಣದ ನಿರ್ಮಲಾ ಜಿಲ್ಲೆಯಲ್ಲಿ ಆರೋಗ್ಯ ಸಿಬ್ಬಂದಿಯೊಬ್ಬ ಲಸಿಕೆ ಪಡೆದ 24 ಗಂಟೆಗಳೊಳಗೆ ಮೃತನಾಗಿರುವ ಘಟನೆ ವರದಿಯಾಗಿದೆ.

    ಇದನ್ನೂ ಓದಿ: ನನ್ನನ್ನು ತಳ್ಳಿದ್ರು, ಕೂದಲು ಎಳೆದ್ರು, ಎಲ್ಲಾ ಕಡೆ ಮುಟ್ಟಲು ಬಂದ್ರು: ಶಾಸಕಿ ಸೌಮ್ಯರೆಡ್ಡಿ

    ನಿರ್ಮಲಾ ಜಿಲ್ಲೆಯ ಕುಂತಲಾ ಪಿಎಚ್​ಸಿ ಆಸ್ಪತ್ರೆಯಲ್ಲಿ 42 ವರ್ಷದ ವ್ಯಕ್ತಿಗೆ ಜನವರಿ 19ರಂದು ಬೆಳಗ್ಗೆ 11.30ರ ಸಮಯಕ್ಕೆ ಕರೊನಾ ಲಸಿಕೆ ಕೊಡಲಾಗಿತ್ತು. ಆತನಿಗೆ ಮಧ್ಯರಾತ್ರಿ 2.30ರಿಂದಲೇ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಬುಧವಾರ ಮುಂಜಾನೆ 5.30ರ ಹೊತ್ತಿಗೆ ಆತ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.

    ಇದನ್ನೂ ಓದಿ: ಪ್ಲೀಸ್​… ನನ್ನ ಮಗಳನ್ನು ಕಾಪಾಡಿ ಎಂದು ಗೋಗರೆಯುತ್ತಿದ್ದ ತಂದೆ ಕಣ್ಣೆದುರಲ್ಲೇ ಪ್ರಾಣಬಿಟ್ಟ ಕಂದಮ್ಮ! ವಿಮಾನದಲ್ಲಿ ನಡೆದದ್ದಾದರೂ ಏನು?

    ಕರೊನಾ ಲಸಿಕೆಗೂ, ಆತನ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರಾರ್ಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಜಿಲ್ಲಾ ಎಇಎಫ್‌ಐ (ರೋಗನಿರೋಧಕ ನಂತರದ ಪ್ರತಿಕೂಲ ಪರಿಣಾಮಗಳು) ಸಮಿತಿಯು ಈ ವಿಷಯವನ್ನು ಪರಿಶೀಲಿಸುತ್ತಿದೆ. ಜಿಲ್ಲೆಯ ವರದಿಯನ್ನು ರಾಜ್ಯ ಎಇಎಫ್‌ಐ ಸಮಿತಿಗೆ ಸಲ್ಲಿಸಲಾಗುತ್ತದೆ. ನಂತರ ಅದನ್ನು ಕೇಂದ್ರಕ್ಕೆ ಕಳುಹಿಸಕೊಡಲಾಗುವುದು ಎಂದು ತಿಳಿಸಲಾಗಿದೆ. (ಏಜೆನ್ಸೀಸ್​)

    ಗಂಡ ಊರಿನಲ್ಲಿ ಇಲ್ಲದಾಗ ನನ್ನ ಕರೆದು ಏನೇನೋ ಮಾಡಿದಳು- ಈಗ ದಿಕ್ಕೇ ತೋಚದಾಗಿದೆ, ಏನು ಮಾಡಲಿ?

    ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts