More

    ಬಾತ್​ರೂಂನಲ್ಲಿ ಪತ್ನಿಯ ನಗ್ನ ಚಿತ್ರ ತೆಗೆದು, ಆಕೆಗೇ ಬ್ಲಾಕ್​ಮೇಲ್​ ಮಾಡಿದ ಗಂಡ!

    ಲುಧಿಯಾನ: ತನ್ನ ಧರ್ಮಪತ್ನಿ ಸ್ನಾನ ಮಾಡುವ ವಿಡಿಯೋ, ಫೋಟೋಗಳನ್ನು ತೆಗೆದುಕೊಂಡ ಪತಿಯೊಬ್ಬ ಪತ್ನಿಗೇ ಬ್ಲಾಕ್​ಮೇಲ್​ ಮಾಡಿರುವ ಘಟನೆ ಪಂಜಾಬ್​ನಲ್ಲಿ ನಡೆದಿದೆ. ಪತ್ನಿಗೆ ಗೊತ್ತಿಲ್ಲದಂತೆ ಪತಿ ಬಾತ್​ರೂಂನಲ್ಲಿ ಕ್ಯಾಮೆರಾ ಅಡಗಿಸಿಟ್ಟಿದ್ದ ಎನ್ನಲಾಗಿದೆ.

    23 ವರ್ಷದ ಮಹಿಳೆ ತನ್ನ ಗಂಡನೊಂದಿಗೆ ಸುಖದಿಂದಲೇ ಸಂಸಾರ ನಡೆಸುತ್ತಿದ್ದಳು. ಆದರೆ ಆಕೆಯ ಪತಿ ಆಕೆಗೆ ಗೊತ್ತಾಗದಂತೆ ಬಾತ್​ರೂಂನಲ್ಲಿ ಕ್ಯಾಮೆರಾ ಅಡಗಿಸಿಟ್ಟಿದ್ದಾನೆ. ನಂತರ ಅದರಲ್ಲಿ ಚಿತ್ರೀಕರಣವಾದ ವಿಡಿಯೋ, ಫೋಟೋಗಳನ್ನಿಟ್ಟುಕೊಂಡು ಆಕೆಗೆ ಚಿತ್ರಹಿಂಸೆ ಕೊಡಲಾರಂಭಿಸಿದ್ದಾನೆ. ನನಗೆ 20 ಲಕ್ಷ ರೂಪಾಯಿ ಕೊಡು, ಇಲ್ಲದಿದ್ದರೆ ನಾನು ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಬಿಡುತ್ತೇನೆ ಎಂದು ಬೆದರಿಸಿದ್ದಾನೆ.
    ಗಂಡನ ವಿಕೃತ್ಯಕ್ಕೆ ಹೆದರಿರುವ ಮಹಿಳೆ, ತನ್ನ ತವರು ಮನೆಗೆ ಓಡಿ ಬಂದಿದ್ದಾಳೆ. ನಡೆದ ಘಟನೆಯನ್ನು ತಂದೆ ತಾಯಿಗೆ ವಿವರಿಸಿದ್ದಾಳೆ. ಈ ವಿಚಾರವಾಗಿ ಮಹಿಳೆಯ ಕುಟುಂಬ ಪೊಲೀಸರಿಗೆ ದೂರು ನೀಡಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್​ ಜತೆ ಕೈ ಜೋಡಿಸಿದ ಬಿಜೆಪಿ! ಇದನ್ನು ದೊಡ್ಡ ವಿಷಯವಾಗಿ ಬಿಂಬಿಸಬೇಡಿ ಎಂದ ಸಂಸದ

    ಸ್ನಾನ ಮಾಡುತ್ತಿದ್ದ ಕೆಲ ಫೋಟೋಗಳನ್ನು ಗಂಡ ಈಗಾಗಲೇ ವಾಟ್ಸ್​ಆ್ಯಪ್​ ಸ್ಟೇಟಸ್​ ಆಗಿ ಹಾಕಿಕೊಂಡಿದ್ದಾಗಿ ಮಹಿಳೆ ದೂರಿದ್ದಾಳೆ. ಈ ಕೃತ್ಯದ ಹಿಂದೆ ತನ್ನ ಅತ್ತೆ ಮತ್ತು ಕೆಲ ಸಂಬಂಧಿಕರ ಕೈವಾಡವೂ ಇದೆ ಎಂದು ದೂರಿನಲ್ಲಿ ನಮೂದಿಸಲಾಗಿದೆ.

    ಇದನ್ನೂ ಓದಿ: ಬೀಚ್​ನಲ್ಲಿ ಬೆತ್ತಲೆ ಓಡಾಡಿದ್ದ ಮಿಲಿಂದ್​ ವಿರುದ್ಧವೂ ದಾಖಲಾಯ್ತು ಕೇಸ್​

    ಮಹಿಳೆಯ ದೂರಿನ ಆಧಾರದ ಮೇಲೆ, ಐಟಿ ಕಾಯ್ದೆ 2000 ರ ಸೆಕ್ಷನ್ 67 ಮತ್ತು 67-ಎ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ವಿಚಾರಣೆಯ ನಂತರ ಆರೋಪಿಗಳ ಹೆಸರನ್ನು ಎಫ್‌ಐಆರ್‌ಗೆ ಸೇರಿಸಲಾಗುವುದು ಎಂದು ತಿಳಿಸಲಾಗಿದೆ. (ಏಜೆನ್ಸೀಸ್​)

    ಲಾಕ್​ಡೌನ್​ ನಂತರ ಮೊದಲನೇ ಉಪಗ್ರಹ ಉಡಾವಣೆ ಮಾಡಿದ ಇಸ್ರೋ

    ನಾದಿನಿಯೊಂದಿಗೆ ಜಗಳವಾಡಿ 4 ವರ್ಷದ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts