More

    ಯೂಟ್ಯೂಬ್​ ನೋಡಿ ಹೆಲಿಕಾಪ್ಟರ್​ ನಿರ್ಮಿಸಿದ ಯುವಕ! ಪರೀಕ್ಷೆ ನಡೆಸುವಾಗ ವಿಧಿ ಕೈಕೊಟ್ಟಿತು

    ಯಾವತ್ಮಲ್​ : ಮಹಾರಾಷ್ಟ್ರದ 24 ವರ್ಷ ವಯಸ್ಸಿನ ಯುವಕನೊಬ್ಬ ಖುದ್ದಾಗಿ ಪುಟ್ಟ ಹೆಲಿಕಾಪ್ಟರ್​ ಒಂದನ್ನು ನಿರ್ಮಿಸಿ ಬರುವ ಸ್ವಾತಂತ್ರ್ಯೋತ್ಸವದಂದು ಊರಿನವರ ಮುಂದೆ ಅನಾವರಣ ಮಾಡಬೇಕೆಂಬ ಕನಸು ಹೊಂದಿದ್ದ. ಆದರೆ ವಿಧಿಯ ಆಟ ನೋಡಿ – ಅವನು ನಿರ್ಮಿಸಿದ ಹೆಲಿಕಾಪ್ಟರ್​ನ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಅದರ ರೋಟಾರ್​ ಬ್ಲೇಡ್​ ಮುರಿದು ಆತನ ಕತ್ತು ಕೊಯ್ದಿತು, ಅವನ ಜೀವಕ್ಕೆ ಅಂತ್ಯ ಹಾಡಿತು.

    ಮಹಾರಾಷ್ಟ್ರದ ಯಾವತ್ಮಲ್​ ಜಿಲ್ಲೆಯ ಮಹಾಗಾವ್ ತಹಸೀಲ್​ನಲ್ಲಿರುವ ಫುಲಸಾವಂಗಿ ಗ್ರಾಮದ ನಿವಾಸಿಯಾಗಿದ್ದ ಶೇಖ್​ ಇಸ್ಮಾಯಿಲ್​ ಶೇಖ್ ಇಬ್ರಾಹಿಂ 8ನೇ ತರಗತಿ ವ್ಯಾಸಂಗ ನಿಲ್ಲಿಸಿ ತನ್ನ ಅಣ್ಣನ ಗ್ಯಾಸ್​ ವೆಲ್ಡಿಂಗ್​ ವರ್ಕ್​ಶಾಪ್​ ಸೇರಿದ್ದ. ಅಲ್ಲಿ ಅಲ್ಮಿರಾ, ಕೂಲರ್​ಗಳು ಮತ್ತು ಇತರ ಗೃಹಬಳಕೆ ವಸ್ತುಗಳ ನಿರ್ಮಾಣ ಕಲಿತಿದ್ದ ಆತ ಎರಡು ವರ್ಷದಿಂದ ಹೆಲಿಕಾಪ್ಟರ್​ ನಿರ್ಮಿಸುವ ಪ್ರಯೋಗದಲ್ಲಿ ತೊಡಗಿದ್ದ.

    ಇದನ್ನೂ ಓದಿ: ಆಫ್ಘಾನ್​ಗೆ ಭಾರತ ಉಡುಗೊರೆಯಾಗಿ ನೀಡಿದ್ದ ಹೆಲಿಕಾಪ್ಟರ್ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್..!

    ಆಮೀರ್​ ಖಾನ್​ರ 3 ಇಡಿಯಟ್ಸ್​ ಚಿತ್ರದಿಂದ ಪ್ರೇರಿತನಾಗಿದ್ದ ಇಸ್ಮಾಯಿಲ್​, ಯೂಟ್ಯೂಬ್​ ವಿಡಿಯೋಗಳನ್ನು ನೋಡಿ ಅದರ ಡಿಸೈನ್​ ಮತ್ತಿತರ ಅಂಶಗಳನ್ನು ಕಲಿತ. ಸ್ಟೀಲ್​ ಪೈಪ್​ಗಳನ್ನು ಬಳಸಿ ಸಿಂಗಲ್​ ಸೀಟರ್​ ಪ್ರೋಟೋಟೈಪನ್ನು ತಯಾರಿಸಿ, ಅದಕ್ಕೆ ಮಾರುತಿ 800 ಇಂಜಿನ್​ ಅಳವಡಿಸಿ 5 ಅಡಿ ಎತ್ತರದಷ್ಟು ಹಾರಾಟ ಆಗುವಂತೆ ಪ್ರಯೋಗ ಕೂಡ ಮಾಡಿದ್ದ ಎನ್ನಲಾಗಿದೆ.

    ಯೂಟ್ಯೂಬ್​ ನೋಡಿ ಹೆಲಿಕಾಪ್ಟರ್​ ನಿರ್ಮಿಸಿದ ಯುವಕ! ಪರೀಕ್ಷೆ ನಡೆಸುವಾಗ ವಿಧಿ ಕೈಕೊಟ್ಟಿತು

    ‘ಮುನ್ನ ಹೆಲಿಕಾಪ್ಟರ್’​ ಎಂದು ತನ್ನ ಅಡ್ಡಹೆಸರನ್ನೇ ಅವನು ನಿರ್ಮಿಸಿದ ಹೆಲಿಕಾಪ್ಟರ್​ಗೆ ಇಟ್ಟಿದ್ದ ಇಸ್ಮಾಯಿಲ್​, ಮಂಗಳವಾರ ರಾತ್ರಿ ವರ್ಕ್​ಶಾಪ್​ನ ಬಳಿ ಅದರ ಅಂತಿಮ ಪರೀಕ್ಷೆ ಮಾಡುತ್ತಿದ್ದ. ಇಂಜಿನ್​ ಆರಂಭವಾದಾಗ ಸ್ನೇಹಿತರು ನೋಡುತ್ತಿರುವಂತೆಯೇ, ಹೆಲಿಕಾಪ್ಟರ್​ನ ಒಂದು ರೋಟಾರ್ ಬ್ಲೇಡ್ ಮುರಿದು ಅವನ ಗಂಟಲನ್ನು ಸೀಳಿತು. ನೆಲಕ್ಕುರುಳಿ, ವಿಪರೀತ ರಕ್ತ ಹರಿಯುತ್ತಿದ್ದ ಇಸ್ಮಾಯಿಲ್​ಅನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಯಾವುದೇ ಚಿಕಿತ್ಸೆ ನೀಡುವ ಮುಂಚೆ ಆತ ಸಾವಪ್ಪಿದ ಎನ್ನಲಾಗಿದೆ. (ಏಜೆನ್ಸೀಸ್)

    VIDEO | ಬಿಜೆಪಿ ನಾಯಕರ ‘ದೋಸ್ತಿ’ ಹಾಡು ನೋಡಿ!

    ಕೋವಿಶೀಲ್ಡ್​-ಕೋವಾಕ್ಸಿನ್ ಡೋಸ್ ಮಿಕ್ಸ್​ ಮಾಡಬಹುದೇ? ನಡೆಯಲಿದೆ ಅಧ್ಯಯನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts