More

    ಆಫ್ಘಾನ್​ಗೆ ಭಾರತ ಉಡುಗೊರೆಯಾಗಿ ನೀಡಿದ್ದ ಹೆಲಿಕಾಪ್ಟರ್ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್..!

    ಕಾಬೂಲ್​: ಆಫ್ಘಾನಿಸ್ತಾನದ ಬಹುತೇಕ ಭಾಗವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವ ತಾಲಿಬಾನ್​, ಇದೀಗ ಆಫ್ಘಾನ್​ಗೆ ಭಾರತ ಉಡುಗೊರೆಯಾಗಿ ನೀಡಿರುವ ಹೆಲಿಕಾಪ್ಟರ್​ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ.

    ಎಂಐ24 ಯುದ್ಧ ಹೆಲಿಕಾಪ್ಟರ್​ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವುದಾಗಿ ತಾಲಿಬಾನ್​ ಹೇಳಿಕೊಂಡಿದೆ. ಈ ಹೆಲಿಕಾಪ್ಟರ್​ ಅನ್ನು ಭಾರತ, ಅಫ್ಘಾನಿಸ್ತಾನದ ವಾಯುಪಡೆಗೆ ಉಡುಗೊರೆಯಾಗಿ ನೀಡಿತ್ತು. ಆಘ್ಘಾನಿಸ್ತಾನದ ಕುಂದ್ಜ್​​ನಲ್ಲಿ ಹಲಿಕಾಪ್ಟರ್​ ಪಕ್ಕದಲ್ಲಿ ತಾಲಿಬಾನ್​ ಹೋರಾಟಗಾರರು ನಿಂತಿರುವ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

    ಆದಾಗ್ಯೂ, ಹೆಲಿಕಾಪ್ಟರ್​ನಲ್ಲಿ ರೋಟರ್​ ಬ್ಲೇಡ್​ಗಳು ಕಾಣೆಯಾಗಿವೆ. ತಾಲಿಬಾನಿಗಳು ಹೆಲಿಕಾಪ್ಟರ್​ ಉಪಯೋಗಿಸದಂತೆ ತಡೆಯಲು ಆಫ್ಘಾನ್​ ಪಡೆಗಳು ಮೊದಲೇ ಬ್ಲೇಡ್​ಗಳನ್ನು ತೆಗೆದಿದ್ದಾರೆಂದು ಹೇಳಲಾಗಿದೆ.

    ಹೆಲಿಕಾಪ್ಟರ್​ ಉಡುಗೊರೆಯ ವಿವರಕ್ಕೆ ಬರುವುದಾದರೆ, 2019ರಲ್ಲಿ ಮೂರು ಚೀತಾ ಲೈಟ್​ ಯುಟಿಲಿಟಿ ಹೆಲಿಕಾಪ್ಟರ್​ನೊಂದಿಗೆ ಎಂಐ-24 ಅಟ್ಯಾಕ್​ ಹೆಲಿಕಾಪ್ಟರ್​ ಅನ್ನು ಅಫ್ಘಾನ್​​​ ವಾಯುಪಡೆಗೆ ಉಡುಗೊರೆಯಾಗಿ ನೀಡಿದರು. 2015ರಲ್ಲಿ ಉಡುಗೊರೆಯಾಗಿ ನೀಡಲಾದ ನಾಲ್ಕು ಅಟ್ಯಾಕ್​ ಹೆಲಿಕಾಪ್ಟರ್‌ಗಳಿಗೆ ಬದಲಿಯಾಗಿ ಮಿ -24 ಹೆಲಿಕಾಪ್ಟರ್‌ಗಳನ್ನು ಆಫ್ಘನ್ನರಿಗೆ ನೀಡಲಾಯಿತು.

    ತಾಲಿಬಾನ್​ಗಳ ಪ್ರಭಾವವನ್ನು ಹತ್ತಿಕ್ಕಲು ಆಫ್ಘಾನ್ನರು ಹರಸಾಹಸ ಪಡುತ್ತಿರುವ ಸಂದರ್ಭದಲ್ಲಿ ಹೆಲಿಕಾಪ್ಟರ್​ ಅನ್ನು ತಮ್ಮ ವಶಕ್ಕೆ ಪಡೆದುಕೊಂಡಿರುವುದು ಕೊಂಚ ಹಿನ್ನೆಡೆಯಾಗಿದೆ. ಈಗಾಗಲೇ ತಾಲಿಬಾನ್​ ಆಫ್ಘಾನ್​ನ ಬಹುತೇಕ ಭಾಗವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಿನ್ನೆಯಷ್ಟೇ ಆಫ್ಘಾನ್​ ಕ್ರಿಕೆಟರ್​ ರಶೀದ್​ ಖಾನ್​ ಟ್ವೀಟ್​ ಮೂಲಕ ದೇಶವನ್ನು ರಕ್ಷಿಸಿ ಎಂದು ವಿಶ್ವನಾಯಕರ ಬಳಿ ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)

    ಬೀದಿ ಬೀದಿಯಲ್ಲಿ ಹೆಣ…ಹುಡುಗಿಯರ ಅಪಹರಣ! ತಾಲಿಬಾನಿಗಳ ಅಟ್ಟಹಾಸ ಬಿಚ್ಚಿಟ್ಟ ಆಫ್ಘನ್ನರು

    ವಿಶ್ವ ನಾಯಕರೇ… ನಮ್ಮ ರಾಷ್ಟ್ರವನ್ನು ಕಾಪಾಡಿ! ಆಫ್ಘಾನ್​ ಕ್ರಿಕೆಟಿಗ ರಶೀದ್​ ಖಾನ್ ಮನವಿ​

    ‘ವಿಜಯಾನಂದ’ ಚಿತ್ರದ ಮೋಷನ್​ ಟೀಸರ್ ರಿಲೀಸ್​; ಒಂದು ಟ್ರಕ್​ನಿಂದ ದೇಶದ ಅತಿ ದೊಡ್ಡ ಲಾಜಿಸ್ಟಿಕ್ ಕಟ್ಟಿದ ಯಶೋಗಾಥೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts