More

    ವಿಶ್ವ ನಾಯಕರೇ… ನಮ್ಮ ರಾಷ್ಟ್ರವನ್ನು ಕಾಪಾಡಿ! ಆಫ್ಘಾನ್​ ಕ್ರಿಕೆಟಿಗ ರಶೀದ್​ ಖಾನ್ ಮನವಿ​

    ಕಾಬೂಲ್​: ಅಫ್ಘಾನಿಸ್ತಾನದ ಬಹುತೇಕ ಭಾಗವನ್ನು ತಾಲಿಬಾನ್​ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ತಾಲಿಬಾನ್​ ಕಿರುಕುಳ ತಾಳಲಾರದೇ ಅನೇಕರು ತಮ್ಮ ನೆಲವನ್ನು ತೊರೆದು ಬೇರೆ ಬೇರೆ ಪ್ರದೇಶಗಳಿಗೆ ಪರಾರಿಯಾಗುತ್ತಿದ್ದಾರೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಆಫ್ಘಾನ್​ ಕ್ರಿಕೆಟಿಕ ರಶೀದ್​ ಖಾನ್​, ಜನರನ್ನು ಗೊಂದಲದಲ್ಲಿ ಬಿಡಬೇಡಿ ಎನ್ನುವ ಮೂಲಕ ವಿಶ್ವ ನಾಯಕರ ನೆರವನ್ನು ಕೋರಿದ್ದಾರೆ.

    ಪ್ರೀತಿಯ ವಿಶ್ವ ನಾಯಕರೇ… ನನ್ನ ದೇಶದಲ್ಲಿ ಗೊಂದಲದಲ್ಲಿದೆ. ಮಕ್ಕಳು, ಮಹಿಳೆಯರು ಸೇರಿದಂತೆ ಸಾವಿರಾರು ಅಮಾಯಕ ಜನರು ಪ್ರತಿದಿನ ಹುತಾತ್ಮರಾಗುತ್ತಿದ್ದಾರೆ. ಮನೆಗಳು ಮತ್ತು ಆಸ್ತಿಗಳು ಸರ್ವನಾಶವಾಗುತ್ತಿವೆ. ಸಾವಿರಾರು ಕುಟುಂಬ ಸ್ಥಳಾಂತರವಾಗಿದೆ. ನಮ್ಮನ್ನು ಗೊಂದಲದಲ್ಲಿ ಬಿಡಬೇಡಿ. ಆಫ್ಘಾನ್ನರನ್ನು ಕೊಲ್ಲುವುದನ್ನು ಮತ್ತು ಅಫ್ಘಾನಿಸ್ತಾನದ ಧ್ವಜ ನಾಶಮಾಡುವುದನ್ನು ತಡೆಯಿರಿ. ನಮಗೆ ಶಾಂತಿ ಬೇಕಿದೆ. ಅದನ್ನು ದೊರಕಿಸಿ ಕೊಡಿ ಎಂದು ರಶೀದ್​ ಖಾನ್​ ಟ್ವೀಟ್​ ಮೂಲಕ ವಿಶ್ವ ನಾಯಕರನ್ನು ಮನವಿ ಮಾಡಿದ್ದಾರೆ.

    ಅಫ್ಘಾನಿಸ್ತಾನದಲ್ಲಿ ವಶಪಡಿಸಿಕೊಂಡಿರುವ ಪ್ರದೇಶಗಳ ಮೇಲೆ ತಾಲಿಬಾನ್ ಹೋರಾಟಗಾರರು ತಮ್ಮ ಹಿಡಿತವನ್ನು ಬಿಗಿಗೊಳಿಸುತ್ತಿದ್ದಾರೆ. ಉತ್ತರ, ಪಶ್ಚಿಮ ಮತ್ತು ದಕ್ಷಿಣ ಭಾಗಗಳ ಸುಮಾರು 6 ಪ್ರಾಂತ್ಯಗಳಲ್ಲಿ ತಾಲಿಬಾನಿಗಳು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದು, ನೂರಾರು ಆಫ್ಘಾನ್ನರು ಸ್ಥಳಾಂತವಾಗುತ್ತಿದ್ದಾರೆ. ಅಲ್ಲದೆ, ತಾಲಿಬಾನ್​ ಆಕ್ರಮಿತ ಪ್ರದೇಶಗಳಲ್ಲಿ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ.

    ಸ್ಥಳಾಂತರಗೊಂಡ ಜನರು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನತ್ತ ಬಂದಿದ್ದಾರೆ. ಬೀದಿಗಳು ಮತ್ತು ಉದ್ಯಾನವನಗಳಲ್ಲಿ ಜನರು ಬೀಡುಬಿಟ್ಟಿದ್ದಾರೆ. ಬಂದಿರುವವರಲ್ಲಿ ಅನೇಕರು ಅಪ್ರಾಪ್ತರು, ವೃದ್ಧರು ಮತ್ತು ಕುಟುಂಬಗಳಿದ್ದು, ಗಾಯಗೊಂಡ ಸದಸ್ಯರುಗಳಿದ್ದಾರೆ. ಕುಟುಂಬಗಳು ಬೇರ್ಪಡೆಯಾಗಿದ್ದು ಪರಿಸ್ಥಿತಿ ತುಂಬಾ ಬಿಗಡಾಯಿಸಿದೆ. ಹೀಗಾಗಿ ರಶೀದ್​ ಖಾನ್​ ವಿಶ್ವ ನಾಯಕರ ನರವು ಕೋರಿದ್ದಾರೆ.

    ಏನಿದು ಸಂಘರ್ಷ?
    ಆಫ್ಘಾನ್​ ವಲಯದಿಂದ ಅಮೆರಿಕ ತನ್ನ ಸೇನೆಯನ್ನು ಹಿಂತೆಗೆದುಕೊಂಡ ಬಳಿಕ ತಾಲಿಬಾನ್​ ಮತ್ತು ಆಫ್ಘಾನ್​ ಸರ್ಕಾರದ ನಡುವೆ ಸಂಘರ್ಷ ತಾರಕಕ್ಕೇರಿದೆ. ಕಳೆದ ಕೆಲವು ತಿಂಗಳುಗಳಿಂದ, ಯುದ್ಧ ಪೀಡಿತ ದೇಶದಲ್ಲಿ ತಾಲಿಬಾನ್ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದೆ. ಇದೇ ಸಂದರ್ಭದಲ್ಲಿ ಭಾರತೀಯ ಆಸ್ತಿಗಳನ್ನು ಟಾರ್ಗೆಟ್​ ಮಾಡಲು ಪಾಕಿಸ್ತಾನವು ತಾಲಿಬಾನ್​ಗೆ ಸಹಕಾರ ನೀಡುತ್ತಿರುವ ಆರೋಪವು ಕೇಳಿಬಂದಿದೆ. ತೀವ್ರ ಘರ್ಷಣೆ ಹಿನ್ನೆಲೆಯಲ್ಲಿ ಜುಲೈ 11 ರಂದು ಕಂದಹಾರ್‌ನ ಕಾನ್ಸುಲೇಟ್‌ನಿಂದ ಭಾರತೀಯ ಸಿಬ್ಬಂದಿಯನ್ನು ಸ್ಥಳಾಂತರಿಸಿ ಮತ್ತೆ ಭಾರತಕ್ಕೆ ಕರೆತರಲಾಯಿತು. ಗುಪ್ತಚರ ವರದಿಗಳು ಕಂದಹಾರ್ ಮತ್ತು ಮಜಾರ್-ಎ-ಶೇರ್ಫ್‌ನಲ್ಲಿರುವ ಭಾರತೀಯ ದೂತಾವಾಸಗಳಿಗೆ ಬೆದರಿಕೆ ಹೆಚ್ಚಾಗಿದೆ ಎಂದು ಸೂಚಿಸಿದೆ. (ಏಜೆನ್ಸೀಸ್​)

    ಬೀದಿ ಬೀದಿಯಲ್ಲಿ ಹೆಣ…ಹುಡುಗಿಯರ ಅಪಹರಣ! ತಾಲಿಬಾನಿಗಳ ಅಟ್ಟಹಾಸ ಬಿಚ್ಚಿಟ್ಟ ಆಫ್ಘನ್ನರು

    ಆರಂಭವೂ ಇಲ್ಲೇ, ಅಂತ್ಯವೂ ಇಲ್ಲೇ… ಯಾವ ನಾಯಕರೂ ನನ್ನ ಬೆನ್ನಿಗಿಲ್ಲ: ದೇಗುಲದಲ್ಲಿ ರಾಜಕೀಯಕ್ಕೆ ವಿದಾಯ ಹೇಳಿದ ಆನಂದ್​ ಸಿಂಗ್​

    ಕೋವಿಶೀಲ್ಡ್​-ಕೋವಾಕ್ಸಿನ್ ಡೋಸ್ ಮಿಕ್ಸ್​ ಮಾಡಬಹುದೇ? ನಡೆಯಲಿದೆ ಅಧ್ಯಯನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts