More

    ಆರಂಭವೂ ಇಲ್ಲೇ, ಅಂತ್ಯವೂ ಇಲ್ಲೇ… ಯಾವ ನಾಯಕರೂ ನನ್ನ ಬೆನ್ನಿಗಿಲ್ಲ: ದೇಗುಲದಲ್ಲಿ ರಾಜಕೀಯಕ್ಕೆ ವಿದಾಯ ಹೇಳಿದ ಆನಂದ್​ ಸಿಂಗ್​

    ವಿಜಯನಗರ: ತಾನು ನಿರೀಕ್ಷಿಸಿದ ಖಾತೆ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡಿರುವ ಆನಂದ್​ ಸಿಂಗ್​ ಇಂದು ಶ್ರೀವೇಣುಗೋಪಾಲ ದೇವಸ್ಥಾನ ಆವರಣದಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.

    ರಾಜಕಾರಣದಲ್ಲಿ ದುಡ್ಡು ಮಾಡಲು, ಸಂಪತ್ತು ಲೂಟಿ ಮಾಡಬೇಕು ಎಂದು ನಾನು ಬಂದಿಲ್ಲ. ದೇವಸ್ಥಾನದಲ್ಲೇ ನಿಂತು ವೇಣುಗೋಪಾಲನ ಮೇಲೇ ಆಣೆ ಮಾಡುವೆ. ಪಕ್ಷಕ್ಕೆ ಗೌರವ ಕೊಡೋದು ನನ್ನ ಧರ್ಮ. ನಾನು ನಾಲ್ಕು ಗೋಡೆ ಮಧ್ಯೆ ನನ್ನ ಭಾವನೆ, ಕಷ್ಟ, ನನ್ನ ಕ್ಷೇತ್ರದ ಭವಿಷ್ಯದ ಬಗ್ಗೆ ಯಾರಿಗೆ ಹೇಳಬೇಕೋ ಅಲ್ಲಿ ಹೇಳಿಕೊಂಡಿದ್ದೇನೆ. ನಾನು ಏನನ್ನೂ ಬಹಿರಂಗವಾಗಿ ಹೇಳಿಲ್ಲ. ಒಳ್ಳೆತನ, ಒಳ್ಳೆಯ ವಿಚಾರಕ್ಕೆ, ಕ್ಷೇತ್ರದ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ನೀನು ಇಟ್ಟ ಹೆಜ್ಜೆಯನ್ನು ಹಿಂದಿಡಬೇಡ, ನೀನು ಮುಂದುವರಿ ಎಂದು ಆ ಗೋಪಾಲಕೃಷ್ಣ ಹೇಳಿದ್ದಾನೆ. ನನಗೆ ರಾಜಕೀಯದಲ್ಲಿ ರಕ್ಷಕರಿಲ್ಲ. ಯಾವ ನಾಯಕರೂ ನನ್ನ ಬೆನ್ನಿಗೆ ಇಲ್ಲ. ಆದರೆ, ಆ ದೇವರು ನನಗೆ ರಕ್ಷಣೆ ಕೊಡುತ್ತಾನೆ ಎಂದು ಆನಂದ್​ ಸಿಂಗ್​ ಹೇಳಿದರು.

    ನಾನು ಅತಿದೊಡ್ಡ ರಾಜಕಾರಣಿ ಅಲ್ಲ. ಆದರೆ ಶ್ರದ್ಧೆ, ಪ್ರಾಮಾಣಿಕತೆ, ಕ್ಷೇತ್ರದ ಜನರ ಆಶೀರ್ವಾದ, ನಿಷ್ಟೆಯಿಂದಲೇ ಈ ಕ್ಷೇತ್ರದ ಶಾಸಕನಾಗಿ 4 ಬಾರಿ ಆಯ್ಕೆಯಾಗಿದ್ದೇನೆ. ನಾನು ಸಚಿವ ಸ್ಥಾನಕ್ಕಾಗಿ ಪೂಜೆ ಮಾಡಿಸಿಲ್ಲ. ನನಗೆ ಸಚಿವ ಸ್ಥಾನ ಕುರಿತು ಅಸಮಾಧಾನ ಆಗಿದೆ. ನಾನು ತೆರೆಹಿಂದೆ ಹೇಳಲ್ಲ, ನೇರವಾಗಿಯೇ ಹೇಳುವೆ. ನನಗೆ ನಯವಾಗಿ ಮಾತನಾಡಲು ಬರಲ್ಲ, ನೇರನೇರ ಮಾತಾಡುವೆ ಎಂದು ಆನಂದ್​ ಸಿಂಗ್​ ಹೇಳಿದರು.

    ನಾನು ಸಚಿವ ಸ್ಥಾನಕ್ಕಾಗಿ ಪೂಜೆ ಮಾಡಿಸಿಲ್ಲ. ಈ ವೇಣುಗೋಪಾಲಕೃಷ್ಣ ದೇವಸ್ಥಾನವನ್ನು ನಮ್ಮ ಅಜ್ಜ ಕಟ್ಟಿಸಿದ್ದರು. ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಮಾಡಲು ನನ್ನ ತಂದೆ ಬದುಕಿದ್ದಾಗಲೇ ನಿರ್ಧರಿಸಿದ್ದೆವು. ಈ ದೇವರನ್ನು ನಾನು ಪೂರ್ಣವಾಗಿ ನಂಬುತ್ತೇನೆ. ನನ್ನ ರಾಜಕೀಯ ಆರಂಭವೂ ಇಲ್ಲೇ, ಅಂತ್ಯವೂ ಇಲ್ಲೇ… ಯಾವ ನಾಯಕರೂ ನನ್ನ ಬೆನ್ನಿಗಿಲ್ಲ ಎಂದು ಆನಂದ್​ ಸಿಂಗ್​ ದೇಗುಲ ಆವರಣದಲ್ಲಿ ಹೇಳುತ್ತಲೇ ನನ್ನ ಬೇಡಿಕೆ ಈಡೇರಿಸಿ, ಇಲ್ಲವಾದಲ್ಲಿ ನನ್ನ ದಾರಿ ನನಗೆ ಎಂದು ಪರೋಕ್ಷವಾಗಿ ರಾಜಕೀಯಕ್ಕೆ ವಿದಾಯ ಹೇಳಿದ್ರು.

    ಅಮ್ಮನ ಮಾತು ಕೇಳಿದ್ದರೆ ವಿವೇಕ್​ ಸಾಯುತ್ತಲೇ ಇರಲಿಲ್ಲ..! ಮುಗಿಲುಮುಟ್ಟಿದೆ ಹೆತ್ತವ್ವನ ಆಕ್ರಂದನ

    ಆನಂದ್ ಸಿಂಗ್ ರಾಜೀನಾಮೆ ಹೈಡ್ರಾಮ: ಯಾವ ಒತ್ತಡಕ್ಕೂ ಸೊಪ್ಪು ಹಾಕದಿರಲು ಸಿಎಂಗೆ ಹೈಕಮಾಂಡ್​ ಸಲಹೆ

    ಬೆಂಗಳೂರಿನ ಮೆಟ್ರೋ ಪ್ರಯಾಣಿಕರೇ ಗಮನಿಸಿ, ಈ ಮಾರ್ಗದಲ್ಲಿ ಇಂದು-ನಾಳೆ ಮೆಟ್ರೋ ಸಂಚಾರ ಬಂದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts