More

    VIDEO| ಜೆಟ್​ ವಿಮಾನದಲ್ಲಿ ಹಾರಾಟ ನಡೆಸುವಾಗ ಆಕಸ್ಮಿಕವಾಗಿ ಹೊರ ಜಿಗಿದ ವ್ಯಕ್ತಿ: ಮುಂದೇನಾಯ್ತು ನೀವೇ ನೋಡಿ…

    ಪ್ಯಾರೀಸ್​: ಯುದ್ಧ ವಿಮಾನದಿಂದ ಆಕಸ್ಮಿಕವಾಗಿ ಫ್ರೆಂಚ್​ ವ್ಯಕ್ತಿಯೊಬ್ಬ ಹೊರಜಿಗಿದ ಪರಿಣಾಮ ಜೆಟ್​ ವಿಮಾನ ಲ್ಯಾಂಡ್​ ಆಗುವ ಮುನ್ನ ಆಗಸದಲ್ಲಿ ಗಿರಕಿ ಹೊಡೆದಂತಹ ಘಟನೆ ಫ್ರಾನ್ಸ್​ನಿಂದ ವರದಿಯಾಗಿದೆ.

    ಮಾಧ್ಯಮ ವರದಿಯ ಪ್ರಕಾರ ಹೆಸರೇಳದ ಫ್ರೆಂಚ್​ ವ್ಯಕ್ತಿಗಾಗಿ ಆತನ ಸಹೊದ್ಯೋಗಿಯೊಬ್ಬರು ಸರ್ಪ್ರೈಸ್​ ಜಾಲಿರೈಡ್ ಆಯೋಜಿಸಿದ್ದರು. ಜೆಟ್​ ವಿಮಾನವೇರಿದ್ದ ವ್ಯಕ್ತಿ 2500 ಅಡಿ ಎತ್ತರದಲ್ಲಿ ಹಾರಾಟ ನಡೆಸುವಾಗ ಗಾಬರಿಯಿಂದ ಇಜೆಕ್ಟ್​ ಬಟನ್​ ಒತ್ತಿದ್ದರಿಂದ ವಿಮಾನದಿಂದ ಹೊರಗೆ ಬಿದ್ದಿದ್ದಾರೆ. ಅದೃಷ್ಟವಶಾತ್ 64 ವರ್ಷದ ಹಿರಿಯ ವ್ಯಕ್ತಿ ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿದರೆ ಪ್ರಾಣಾಪಾಯಾದಿಂದ ಪಾರಾಗಿದ್ದಾರೆ.

    ಇತ್ತೀಚೆಗಷ್ಟೇ ಬ್ಯೂರೋ ಆಫ್​ ಎಂಕ್ವೈರಿ ಆ್ಯಂಡ್​ ಅನಾಲಿಸಿಸ್​ ಫಾರ್​ ಸಿವಿಲ್​ ಅವಿಯೇಷನ್​ ಸೇಫ್ಟಿ ಆಫ್​ ಫ್ರಾನ್​ ಬಿಡುಗಡೆ ಮಾಡಿದ ವರದಿ ಪ್ರಕಾರ ಈ ಘಟನೆ ಕಳೆದ ವರ್ಷ ಮಾರ್ಚ್​ನಲ್ಲಿ ನಡೆದಿದೆ. ಫ್ರೆಂಚ್​ ವ್ಯಕ್ತಿ ಸೇನಾ ಶಶ್ತ್ರಾಸ್ತ್ರ ಕಂಪನಿಯಲ್ಲಿ ಕಾರ್ಯನಿರ್ವಾಹಕರಾಗಿದ್ದರು. ಡಸ್ಸಾಲ್ಟ್​ ರಫೇಲ್​ ಬಿ ಯುದ್ಧ ವಿಮಾನದಲ್ಲಿ ಫ್ರೆಂಚ್​ ವ್ಯಕ್ತಿಗಾಗಿ ಆತನ ಸಹೋದ್ಯೋಗಿ ಸರ್ಪ್ರೈಸ್​ ಜಾಲಿರೈಡ್​ ಆಯೋಜಿಸಿದ್ದರು. ಆದರೆ, ಫ್ರೆಂಚ್​ ವ್ಯಕ್ತಿಗೆ ಮಿಲಿಟರಿ ವಿಮಾನದಲ್ಲಿ ಹಾರಾಡಿದ ಯಾವುದೇ ಅನುಭವ ಇರಲಿಲ್ಲ.

    ಹೀಗಿರುವಾಗ ಒಮ್ಮೆ ಸೇಂಟ್-ಡಿಜಿಯರ್ ವಾಯುನೆಲೆಗೆ ಬಂದಾಗ ಫ್ರೆಂಚ್​ ವ್ಯಕ್ತಿಗೆ ತನ್ನ ಸಹೋದ್ಯೋಗಿಯ ಪ್ಲ್ಯಾನ್​ ಗೊತ್ತಾಗಿದೆ. ಆ ಕ್ಷಣದಲ್ಲೇ ಒತ್ತಡಕ್ಕೂ ಒಳಗಾಗಿ ಆತನ ಹೃದಯ ನಿಮಿಷಕ್ಕೆ 120 ರಿಂದ 145ರ ಪ್ರಮಾಣದಲ್ಲಿ ವೇಗವಾಗಿ ಬಡಿದುಕೊಳ್ಳಲು ಆರಂಭಿಸುತ್ತದೆ. ಇತ್ತ ಸಹೋದ್ಯೋಗಿಯ ಒತ್ತಡದಿಂದ ವಿಮಾನ ಹಾರಾಟವನ್ನು ಮೊಟಕುಗೊಳಿಸಲು ಸಾಧ್ಯವಾಗುವುದಿಲ್ಲ.

    ಪೈಲಟ್​, ವಿಮಾನವನ್ನು ಹಾರಾಟ ನಡೆಸಲು ಮುಂದಾಗುತ್ತಿದ್ದಂತೆ ಭಯದಿಂದ ಕೆಲ ವಸ್ತವನ್ನು ಫ್ರೆಂಚ್​ ವ್ಯಕ್ತಿ ಭದ್ರವಾಗಿ ಹಿಡುಕೊಳ್ಳುತ್ತಾನೆ. ದುರಾದೃಷ್ಟವಶಾತ್​ ಕೊನೆಯಲ್ಲಿ ತಿಳಿದೋ, ತಿಳಿದೆಯೋ ಇಜೆಕ್ಟ್​ ಬಟನ್​ ಅನ್ನು ಒತ್ತಿಬಿಡುತ್ತಾನೆ. ತಕ್ಷಣದಿಂದ ವಿಮಾನದಿಂದ ಹೊರ ಜಿಗಿಯುವ ಆತ ಗಾಳಿಯಲ್ಲಿ ಹಾರಾಡುತ್ತಾ ನೆಲಕ್ಕೆ ಬೀಳುವಾಗ ರಕ್ಷಣೆಗಾಗಿ ಧರಿಸಿದ್ದ ಪ್ಯಾರಾಚೂಟ್​ ಆನ್​ ಆಗಿ ವಾಯುನೆಲೆ ಹತ್ತಿರದಲ್ಲಿ ಇಳಿಯುತ್ತಾನೆ. ಸಣ್ಣಪುಟ್ಟ ಗಾಯಗಳೊಂದಿಗೆ ಫ್ರೆಂಚ್​ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗುತ್ತಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. (ಏಜೆನ್ಸೀಸ್​)

    ದಕ್ಷಿಣ ಕಮಾಂಡ್​ನಲ್ಲಿ ತರಬೇತಿನಿರತ ಯೋಧರಿಗಾಗಿ ಸಂಚರಿಸಲಿವೆ ಯೋಧರ ಸ್ಪೆಷಲ್​ ರೈಲುಗಳು

    ಚೀನಾದೊಂದಿಗೆ ಸಂಬಂಧ ಕಡಿದುಕೊಂಡು ಆಸ್ಟ್ರೇಲಿಯಾದ ‘ಸಹೋದರಿ’ ಇದಕ್ಕೆ ಕಾರಣ ಏನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts