More

    ಚೀನಾದೊಂದಿಗೆ ಸಂಬಂಧ ಕಡಿದುಕೊಂಡ ಆಸ್ಟ್ರೇಲಿಯಾದ ಸಹೋದರಿ ಯಾರು ಗೊತ್ತಾ?

    ನವದೆಹಲಿ: ಕೋವಿಡ್​ 19 ಸೋಂಕಿನ ಜಾಗತಿಕ ರಾಜಧಾನಿ ಎನಿಸಿಕೊಂಡ ಚೀನಾ ಈಗ ಉಭಯ ಸಂಕಟಕ್ಕೆ ಸಿಲುಕಿಕೊಂಡಿದೆ. ಒಂದೆಡೆ ಸೋಂಕಿನ ಮಾಹಿತಿ ಬಚ್ಚಿಟ್ಟಿದ್ದಕ್ಕಾಗಿ ಜಗತ್ತಿನೆದುರು ಮಾನ ಕಳೆದುಕೊಂಡಿರುವ ಅದು ಈಗ ರಾಜತಾಂತ್ರಿಕವಾಗಿಯೂ ಹಿನ್ನಡೆಗೆ ಒಳಗಾಗುತ್ತಿದೆ.

    ಚೀನಾದ ಯುನಾನ್​ ಪ್ರಾಂತ್ಯದ ಕನ್​ಮಿಂಗ್​ ಜತೆ ಆಸ್ಟ್ರೇಲಿಯಾದ ವಾಗ್ಗಾ ವಗ್ಗಾ ನಗರ ಸಹೋದರಿ ನಗರವಾಗಿ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಚೀನಾದ ಕ್ಷಿ ಜಿನ್​ಪಿಂಗ್​ ಅವರ ಸರ್ವಾಧಿಕಾರಿ ಧೋರಣೆ ಜತೆಗೆ ಪ್ರಜಾಪ್ರಭುತ್ವ ವಿರೋಧಿ ನಿಲುವುಗಳಿಂದಾಗಿ ಚೀನಾದ ಕನ್​ಮಿಂಗ್​ ಜತೆಗಿನ ಸಹೋದರಿ ಸಂಬಂಧವನ್ನು ಕಡಿದುಕೊಂಡಿದೆ.

    ಈ ಬೆಳವಣಿಗೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾದಲ್ಲಿನ ಚೀನಾದ ರಾಯಭಾರಿ, ಸಹೋದರಿ ನಗರದ ಸಂಬಂಧ ಕಡಿದುಕೊಳ್ಳುವ ಬಗ್ಗೆ ವಾಗ್ಗಾ ವಗ್ಗಾ ನಗರದ ಕೌನ್ಸಿಲರ್​ಗಳು ಸರ್ವಸಮ್ಮತಿ ನಿರ್ಧಾರ ಕೈಗೊಂಡಿರುವುದು ಅನ್ಯಾಯ. ಜತೆಗೆ ಚೀನಾ ವಿರುದ್ಧ ಭಾರಿ ಟೀಕೆಗಳನ್ನು ಮಾಡಿದ್ದಾರೆ. ಇದೊಂದು ಏಕಪಕ್ಷೀಯ ನಿರ್ಧಾರ. ಇಂಥ ನಿರ್ಧಾರಗಳಿಂದ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ಹೇಳಿದ್ದಾರೆ.

    ಡೆಮಾಕ್ರಟಿಕ್​ ಲೇಬರ್​ ಪಾರ್ಟಿಯ ಮಾಜಿ ಅಧ್ಯಕ್ಷ ಹಾಗೂ ಕೌನ್ಸಿಲರ್​ ಪಾಲ್​ ಫನ್ನೆಲ್​, ಚೀನಾದ ಕನ್​ಮಿಂಗ್​ ಸಹೋದರಿ ಸಂಬಂಧ ಹಾಗೂ ಟೈಲಿಂಗ್​ ಹಾಗೂ ಜಿಯಾಗ್ಸು ಪ್ರಾಂತ್ಯದ ಜತೆಗಿನ ಸ್ನೇಹ ಸಂಬಂಧವನ್ನು ಕಡಿದುಕೊಳ್ಳುವ ಎರಡು ಮಹತ್ವದ ನಿರ್ಣಯಗಳನ್ನು ಕೌನ್ಸಿಲ್​ನಲ್ಲಿ ಮಂಡಿಸಿದ್ದರು. ಕೌನ್ಸಿಲರ್​ಗಳು ಪಕ್ಷಭೇದ ಮರೆತು, ಎರಡೂ ನಿರ್ಣಯಗಳನ್ನು ಸರ್ವಸಮ್ಮತವಾಗಿ ಬೆಂಬಲಿಸಿದರು ಎನ್ನಲಾಗಿದೆ.

    ಗುಟ್ಕಾ ತಿಂದು ರಸ್ತೆಯಲ್ಲಿ ಉಗುಳಿ, ಜೈಲು ಸೇರಿದರು… ಹೊಸ ನಿಯಮದನ್ವಯ ರಾಜಸ್ಥಾನದಲ್ಲಿ ಕಾರ್ಯಾಚರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts