More

    ಕರೊನಾ ಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿ ಜತೆ ದೀದಿಯದ್ದೂ ಫೋಟೋ!

    ಕೋಲ್ಕತ: ಕರೊನಾ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಕೂಡ ಮುದ್ರಣವಾಗುತ್ತದೆ. ಈ ವಿಚಾರಕ್ಕೆ ವಿರೋಧ ಪಕ್ಷಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಮಮತಾ ಬ್ಯಾನರ್ಜಿ ಅಧಿಕಾರವಿರುವ ಪಶ್ಚಿಮ ಬಂಗಾಳದಲ್ಲಿಯೂ ಈ ವಿಚಾರದಲ್ಲಿ ವಿರೋಧವೆದ್ದಿದ್ದು, ರಾಜ್ಯ ಸರ್ಕಾರ ಹೊಸ ಮಾರ್ಗ ಹುಡುಕಿಕೊಂಡಿದೆ. ಇನ್ನು ಮುಂದೆ ಕೇಂದ್ರದಿಂದ ಬಂದ ಲಸಿಕೆ ಪಡೆಯುವವರಿಗೆ ಮೋದಿ ಫೋಟೋ ಹಾಗೂ ರಾಜ್ಯ ಖರೀದಿಸಿರುವ ಲಸಿಕೆ ಪಡೆಯುವವರಿಗೆ ದೀದಿ ಫೋಟೋ ಇರುವ ಪ್ರಮಾಣ ಪತ್ರ ನೀಡಲಾಗುವುದು.

    ಮೋದಿ ಫೋಟೋ ಬದಲು ಮಮತಾ ಬ್ಯಾನರ್ಜಿ ಅವರ ಫೋಟೋ ಹಾಕಲಾಗುವುದು ಎಂದು ಹೇಳಲಾಗಿತ್ತು. ಆದರೆ ಇದಕ್ಕೆ ಬಿಜೆಪಿ ತಕರಾರು ತೆಗೆದಿತ್ತು. ಕೇಂದ್ರ ಸರ್ಕಾರ ಲಸಿಕೆ ಖರೀದಿಸಿ ರಾಜ್ಯಗಳಿಗೆ ವಿತರಿಸುತ್ತಿರುವಾಗ ಈ ರೀತಿ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿತ್ತು. ಇದೀಗ ಟಿಎಂಸಿ ಸ್ಪಷ್ಟನೆ ನೀಡಿದೆ. ಪ್ರಧಾನಿಯವರ ಫೋಟೋವನ್ನು ತೆಗೆದಯುವುದಿಲ್ಲ. ಹಾಗೆಂದು ರಾಜ್ಯಗಳು ಹಣ ಕೊಟ್ಟು ಖರೀದಿಸಿರುವ ಲಸಿಕೆಗೂ ಮೋದಿಯವರ ಹೆಸರು ಹೇಳಲಾಗುವುದಿಲ್ಲ ಎಂದು ತಿಳಿಸಿದೆ.

    ಕೇಂದ್ರವು ಲಸಿಕೆ ಖರೀದಿಸಿ ರಾಜ್ಯಕ್ಕೆ ಉಚಿತವಾಗಿ ವಿತರಿಸಿದೆ. ಅಂತಹ ಲಸಿಕೆಗಳನ್ನು ಪಡೆಯುವವರಿಗೆ ಮೋದಿಯವರ ಫೋಟೋ ಇರುವ ಪ್ರಮಾಣ ಪತ್ರವೇ ಬರಲಿದೆ. ಹಾಗೆಯೇ ರಾಜ್ಯ ಸರ್ಕಾರ ಕೂಡ ಔಷಧ ತಯಾರಕ ಸಂಸ್ಥೆಗಳಿಂದ ಲಸಿಕೆ ಖರೀದಿಸಿದೆ. ಅಂತಹ ಲಸಿಕೆಗೆ ಮಮತಾ ಬ್ಯಾನರ್ಜಿ ಅವರ ಫೋಟೋ ಇರುವ ಪ್ರಮಾಣ ಪತ್ರ ಸಿಗಲಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಫಿರ್ಹಾದ್ ಹಕೀಮ್ ತಿಳಿಸಿದ್ದಾರೆ. (ಏಜೆನ್ಸೀಸ್)

    ರಸ್ತೆಗಿಳಿದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ನಲಪಾಡ್​! ವಶಕ್ಕೆ ಪಡೆದ ಪೊಲೀಸರು

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts